ಶೀಲ ಶಂಕಿಸಿ ಪತ್ನಿಯನ್ನು ಕೊಂದಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಮೈಸೂರು; ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ.
ಮೈಸೂರು ತಾಲ್ಲೂಕು, ಹೊಸಕಾಮನಕೊಪ್ಪಲು ಗ್ರಾಮದ ನಾಗೇಶ ಜೀವಾವಧಿ ಶಿಕ್ಷೆಗೆ ಒಳಗಾದವ. ಈತ ತನ್ನ ಮೊದಲನೇ ಹೆಂಡತಿ ರಾಜೇಶ್ವರಿ ಮೃತಪಟ್ಟ ನಂತರ ಮಮತಾಳನ್ನು 2ನೇ ಮದುವೆಯಾಗಿದ್ದು, ಆಕೆಯ ಶೀಲದ ಬಗ್ಗೆ ವಿನಾ: ಕಾರಣ ಸಂಶಯಪಟ್ಟು ಆಗಾಗ್ಗೆ ಗಲಾಟೆ ಮಾಡುತ್ತಿದ್ದು, ಕುಟುಂಬಸ್ಥರು ಬುದ್ದಿ ಹೇಳಿದರು ಸಹ ಕೇಳದೆ ದಿ:6-3-2020ರಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಮಮತಾಳು ಹೊಸಕಾಮನಕೊಪ್ಪಲು ಗ್ರಾಮದ ತನ್ನ ಮನೆಯ ಮುಂಭಾಗ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದಾಗ, ನಾಗೇಶ ಆಕೆಗೆ ಯಾರನ್ನು ನೋಡೋಕೆ ಇಷ್ಟು ಬೇಗ ಎದ್ದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಮಚ್ಚಿನಿಂದ ಮಮತಾಳ ಕುತ್ತಿಗೆಯ ಎಡಭಾಗ ಹಲ್ಲೆ ಮಾಡಿದ್ದು, ಆಕೆ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆಂದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿಯಾದ ಕೆ.ಜೀವನ್, ಆರೋಪಿಯ ವಿರುದ್ದ ಭಾ ದಂ ಸಂ ಕಲಂ 302, ರೀತ್ಯಾ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಕರೆತರುವಲ್ಲಿ ಇಲವಾಲ ಠಾಣೆಯ ಕೋರ್ಟ್ ಪೊಲೀಸ್ ರಮೇಶ್ ಶ್ರಮಿಸಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಡಗಂಡಿ ರವರು, ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷಾ÷್ಯಧಾರಗಳನ್ನು ಪರಿಶೀಲಿಸಿ, ನಾಗೇಶನಿಗೆ ಭಾ.ದಂ.ಸA ಕಲಂ 302 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 20,000 ರೂ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷಗಳ ಕಾಲ ಸಾದಾ ಶಿಕ್ಷೆ ವಿಧಿಸಿದ್ದು, ದಂಡದ 20,000 ರೂ ಹಣವನ್ನು ಮೃತಳ ಮಗನಿಗೆ ನೀಡುವಂತೆ ಆದೇಶಿಸಿ ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಭಿಯೋಜಕರಾದ ಬಿ.ಎಂ.ವೀಣಾ, ರವರು ಸರ್ಕಾರದ ಪರ ವಾದ ಮಂಡಿಸಿದ್ದರು.
--°C
Mysore, IN
Loading...