Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಪಾಲ್ ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್ ನ 300 ಉದ್ಯೋಗಿಗಳಿಂದ ಸ್ವಯಂ ಪ್ರೇರಿತ ರಕ್ತದಾನ


ಮೈಸೂರು: ನಗರದ ಕೆ ಆರ್ ಎಸ್ ರಸ್ತೆಯಲ್ಲಿರುವ ಮೈಸೂರು ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್÷್ಸ ಸಂಸ್ಥೆಯ 45ನೇ ವರ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ 300ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ ಡಿ ನಾಗರಾಜನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಾರ್ಮಿಕರು ಹಾಗೂ ಮಾಲೀಕರು ಎಂಬ ಭೇದಭಾವವಿಲ್ಲ. ಸಂಸ್ಥೆಯ ಏಳಿಗೆಗಾಗಿ ದುಡಿಯುವವರೆಲ್ಲರೂ ಇಲ್ಲಿ ಮಾಲೀಕರೇ. ರಕ್ತದಾನದ ಸಾಮಾಜಿಕ ಕಾರ್ಯದ ಮೂಲಕ ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ನಮಗೆ ಖುಷಿ ತಂದಿದೆ. ಈ ನಿಮ್ಮ ಸಾಮಾಜಿಕ ಕಾರ್ಯ ಹೀಗೆ ಮುಂದುವರೆಯಲಿ, ಇನ್ನೊಬ್ಬರ ಜೀವಕ್ಕೆ ನೆರವಾಗುವ ಮೂಲಕ
ಸಾರ್ಥಕತೆ ಜೀವನ ಹೀಗೆ ಮುಂದುವರೆಸಿ ಎಂದು ಹೇಳಿದರು.
ನಂತರ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ನಗರದ ಪ್ರತಿಯೊಂದು ಕಾರ್ಖಾನೆಯ ಸಿಬ್ಬಂದಿಗಳು ಇಂತಹ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರೆ ಪೂರ್ಣವಾಗಿ ರಕ್ತದ ಕೊರತೆಯನ್ನು ಸಂಪೂರ್ಣವಾಗಿ ನೀಗಿಸಬಹುದು. ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯ ವೃದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಹೇಮಲತಾ, ಎಸ್ ಆರ್ ಪಾರ್ಥಸಾರಥಿ, ಸಿ ಎಮ್ ಡಿ ಅರುಣ್ ಕೃಷ್ಣನ್, ಪೊನ್ನಪ್ಪನ್, ನಾಗಭೂಷಣ್ , ಶರಶ್ಚಂದ್ರ ಶೆಟ್ಟಿ, ಹಾಗೂ ಎಲ್ಲಾ ಉನ್ನತ ಅಧಿಕಾರಿಗಳು, ವಿಭಾಗ ಮುಖ್ಯಸ್ಥರು, ಮತ್ತು ನೌಕರರು ಮೈಪಾಲ್ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.