Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಓದುವ ಹವ್ಯಾಸ ನಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗುತ್ತದೆಪ್ರಮತಿಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ


ಮೈಸೂರು; ಇಲ್ಲಿನ ಕುವೆಂಪುನಗರದ ಪ್ರಮತಿ ಹಿಲ್‌ವ್ಯೂ ಅಕಾಡೆಮಿಯ ಶಾಲಾ ಆವರಣದಲ್ಲಿ ವಿದ್ಯಾರ್ಥಿ ನಾಯಕರ
ಪದಗ್ರಹಣ ಸಮಾರಂಭ ನಡೆಯಿತು. ವಾಯುಪಡೆಯ ಆಯ್ಕೆ ಮಂಡಳಿಯ (ಏರ್‌ಫರ‍್ಸ್ ಸೆಲೆಕ್ಷನ್
ಬೋರ್ಡ್ನ) ಗ್ರೂಪ್ ಕ್ಯಾಪ್ಟನ್ ನವಲ್ ಸೈನಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ
ಆಯ್ಕೆಯಾದ ನಾಯಕ – ನಾಯಕಿಯರಿಗೆ ಬ್ಯಾಡ್ಜ್ ಹಾಗು ಶಾಲಾ ಧ್ವಜ ನೀಡಿ ಗೌರವಿಸಿದರು.
ಬಳಿಕ ಮಾತನಾಡಿ ಶಾಲೆಯ ನಾಯಕತ್ವದ ಧ್ವಜ ಹಿಡಿದ ಕೈಗಳು ಮುಂದಿನ ದಿನಗಳಲ್ಲಿ ಭಾರತದ ತ್ರಿವರ್ಣ ಧ್ವಜ ಎತ್ತಿಹಿಡಿಯುವಂತಾಗಲಿ ಎಂದು ಶುಭ ಹಾರೈಸಿದರು. ಉತ್ತಮ ನಾಯಕ ಉತ್ತಮ ಓದುಗಾರನಾಗಿರಬೇಕು. ಓದುವ ಹವ್ಯಾಸ ನಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗುತ್ತದೆ.'' ಎಂದು ಕಿವಿಮಾತು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಮಾತನಾಡಿ, ನಾಯಕನಾದವನು ಸದಾ ಕರ್ತವ್ಯದಿಂದ, ಶಿಸ್ತಿನ ಗುಣಗಳಿಂದ ಪ್ರತಿಬಿಂಬದAತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಾ, ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಬೇಕು. ನಾಯಕತ್ವದಿಂದ ಹೊಸ ಪ್ರೇರಣ ಪಡೆದು, ಸಹಾನುಭೂತಿ ಗುಣಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು. ಶಿಸ್ತು ಮತ್ತು ಸಂಯಮದಿAದ
ಅವಕಾಶಗಳನ್ನು ಗಳಿಸಿ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಪಡೆಯಬೇಕು” ಎಂದು
ಹೇಳಿದರು.
ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ಗಳನ್ನು ತೊಡಿಸಿ, ಪ್ರತಿಜ್ಞಾವಿಧಿಯನ್ನು ಬೋಧಿಸಿ ಜವಾಬ್ದಾರಿಯನ್ನು ವಹಿಸಲಾಯಿತು.
ಈ ವೇಳೆ ಪ್ರಮತಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಫಣಿರಾಜ್, ಕಾಲೇಜು ಪ್ರಾಂಶುಪಾಲ ಸಿ.ಎಸ್ ಸುದರ್ಶನ, ಶಾಲಾ ಪ್ರಾಂಶುಪಾಲರಾದ ಜರಿತಾ ವಿ.ಆರ್, ಶಾಲಾ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಉಪಸ್ಥಿತರಿದ್ದರು.