
ಮೈಸೂರು: ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಮತ್ತು ಚಿರಾಗ್ ಇವೆಂಟ್ಸ್ ಸಹಯೋಗದಲ್ಲಿ ಅ. 12ರಂದು ನಗರದ ವಿನೋಬಾರಸ್ತೆಯ ಕಲಾಮಂದಿರದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ‘ಜಾನಕಿ ನಮನ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಾಯಕ ಸುಚೇತನ್ ರಂಗಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಎಸ್.ಜಾನಕಿ ಅವರು ಹಾಡಿರುವ ಜನಪ್ರಿಯ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. 20ಕ್ಕೂ ಹೆಚ್ಚು ಪಕ್ಕವಾದ್ಯ ಸಂಗೀತ ಕಲಾವಿದರು. 50ಕ್ಕೂ ಹೆಚ್ಚು ವಿವಿಧ ಅರ್ಕೆಸ್ಟಾç ತಂಡದ ಗಾಯಕ-ಗಾಯಕಿಯರು ಹಾಡುವರು. ‘ಮಾನಸಾ ಹೊಳ್ಳ, ಉಷಾ ಕೋಕಿಲಾ, ರಕ್ಷಾ ಅರವಿಂದ್, ಅಮೂಲ್ಯಾ, ರಶ್ಮಿ ಧರ್ಮೇಂದ್ರ, ಹಂಸಿನಿ, ದಿವ್ಯಾ ಪುರುಷೋತ್ತಮ್, ಮಹೇಂದರ್, ನಾನು ಸೇರಿದಂತೆ ಹಲವು ಮಂದಿ ಕೂಡ ಹಾಡಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ವಸಿಷ್ಠ ಸಿಂಹ, ಶಾಸಕರಾದ ಕೆ. ಹರೀಶ್ಗೌಡ, ಟಿ.ಎಸ್. ಶ್ರೀವತ್ಸ, ಜೆಡಿಎಸ್ ಮುಖಂಡ ಸಾ.ರಾ. ಮಹೇಶ್, ಕೆಪಿಸಿಸಿ ಸದಸ್ಯ ಎಚ್.ವಿ. ರಾಜೀವ್ ಪಾಲ್ಗೊಳ್ಳುವರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಿರಾಗ್ ಇವೆಂಟ್ಸ್ ವಿವೇಕ್, ಎಂಎಎ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ಗುರುದತ್, ನಿರೂಪಕ ಅಜಯ್ಶಾಸ್ತಿç, ಕಲಾವಿದರಾದ ರಾಘವೇಂದ್ರ ಪ್ರಸಾದ್, ಅಮೂಲ್ಯಾ, ಗಣೇಶ್ ಭಟ್, ಗಾಂಧಿನಗರ ಪ್ರದೀಪ್ ಇದ್ದರು.