Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭಾರತ್ ಜೋಡೋ ನೋಂದಣಿಗೆ ಚಾಲನೆ


ಮೈಸೂರು; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯುವ ಶಕ್ತಿ ರಾಷ್ಟç ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್ ಜೋಡೋ ಯುವ ಸಂಘ ಸದಸ್ಯತ್ವ ನೋಂದಣಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ನಲ್ಲಿರುವ (ಕುರುಬರ ಹಳ್ಳಿ ಸರ್ಕಲ್ ಹತ್ತಿರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಮಹಾನಗರಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ ಮಾತನಾಡಿ, ಇಂದಿನ ಯುವ ಸಮುದಾಯವು ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ ಸಂಸ್ಕöÈತಿ ಮತ್ತು ಸಾಮಾಜಿಕ ಸಾಮರಸ್ಯ, ಕೌಶಲ್ಯ ಮತ್ತು ಯುವಸಬಲೀಕರಣ ಕ್ಷೇತ್ರಗಳಲ್ಲಿ ಯುವ ಸಮುದಾಯವು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ತಿಳಿಸಿಕೊಟ್ಟರು.
ಸಮುದಾಯದ ಯುವ ಸಮುದಾಯವು ಸರ್ಕಾರ ಮತ್ತು ಕಾರ್ಯಕ್ರಮದಡಿಯಲ್ಲಿ ಹೇಗೆ ಭಾಗವಹಿಸಬೇಕು, ಸಮಾಜದಲ್ಲಿ ಸಂವಿಧಾನ ಆಶಯಗಳಿಗೆ ಹೇಗೆ ಅನುಗುಣವಾಗಿ ಕೆಲಸ ಮಾಡಬೇಕು. ಸಾರ್ವಜನಿಕರಲ್ಲಿ ಬಾಲ್ಯ ವಿವಾಹಗಳ ಬಗ್ಗೆ ಜಾಗೃತಿ ಮೂಡಿಸುವುದು, ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕ್ರಮವಹಿಸುವುದು, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಹೀಗೆ ಸಮಾಜದಲ್ಲಿ ವಿಕಾಸಶೀಲ ಮತ್ತು ಸೌಹರ್ದಶೀಲವಾಗಿ ತೊಡಗಿಸಿಕೊಳ್ಳುವುದರ ಕುರಿತು ಯುವ ಸಮುದಾಯಕ್ಕೆ ಸೂಚಿಸಿದರು.
ಸರ್ಕಾರದ ಮಾರ್ಗದರ್ಶನದಂತೆ ಬಿಜೆವೈಎಸ್ ಪೋರ್ಟಲ್ ಅಥವಾ ಮೊಬೈಲ್ ಂಠಿಠಿ ಮೂಲಕ ಕ್ಯೂಆರ್ ಕೋಡ್ ಸ್ಕಾ÷್ಯನ್ ಮಾಡಿ 16 ವರ್ಷದಿಂದ 35 ವರ್ಷದವರೆಗಿನ ವಯೋಮಿತಿಯ ಕನಿಷ್ಟ 100 ಜನ ಸದಸ್ಯರಿರುವ ಯುವ ಸಂಘ ನಿರ್ಮಿಸಲು ಸಹಕರಿಸಬೇಕೆಂದು ಹಾಗೂ ಮೊಬೈಲ್ ಂಠಿಠಿ ಅನ್ನು ಯಾವ ರೀತಿ ಬಳಸಿ ಭಾರತ್ ಜೋಡೋ ಯುವಸಂಘದಲ್ಲಿ ಸೇರ್ಪಡೆಗೊಳ್ಳಬೇಕು ಎಂಬುದರ ಕುರಿತು ಅರಿವನ್ನು ಮೂಡಿಸಿದರು ಹಾಗೂ ಭಾರತ್ ಜೋಡೋ ನೋಂದಣಿಯನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಾಯದೇವಿ, ಪ್ರಾಧ್ಯಾಪಕರಾದ ಕುಮಾರ್, ಕೃಷ್ಣಗೌಡ ಮತ್ತು ಕಿರಣ್ ರಾವತ್ ಹಾಗೂ ಸಿಬ್ಬಂದಿಗಳಾದ ಕಂದಾಯಾಧಿಕಾರಿ ಜಾವದ್, ಕಂದಾಯ ಪರಿಶೀಲಕರಾದ ವರದರಾಜು, ಹನುಮಂತಪ್ಪ, ಪರಮೇಶ್ ಮತ್ತು ಉಮೇಶ್ ಹಾಜರಿದ್ದರು.