
ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ನಗರದ ಚಾಮುಂಡಿಬೆಟ್ಟದ ಮೆಟ್ಟಲುಗಳ ಮೂಲಕ ತಾಯಿ ಚಾಮುಂಡೇಶ್ವರಿಯ ದರ್ಶನ ಆಗಮಿಸುವ ಹಿನ್ನೆಲೆಯಲ್ಲಿ ಮೆಟ್ಟಲುಗಳು ಹಾಗೂ ಗೋಪುರಗಳು ಸುಂದರ ಕಾಣಲು ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರು ಮೆಟ್ಟಲುಗಳಿಗೆ ಹಾಗೂ ಗೋಪುರಗಳಿಗೆ ಸುಣ್ಣ, ಬಣ್ಣ ಬಳಿಯುವ ಮೂಲಕ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ
ಅಧ್ಯಕ್ಷ ಯದುನಂದನ್ ಜಿ, ಭಕ್ತಾದಿಗಳು ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು, ಸ್ನೇಹಿತರಲ್ಲ ಸೇರಿ
ತಾಯಿ ಚಾಮುಂಡೇಶ್ವರಿ ಅಮ್ಮನ ಸೇವೆ ಮಾಡುವ ಮೂಲಕ ಒಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಿವನಾಯಕ್, ಕೃಷ್ಣ, ವೆಂಕಟೇಶ, ಪಾಪಣ್ಣ, ಧನು, ಮಾದೇಶ್ , ವೀರು, ಗಣೇಶ್, ಪಾಪಣ್ಣ, ಆಟೋ ಸ್ವಾಮಿ, ನಾಗೇಶ್ ಎಂ ಆರ್ ಹಾಗೂ ಇನ್ನಿತರರು ಹಾಜರಿದ್ದರು.