Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ
*ಲಕ್ಷಿö್ಮ ಅಲಂಕಾರದಲ್ಲಿ ಕಂಗೊಳಿಸಿದ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ನಗರದ ಚಾಮುಂಡಿಬೆಟ್ಟದಲ್ಲಿ ನೆಲೆನಿಂತಿರುವ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತು
ಮುAಜಾಬೆ ಜಾವ 4 ಗಂಟೆಯಿAದಲೇ ತುಂತುರು ಮಳೆ ಹನಿ ನಡುವೆ ಮೈ ಕೊರೆಯುವ ಚಳಿ ಗಾಳಿಯನ್ನೂ ಲೆಕ್ಕಿಸದೆ ಬೆಟ್ಟಕ್ಕೆ ವಿವಿಧೆಡೆಯಿಂದ ಧಾವಿಸಿ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನಕ್ಕಾಗಿ ಕಾದು ಕುಳಿತರು.ಎಲ್ಲೆಲ್ಲೂ ಜೈ ಚಾಮುಂಡೇಶ್ವರಿ, ಅಮ್ಮಾ ತಾಯೇ ಎಂಬ ಘೋಷಣೆಗಳು ಮೊಳಗಿದವು. ಕೆಲವರು ದೇವಸ್ಥಾನದ ಬಾಗಿಲು ತೆಗೆಯುವ ತನಕ ಚಾಮುಂಡೇಶ್ವರಿಯ ಕುರಿತ ಭಕ್ತಿ ಗೀತೆಗಳನ್ನು ತನ್ಮಯರಾಗಿ ಹಾಡಿದರು.
ದೇವಾಲಯದ ಮುಂಭಾಗದ ದ್ವಾರದಲ್ಲಿ, ಗರ್ಭಗುಡಿ ಸೇರಿದಂತೆ ದೇವಾಲಯದ ಆವರಣದಲ್ಲಿ ವಿವಿಧ ರೀತಿಯ ಹೂವು ಮತ್ತು ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು.
ಆಷಾಢ ಮಾಸದ ಮೊದಲ ಶುಕ್ರವಾರ ಮುಂಜಾನೆಯಿAದಲೇ ಚಾಮುಂಡೇಶ್ವರಿಗೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಸ್ಭೆರಿದಂತೆ ವಿವಿಧ ಅಭಿಷೇಕಗಳನ್ನು ವೇದ, ಮಂತ್ರಗಳ ಪಠಣದೊಂದಿಗೆ ನೆರವೇರಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ
ಚಾಮುಂಡಿ ತಾಯಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದುಬಾರಿ ಬೆಲೆಯ ಹಸಿರು ರೇಷ್ಮೆ ಸೀರೆಯನ್ನು ನೀಡಿದ್ದು, ಆ ರೇಷ್ಮೆ ಸೀರೆಯನ್ನು ಉಡಿಸಿ, ವಿವಿಧ ಪುಷ್ಪಗಳಿಂದ ಲಕ್ಷಿö್ಮ ಅಲಂಕಾರ ಮಾಡಲಾಯಿತುರೀ ವಿಶೇಷ ಅಲಂಕಾರದಲ್ಲಿ ಬೆಟ್ಟದ ತಾಯಿ ಚಾಮುಂಡೇಶ್ವರಿ ವಿಶೇಷವಾಗಿ ಕಂಗೊಳಿಸಿದರು. ಲಕ್ಷಾಂತರ ಭಕ್ತರು ಕಣ್ಮನ ತುಂಬಿಕೊAಡರು.
ವಿವಿಧ ಬಗೆಯ ತಾಜಾ ಹೂಗಳು, ಹಣ್ಣುಗಳು ಮತ್ತು ಅಲಂಕಾರಿಕ ವಸ್ತುಗಳಿಂದ ಗರ್ಭಗುಡಿ, ದೇವಸ್ಥಾನ ಹಾಗೂ ಏಳು ಮಹಡಿಯ ಗೋಪುರಕ್ಕೆ ಮಾಡಿದ್ದ ಅಲಂಕಾರ ಎಲ್ಲರನ್ನ ಆಕರ್ಷಿಸಿತು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್‌ಸಿಂಹ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಚಿತ್ರ ನಟ ದರ್ಶನ್ ಪತ್ನಿ ವಿಜಯಲಕ್ಷಿö್ಮ, ಕೇಂದ್ರ ಸಚಿವ ವಿ.ಸೋಮಣ್ಣ ಸ್ಭೆರಿದಂತೆ ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದೇಗುಲಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಂದು ರೈತರ ಬದುಕು ಸಮೃದ್ಧಿಯಾಗಲಿ, ರೋಗ-ರುಜಿನ ಇಲ್ಲದೆ ಜನರು ಸುಖವಾಗಿರಲಿ ಎಂದು ಬೆಟ್ಟದ ತಾಯಿಯಲ್ಲಿ ಮೊರೆ ಇಟ್ಟರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್, “ಆಷಾಡ ಮಾಸವು ಶಕ್ತಿ ದೇವತೆಗ್ಳ ಆರಾಧನೆಗೆ ಅತ್ಯಂತ ಪವಿತ್ರವಾದ ಮಾಸ. ಈ ತಿಂಗಳ ನಾಲ್ಕು ಶುಕ್ರವಾರಗಳೂ ತಾಯಿ ಚಾಮುಂಡೇಶ್ವರಿಗೆ ವಿಶೇಷವಾಗಿ ಲಕ್ಷಿ÷್ಮÃ ಅಲಂಕಾರ ಮಾಡಲಾಗುತ್ತದೆ. ಭಕ್ತರು ವ್ರತ, ಪೂಜೆ, ದಾನ-ಧರ್ಮ ಮಾಡಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ತಾಯಿ ಎಲ್ಲರ ಕೋರಿಕೆಯನ್ನು ಈಡೇರಿಸುತ್ತಾಳೆ ಎಂದು ತಿಳಿಸಿದರು.
ಹಿಂದೂ ಧರ್ಮದಲ್ಲಿ ಆಷಾಡ ಮಾಸಕ್ಕೆ ವಿಶೇಷ ಸ್ಥಾನವಿದೆ. ಈ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಹಿಳೆಯರು ವಿಶೇಷವಾಗಿ ವ್ರತಾಚರಣೆ ಮಾಡಿ ಕುಟುಂಬದ ಸುಖ-ಶಾಂತಿಗಾಗಿ ಪ್ರಾರ್ಥಿಸುತ್ತಾರೆ. ಮೈಸೂರಿನ ಚಾಮುಂಡಿ ಬೆಟ್ಟ ಮಾತ್ರವಲ್ಲ, ರಾಜ್ಯದ ಎಲ್ಲಾ ಶಕ್ತಿ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರುತ್ತದೆ ಎಂದು ಹೇಳಿದರು.
ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಡದ ನಾಲ್ಕು ಶುಕ್ರವಾರಗಳೂ ವಿವಿಧ ಅಲಂಕಾರಗಳು ಇರುತ್ತವೆ. ಮೊದಲ ಶುಕ್ರವಾರ ಲಕ್ಷಿ÷್ಮÃ ಅಲಂಕಾರ, ಎರಡನೇ ಶುಕ್ರವಾರ ಸರಸ್ವತಿ ಅಲಂಕಾರ, ಮೂರನೇ ಶುಕ್ರವಾರ ದುರ್ಗಾ ಅಲಂಕಾರ ಮತ್ತು ನಾಲ್ಕನೇ ಶುಕ್ರವಾರ ಮಹಿಷಾಸುರ ಮರ್ದಿನಿ ಅಲಂಕಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ತಿಂಗಳಾದ್ಯAತ ದೇಶಾದ್ಯಂತ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.
ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮತ್ತು ದೇವಸ್ಥಾನ ಆಡಳಿತ ಮಂಡಳಿ ಅಚ್ಚುಕಟ್ಟಾದ ಸಿದ್ಧತೆಗಳನ್ನು ಮಾಡಿದೆ. ಬೆಟ್ಟದ ತಪ್ಪಲಿನಿಂದ ದೇಗುಲದವರೆಗೆ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳು, ಪ್ರಸಾದ ವಿತರಣಾ ಕೇಂದ್ರಗಳು, ವೈದ್ಯಕೀಯ ತುರ್ತು ಸೇವಾ ಘಟಕಗಳನ್ನು ಸ್ಥಾಪಿಸಲಾಗಿದೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಿರುವುದು ವಿಶೇಷ.
ನೂಕು-ನುಗ್ಗಲು ಉಂಟಾಗದAತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು. ಡ್ರೋನ್ ಕ್ಯಾಮೆರಾಗಳ ಮೂಲಕ ಭದ್ರತಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಲಾಯಿತು. 500ಕ್ಕೂ ಹೆಚ್ಚು ಪೊಲೀಸರು, ಹೋಂ ಗಾರ್ಡ್ಗಳು ಮತ್ತು ಸ್ವಯಂಸೇವಕರು ಭಕ್ತರಿಗೆ ಮಾರ್ಗದರ್ಶನ ನೀಡಿದರು. ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿತ್ತು. ಕೆ.ಎಸ್.ಆರ್.ಟಿ.ಸಿ ಕೂಡ ಹೆಚ್ಚುವರಿ ಬಸ್‌ಗಳನ್ನು ಓಡಿಸಿತು.
ಮೈಸೂರು ಮಾತ್ರವಲ್ಲ, ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಯ ತಮಿಳುನಾಡು, ಕೇರಳ ಮತ್ತು ಆಂಧ್ರದಿAದಲೂ ಭಕ್ತರು ಆಗಮಿಸಿದ್ದರು.
ದೇಗುಲದ ಸುತ್ತಮುತ್ತ ಹೂವು, ಪ್ರಸಾದ, ಪೂಜಾ ಸಾಮಗ್ರಿ ಮಾರಾಟ ಮಾಡುವ ಅಂಗಡಿಗಳು ಕೂಡ ತುಂಬಿ ತುಳುಕುತ್ತಿದ್ದವು. ಸ್ಥಳೀಯ ವ್ಯಾಪಾರಿಗಳಿಗೆ ಇದು ಭರ್ಜರಿ ವ್ಯಾಪಾರ.

ರಾತ್ರಿಯವರೆಗೂ ದರ್ಶನ: ಭಕ್ತರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ದೇವಸ್ಥಾನ ಆಡಳಿತ ಮಂಡಳಿ ಇಂದು ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ನೀಡಿದೆ. ಸಂಜೆ ಮಹಾಮಂಗಳಾರತಿ ಮತ್ತು ವಿಶೇಷ ಅಲಂಕಾರದ ನಂತರವೂ ಭಕ್ತರು ತಾಯಿಯನ್ನು ಕಣ್ತುಂಬಿಕೊAಡರು.
ಒಟ್ಟಾರೆಯಾಗಿ ಆಷಾಡ ಮೊದಲ ಶುಕ್ರವಾರ ಮೈಸೂರು ನಗರದ ವಿವಿಧೆಡೆಯಲ್ಲೂ ವಿವಿಧ ಸಂಘ, ಸಂಸ್ಥೆಗಳಿAದ ಚಾಮುಂಡೇಶ್ವರಿಯನ್ನು ಪೂಜಿಸಿ, ಪ್ರಸಾದವನ್ನು ವಿತರಿಸಲಾಯಿತು. ಮೈಸೂರು ನಗರ ಹಾಗೂ ಚಾಮುಂಡಿ ಬೆಟ್ಟ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿAದ ಕೂಡಿತ್ತು.

ನಿಯಮ ಪಾಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಚಾಮುಂಡೇಶ್ವರಿಯ ದರ್ಶನವೇ ಸಿಗಲಿಲ್ಲ !
ಮೈಸೂರು; ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ವಿವಿಐಪಿ, ವಿಐಪಿಗಳಿಗೆ ದರ್ಶನಕ್ಕಾಗಿ ನಿಗದಿಪಡಿಸಿದ್ದ ಸಮಯದ ಅವಧಿ ಮೀರಿದ್ದು. ಮುಂಜಾನೆ 5 ರಿಂದ ಬೆಳಗ್ಗೆ 9ರ ತನಕ ಮಾತ್ರ ಗಣ್ಯರು, ಅತಿ ಗಣ್ಯರಿಗೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ಬೆಳಗ್ಗೆ 10.30ಕ್ಕೆ ಬೆಟ್ಟಕ್ಕೆ ಬಂದರು. ಆಗಾಗಲೇ U್ಪಣ್ಯರ ದರ್ಶನದ ಸಮಯ ಮೀರಿ ಹೋಗಿತ್ತು. ಸಚಿವರಾದರೂ ನಿಯಮವನ್ನು ಪಾಲಿಸಿದರು. ಹಾಗಾಗಿ ಅವರಿಗೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಆಗಲಿಲ್ಲ. ಅವರ ಬೆಂಬಲಿಗರಿಗೂ ಸಾಧ್ಯವಾಗಲಿಲ್ಲ. ಅಧಿಕಾರವನ್ನು ಬಳಸಿ ಚಾಮುಂಡೇಶ್ವರಿಯ ದರ್ಶನ ಪಡೆಯುವ ಅವಕಾಶವಿದ್ದರೂ ತಾವೇ ಜಿಲ್ಲಾಡಳಿತದೊಂದಿಗೆ ಹಾಕಿದ್ದ ನಿರ್ಬಂಧವನ್ನು ಮುರಿಯಲು ಹೋಗದೆ ಅದನ್ನು ಪಾಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.