
ಮೈಸೂರು; ಭಾರತದ ಮೊದಲ ಸೇನಾ ನಾಯಕರಾಗಿದ್ದ ಜನರಲ್ ಕೆಎಂ ಕಾರ್ಯಪ್ಪ ರವರ ಅಮೋಘ ಸೇವೆಯನ್ನು ಸ್ಮರಿಸುವುದು ಎಲ್ಲಾ ಭಾರತೀಯರ ಕರ್ತವ್ಯ ಎಂದು ಬಿಜೆಪಿ ಮುಖಂಡ ಹಾಗೂ ಚಿತ್ರ ನಟ ಎಸ್. ಜಯಪ್ರಕಾಶ್ (ಜೆಪಿ) ಹೇಳಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಘಟಕದಿಂದ ಗುರುವಾರ ನಗರದ ಮೆಟ್ರೋಪಲ್ ಸರ್ಕಲ್ ನಲ್ಲಿರುವ ಜನರಲ್ ಕೆ.ಎಂ.ಕಾರ್ಯಪರವರ ಪ್ರತಿಮೆಯನ್ನು ಶುಚಿಗೊಳಿಸಿ, ಮಾಲಾರ್ಪಣೆ ಮಾಡಿ, ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಾಗ ಮೊದಲ ಸೇನಾ ದಂಡನಾಯಕರಾಗಿ ನೇಮಕಗೊಂಡ ಜನರಲ್ ಕೆ.ಎಂ.ಕಾರ್ಯಪ್ಪನವರು ಅಕ್ಕಪಕ್ಕದಲ್ಲಿರುವ ಶತೃ ರಾಷöçಗಳ ಉಪಟಳವನ್ನು ಹಿಮ್ಮೆಟ್ಟಿಸಿ, ದೇಶ ರಕ್ಷಣೆಯನ್ನು ಮಾಡಿದರು. ಅವರು ರಾಷ್ಟç ರಕ್ಷಣೆಯ ಕೆಲಸ ಎಂದಿಗೂ ಮರೆಯಲಾಗದಂತೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಕಳೆದ ಮೂರು ದಿನಗಳಿಂದ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಕ್ಷದ ವತಿಯಿಂದ ದೇಶಕ್ಕಾಗಿ ಬಲಿದಾನ ಮಾಡಿದ ಉತ್ತಮ ಸೇವೆ ಸಲ್ಲಿಸಿದ್ದ ಎಲ್ಲಾ ಮಹನೀಯರುಗಳ ಪ್ರತಿಮೆಗಳನ್ನು ಶುಚಿಗೊಳಿಸಿ, ಮಾಲಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶಾಘ್ಲನೀಯವಾಗಿದೆ. ದೇಶದ ಎಲ್ಲಾ ಮಹಾಪುರುಷರ ಸ್ಮರಣೆ ಮಾಡುವುದು ಹಾಗೂ ಅವರ ಆದರ್ಶಗಳನ್ನು ತಾವೆಲ್ಲರೂ ಪಾಲನೆ ಮಾಡಲೇಬೇಕೆಂದು ತಿಳಿಸಿದರು.. ಕಾರ್ಯಕ್ರಮದಲ್ಲಿ ಬಿಜೆಪಿಯ ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ರಾಜೇಶ್ ರಾಮೇಗೌಡ, ಪುನೀತ್, ಜಯಣ್ಣ, ಸಚ್ಚಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭಾರತ್ ಸೇರಿದಂತೆ ಮುಂತಾದವರು ಹಾಜರಿದ್ದರು