
ಮೈಸೂರು: ಸಮಾಜದ ಒಳಿತಿಗೆ ತಮ್ಮ ಸೇವೆ ಮುಡಿಪಾಗಿಟ್ಟು ಸಾವಿರಾರು ಜನರ ಆರೋಗ್ಯ ಕಾಪಾಡುವ ವೈದ್ಯರು ನಡೆದಾಡುವ ದೇವರಿದ್ದಂತೆ ಎಂದು ಸಮಾಜ ಸೇವಕಿ ವಿಜಯಲಕ್ಷಿ÷್ಮ ಅಯ್ಯಂಗಾರ್ ಹೇಳಿದರು.
ವೈದ್ಯರ ದಿನಾಚರಣೆ ಪ್ರಯುಕ್ತ ಕೆಎಂಪಿಕೆ ಟ್ರಸ್ಟ್ ವತಿಯಿಂದ ಜಯನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ವೈದ್ಯರ ಸೇವೆ ಅವಿಸ್ಮರಣೆಯ, ಆಧುನಿಕ ಜೀವನ ಪದ್ಧತಿಯಲ್ಲಿ ಎಲ್ಲರೂ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ವೈದ್ಯೆ ಡಾ. ರೇಖಾ ಅರುಣ್, ಭಾರತ ರತ್ನ ಡಾ.ಬಿದನ್ ಚಂದ್ರರಾಯ್ ಅವರ ಹುಟ್ಟಿದ ದಿನದಂದು ವೈದ್ಯರ ದಿನಾಚರಣೆ ಆಚರಿಸುತ್ತೇವೆ. ಪ್ರತಿಯೊಬ್ಬ ವೈದ್ಯರಿಗೂ ಡಾ. ಬಿದನ್ ಚಂದ್ರರಾಯ್ ರವರ ಸೇವಾ ಕೊಡುಗೆ ಮಾದರಿಯಾಗುತ್ತದೆ. ಪಶ್ಚಿಮ ಬಂಗಾಳದ 2ನೇ ಮುಖ್ಯಮಾಂತ್ರಿಯಾಗಿಯೂ ಸಹ ಸೇವೆ ಸಲ್ಲಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣರಾದರ ಎಂದು ತಿಳಿಸಿದರು.
ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಂಪಾದಿಸಬೇಕು ಎಂದರೆ, ಉತ್ತಮ ಆರೋಗ್ಯವಿದ್ದರೆ ಮಾತ್ರ ಸಾಧ್ಯ. ಅದಕ್ಕಾಗಿಯೇ ಆರೋಗ್ಯವೇ ಭಾಗ್ಯ ಎಂದು ಋಷಿಮುನಿಗಳು ಹೇಳಿದ್ದಾರೆ ಎಂದರು,
ಇದೇ ಸಂದರ್ಭದಲ್ಲಿ ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,ಎಸ್.ಎನ್.ರಾಜೇಶ್, ಗಾಯಕ ಗುರುರಾಜ್,ಕೆ ಎಂ ಪಿ ಕೆ ಟ್ರಸ್ಟ್ ಉಪಾಧ್ಯಕ್ಷ ರಾಕೇಶ್,ಮುಖ್ಯ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕ ಸುಜ್ಞಾನಮೂರ್ತಿ ಮತ್ತಿತರರು ಹಾಜರಿದ್ದರು.