
ಮೈಸೂರು: ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮತ್ತು ಅವರ ಆಪ್ತಸಹಾಯಕ ಶಿವಕುಮಾರ್ ಲಂಚ ಪಡೆಯುವಾಗ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಸ.ನಂ.17/26ರ 4 ಎಕರೆ 20 ಗುಂಟೆ ಭೂಮಿಗೆ ಸಂಬAಧಿಸಿದ ಪ್ರಕರಣದ ವಿಚಾರಣೆ ನಡೆಯುತಿತ್ತು. ಇದಕ್ಕೆ ಸಂಬAಧಿಸಿದAತೆ ಬೆಂಗಳೂರಿನ ನಿವಾಸಿ ಡಾ.ರೂಪಾ ಅವರ ಬಳಿ ಉಪವಿಭಾಗಧಿಕಾರಿ 10.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮೊದಲ ಕಂತಾಗಿ 5 ಲಕ್ಷ ತೆಗೆದುಕೊಂಡಿದ್ದರು.
2ನೇ ಕಂತು 5.50 ಲಕ್ಷವನ್ನು ಕೊಡುವಾಗ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿಯು ಹಣವನ್ನು ಮನೆಯಲ್ಲಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಕಾವ್ಯಾರಾಣಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ತಿಳಿಸಿದ್ದಾರೆ.