Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡೇಶ್ವರಿಯ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ


ಭಾರತ ಹಿಂದೂ ರಾಷ್ಟç ಆಗಬಾರದು ಎಂದಿರುವ ಯತೀಂದ್ರ ಸಿದ್ದರಾಮಯ್ಯನವರು ತಮ್ಮ ತಾಯಿ ಬಳಿ, ಧರ್ಮ, ಸಂಸ್ಸೃತಿಯನ್ನು ಕೇಳಿ ತಿಳಿಯಲಿ
ಮೈಸೂರು:
ಆಷಾಢ ಮಾಸದ ಕಡೆಯ ಶುಕ್ರವಾರವಾದ ಇಂದು ನಗರದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಆಷಾಡ ಶುಕ್ರವಾರಗಳ ಮಹತ್ವ ಹಾಗೂ ದೇವಿಯ ಅನುಗ್ರಹದ ಬಗ್ಗೆ ವಿವರಿಸಿದರು.
ಭಾರತ ಹಿಂದೂ ರಾಷ್ಟç ಆಗಬಾರದು ಎಂದು ಸಚಿವ ಡಾ.ಯತೀಂದ್ರ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸರಿಯಲ್ಲ. ಡಾ.ಯತೀಂದ್ರ ಅವರು ಮೊದಲು ತಮ್ಮ ತಾಯಿಯ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಲಿ. ನಾವು ಯಾರು? ನಮ್ಮ ಸಂಸ್ಕöÈತಿ ಯಾವುದು? ನಮ್ಮ ಧರ್ಮ ಯಾವುದು? ನಾವು ಯಾವ ಆಚರಣೆಗಳನ್ನು ಮಾಡುತ್ತೇವೆ ಎಂಬುದನ್ನು ಅವರನ್ನು ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿಯವರೇ ಮಗನಿಗೆ ಸೂಕ್ತವಾಗಿ ತಿಳಿಸಿ ಹೇಳುತ್ತಾರೆ ಎಂದರು.
ಈ ನೆಲದ ಸಂಸ್ಕöÈತಿ ಮತ್ತು ಧರ್ಮವನ್ನು ಇಲ್ಲಿನ ಮಹಾರಾಜರು ಪರಂಪರೆಯಿAದ ಉಳಿಸಿಕೊಂಡು ಬಂದಿದ್ದಾರೆ. ಇಂದು ಆಡಳಿತ ನಡೆಸುತ್ತಿರುವವರು ಸಹ ಅದೇ ಸ್ಥಾನದಲ್ಲಿದ್ದಾರೆ. ಈ ದೇಶದ ಸಂಸ್ಕöÈತಿ ಮತ್ತು ಧರ್ಮವನ್ನು ಕಾಪಾಡುವವರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಶಕ್ತಿ ಮತ್ತು ಆಶೀರ್ವಾದ ನೀಡಲಿ ಎಂದು ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲೀಟ್ ಆಗಿರುವುದು ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ನನ್ನ ಸ್ವಂತ ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತದ ಹಕ್ಕನ್ನು ಕಾಯ್ದುಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲೇ ಇರಲಿ, ಅವರು ಕನ್ನಡಿಗರೇ. ಎಲ್ಲಿದ್ದರೂ ಅವರು ಮತದಾರರಾಗಿ ಉಳಿಯಬೇಕು ಎಂದರು.