
ಮೈಸೂರು: ಮುಂಬರುವ ನಗರಪಾಲಿಕೆ ಚುನಾವಣೆಯಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಇಂದಿನಿಂದಲೇ ಸಂಘಟಿತರಾಗೋಣ ಎಂದು ಮಹಾನಗರಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು ತಿಳಿಸಿದರು.
ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.20ರ ಅಧ್ಯಕ್ಷ, ಉಪಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. ಜಾತ್ಯಾತೀತ ಜನತಾದಳ ಪಕ್ಷ ಜನರ ಸಾಮಾನ್ಯರಿಗೆ ನೇರವಾಗಿ ಸಿಗುವ ಪಕ್ಷವಾಗಿದೆ. ಅದರಲ್ಲೂ ಚಾಮರಾಜ ಕ್ಷೇತ್ರದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಜತೆಗೆ 65 ವಾರ್ಡ್ ನಲ್ಲಿ ಶೇ.30ರಷ್ಟು ಮೀಸಲಾತಿ ಜಾರಿ ಸೇರಿ ಬರೋಬ್ಬರಿ ಅತಿಹೆಚ್ಚು ಮಹಿಳಾ ಸದಸ್ಯರೇ ಆಯ್ಕೆಯಾಗಿದ್ದಾರೆ. ರಾಜಕೀಯದಲ್ಲಿ ಮಹಿಳಾ ಮೀಸಲು ಜಾರಿಗೊಳಿಸಿ ಕೀರ್ತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.
ಲಾಟರಿ ನಿಷೇಧ, ಸಾಲಮನ್ನಾ, ಸಾರಾಯಿ ನಿಷೇಧದಂತಹ ಸಾಕಷ್ಟು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು. ಇದೆಲ್ಲವನ್ನೂ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಜತೆಗೆ ಪ್ರತಿ ವಾರ್ಡ್ ನಲ್ಲೂ ಹೆಚ್ಚು ಸದಸ್ಯರ ನೊಂದಣಿ ಮಾಡಿಸುವ ಮೂಲಕ ಜೆಡಿಎಸ್ ಪಕ್ಷ ಬಲವರ್ಧನೆಗೊಳಿಸಬೇಕು. ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಎನ್ನದೇ ಯಾವುದೇ ಅಭ್ಯರ್ಥಿ ನಿಂತರೂ ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ದುಡಿಯಬೇಕು. ಮುಂದಿನ ದಿನಗಳಲ್ಲಿ ಬಹುದೊಡ್ಡ ಜೆಡಿಎಸ್ ಸಮಾವೇಶ ಮಾಡುವ ಮೂಲಕ ಮತ್ತಷ್ಟು ಸಂಘಟನೆಗೆ ಒತ್ತು ನೀಡಲಾಗುವುದು. ಕಳೆದ ಚುನಾವಣೆಯಲ್ಲಿ ಮಹಿಳೆಯರು ಗ್ಯಾರಂಟಿ ಹಣ ನಂಬಿ ಮತ ನೀಡಿದರು. ಈಗ ಅದು ಸಹ ಸರಿಯಾಗಿ ಬರುತ್ತಿಲ್ಲ. ಆದರೆ, ಕುಮಾರಣ್ಣ ಸೊಸೈಟಿ, ಮಹಿಳಾ ಸ್ವಸಹಾಯ ಸಂಘ ಸೇರಿ ಎಲ್ಲಾ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಅಂತಹ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದರು.
ವಿಜಯನಗರ ಭಾಗದಲ್ಲಿ ನೂತನ ಪದಾಧಿಕಾರಿಗಳ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ ಹೆಚ್ಚಿಸಿದೆ ಎಂದು ಹೇಳಿದರು. ಇದೇ ವೇಳೆ ವಾರ್ಡ್ 20ರ ಅಧ್ಯಕ್ಷರಾಗಿ ಪುಣ್ಯಕೋಟಿ ಹನುಮಂತೇಶ್, ಉಪಾಧ್ಯಕ್ಷರಾಗಿ ಎಸ್.ದೇವರಾಜು ಅಧಿಕಾರ ಸ್ವೀಕರಿಸಿದರು. ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿ ಎಲ್ ಎ 1 ಪಾಲ್ಕನ್ ಬೋರೇಗೌಡ, ಜೆಡಿಎಸ್ ಮುಖಂಡ ಸಿದ್ದೇಗೌಡ, ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ದೇವರಾಜ್, ವಿಜಯನಗರ2ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಾರ್ಯದರ್ಶಿ ಪಾಪಣ್ಣ ಗೌಡ, ನಿರ್ದೇಶಕರಾದ ಮಂಚೇಗೌಡ, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಖಜಾಂಚಿ ಎನ್.ಎಲ್.ಶೇಖರ್,
ಮೈಸೂರು ನಿವಾಸಿ ಬಳಗದ ಅಧ್ಯಕ್ಷ ಬೋರಾಪುರ ಬಸವರಾಜು, ನಿರ್ದೇಶಕರಾದ ಸೋಂಪುರ ಪುಟ್ಟರಾಮು, ಡಿ.ಬನುಮಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹೇಮಣ್ಣಗೌಡ, ವಿಜಯನಗರ ಸೇವಾ ಟ್ರಸ್ಟ್ ನ ಅಧ್ಯಕ್ಷ ನವೀನ್, ಕಾರ್ಯದರ್ಶಿ ವಸಂತ್, ನಿರ್ದೇಶಕರಾದ ರಮೇಶ್, ಶಂಕರ್, ಸಿದ್ದರಾಮ, ಶ್ರೀನಿವಾಸ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಶಿವಪ್ರಕಾಶ್, ಪಡುವಾರಳ್ಳಿ ಗ್ರಾಮದ ಟ್ರಸ್ಟ್ ನಿರ್ದೇಶಕ ಲೋಕೇಶ್ವರ್, ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶಿವೇಗೌಡ, ಪ್ರೊ.ಲಿಂಗೇಗೌಡ, ಶ್ರೀನಿವಾಸ್, ಚಿನ್ನುಕುರಳಿ ಗುತ್ತಿಗೆದಾರ ರಮೇಶ್, ಮಹೇಶ್, ಮಹಿಳೆಯರಾದ ಆಶಾ ಹನುಮಂತೇಶ್, ಗೀತಾ ಶಿವು, ಸವಿತಾ ಸಂಪತ್ತು ಇನ್ನಿತರರು ಇದ್ದರು