Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟೀಂ ಮೈಸೂರು ಹಸಿರು ಮೈಸೂರು ಅಭಿಯಾನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ


ಮೈಸೂರು; ಟೀಂ ಮೈಸೂರು ವತಿಯಿಂದ ಹಸಿರು ಮೈಸೂರು' ಅಭಿಯಾನದ ಅಂಗವಾಗಿ ನಗರದ ಗನ್ ಹೌಸ್ ಎದುರಿನಿಂದ ಪ್ರಾರಂಭಗೊಳ್ಳುವ ನಂಜನಗೂಡು ರಸ್ತೆಯಲ್ಲಿ ವಿವಿಧ ಜಾತಿಯ 31 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಟೀಂ ಮೈಸೂರು ತಂಡವು ಕಳೆದ ಹಲವು ವರ್ಷಗಳಿಂದ ಮೈಸೂರು ನಗರದಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅದರಲ್ಲೂಹಸಿರು ಮೈಸೂರು’ ಅಭಿಯಾನವನ್ನು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಬದ್ಧತೆಯಿಂದ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ನೆಟ್ಟ ಗಿಡಗಳ ಪಾಲನೆಗೂ ತಂಡ ಹೆಚ್ಚಿನ ಆದ್ಯತೆ ನೀಡುತ್ತಿದೆ. ಐದು ವರ್ಷಗಳ ಕಾಲ ಗಿಡಗಳಿಗೆ ನೀರುಣಿಸುವ ಜವಾಬ್ದಾರಿಯನ್ನು ವಹಿಸಿಕೊಂಡು, ಬೇಸಿಗೆಯಲ್ಲಿಯೂ ಅವುಗಳಿಗೆ ನೀರುಣಿಸಿ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ವಿಶೇಷವಾಗಿದೆ. ಇಂತಹ ಪರಿಸರ ಕಾಳಜಿಯ ಸಾಮಾಜಿಕ ಸಂಘಟನೆಗಳನ್ನು ಸಮಾಜ ಸದಾ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಬಿಜೆಪಿ ವಿಭಾಗ ಪ್ರಭಾರಿ ಸ್ವಾಮಿ ಮಾರಲಪುರ ಮಾತನಾಡಿ, ಟೀಂ ಮೈಸೂರು ವತಿಯಿಂದ `ಹಸಿರು ಮೈಸೂರು’ ಅಭಿಯಾನವನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ತಂಡದಲ್ಲಿ 25 ರಿಂದ 75 ವರ್ಷದವರೆಗಿನ ವಿವಿಧ ವಯೋಮಾನದವರು ಒಗ್ಗೂಡಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಟೀಂ ಮೈಸೂರಿನ ಗೋಕುಲ್ ಗೋವರ್ಧನ್, ಕಿರಣ್ ಜೈರಾಮ್ ಗೌಡ, ರಾಮಪ್ರಸಾದ್, ವಸಂತ್, ತ್ರಿಮೂರ್ತಿ, ಮನೋಹರ್, ಬಸವರಾಜ್ ಬಳ್ಳಾರಿ, ಬಾಲಕೃಷ್ಣ, ಹರೀಶ್ ಗೋಕುಲಂ, ಸಂತೋಷ್, ಕೃಷ್ಣ ಇಟ್ಟಿಗೆಗೂಡು, ಶೇಖರ್, ಕೃಷ್ಣ ಕೇಬಲ್, ಚಂದನ್, ಕೆಂಡಗAಡಸ್ವಾಮಿ,ಪ್ರಜ್ವಲ್, ಯಶಸ್,
ವರುಣ್ ಹಾಗೂ ನಂದಿನಿ, ಉಷಾ, ಭಾರತಿ ಕುಮಾರಿ ಕಲ್ಯಾಣಿ ಹಾಗೂ ಇನ್ನಿತರರು ಭಾಗವಹಿಸಿದ್ದರು.