Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಪರೂಪದ ನಾಣ್ಯ, ನೋಟು ಹಾಗೂ ಅಂಚೆ ಚೀಟಿಗಳ ಪ್ರದರ್ಶನ


ಮೈಸೂರು; ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ 80ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಒಂದು ದಿನದ ಅಪೂರ್ವ ನಾಣ್ಯ, ನೋಟು ಮತ್ತು ಅಂಚೆ ಚೀಟಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಡಿ.ಎಸ್. ಪ್ರತಿಮಾ ಪ್ರದರ್ಶನವನ್ನು ಉದ್ಘಾಟಿಸಿದರು. ಹುಣಸೂರಿನ ಅಪೂರ್ವ ನಾಣ್ಯ ಸಂಗ್ರಹಕಾರ ಪಿ ಕೆ ಕೇಶವಮೂರ್ತಿ ಅವರ ಸಹಕಾರದೊಂದಿಗೆ, 180ನೇ ಪ್ರದರ್ಶನದಲ್ಲಿ ಕ್ರಿಸ್ತಶಕ 1ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‌ಮಾರ್ಕ್ ನಾಣ್ಯಗಳು, ಗ್ರೀಕ್ ಮತ್ತು ರೋಮನ್‌ರ ಕಾಲದ ನಾಣ್ಯಗಳು ಹಾಗೆಯೇ ಪ್ರಾಚೀನ ಭಾರತವನ್ನಾಳಿದ ಕುಷಾಣರು, ಗುಪ್ತರು, ಶಾತವಾಹನರು, ಕದಂಬರು, ವಿಜಯನಗರ ಸಾಮ್ರಾಜ್ಯ ಮತ್ತು ಮೊಘಲ್ ಸಾಮ್ರಾಜ್ಯ ಸೇರಿದಂತೆ ಇನ್ನಿತರ ರಾಜಮನೆತನಗಳು ಹಾಗೂ ಸ್ವಾತಂತ್ರö್ಯ ಪೂರ್ವದ ಬ್ರಿಟಿಷರು, ಪೋರ್ಚುಗೀಸರು ಮತ್ತು ಸ್ವಾತಂತ್ರö್ಯ ನಂತರದ ಹಾಗೂ ಸ್ಮರಣಾರ್ಥ ಬಿಡುಗಡೆಯಾಗಿರುವ ವಿವಿಧ ಮುಖಬೆಲೆಯ ನೋಟುಗಳನ್ನು ಪ್ರದರ್ಶಿಸಲಾಯಿತು. ನೂರಾರು ದೇಶ–ವಿದೇಶಗಳ ವೈವಿಧ್ಯಮಯ ನಾಣ್ಯ-ನೋಟುಗಳು, ಮುದ್ರರಾಕ್ಷಸನ ಹಾವಳಿಯ ದೋಷವುಳ್ಳ ವಿಚಿತ್ರ ಆಕಾರದ ನಾಣ್ಯ ಹಾಗೂ ನೋಟುಗಳು ನೋಡುಗರಲ್ಲಿ ಕುತೂಹಲವನ್ನು ಹೆಚ್ಚಿಸುವಂತಿದ್ದವು. ಇತ್ತೀಚೆಗೆ ಬಿಡುಗಡೆಯಾಗಿರುವ ವಿವಿಧ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಪ್ರದರ್ಶನವು ವಿಶೇಷ ಆಕರ್ಷಣೆಯಾಗಿತ್ತು. ಇದೇ ಸಂದರ್ಭದಲ್ಲಿ ಹಿರೋಶಿಮಾ-ನಾಗಸಾಕಿ ದುರಂತಗಳನ್ನು ಸಾರುವ ನೈಜ ಚಿತ್ರಗಳ ಪ್ರದರ್ಶನವನ್ನು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಣ್ತುಂಬಿಕೊAಡರು.
ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷಿö್ಮ ಮುರಳೀಧರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆರ್ ರಮೇಶ್, ಶೈಕ್ಷಣಿಕ ಡೀನ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್., ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್. ತಿಮ್ಮೇಗೌಡ, ಇತಿಹಾಸ ವಿಭಾಗದ ಅಧ್ಯಾಪಕ ನಂದೀಶ್, ಕಾಲೇಜಿನ ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಭಾಗವಹಿಸಿದ್ದರು.
ಐತಿಹಾಸಿಕ ಮೌಲ್ಯವುಳ್ಳ ಈ ಪ್ರದರ್ಶನವು ಇತರೆ ವಿಷಯಗಳ ವಿದ್ಯಾರ್ಥಿಗಳನ್ನು ಸೆಳೆಯಿತು.