Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಜವಂಶಸ್ಥರ ಖಾಸಗಿ ದಸರಾ ಆಚರಣೆಗೆ ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ


*ಆನೆಗಳನ್ನು ಆಯ್ಕೆ ಮಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ಒಚಿದೆಡೆ ಜಿಲ್ಲಾಡಳಿತ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಯದುವಂಶದ ರಾಜ ವಂಶಸ್ಥರು ಖಾಸಗಿಯಾಗಿ ದಸರಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ. ಅವರ ಧಾರ್ಮಿಕ ಆಚರಣೆಯ ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆನೆಯನ್ನು ರಾಜಮಾತೆ ಪ್ರಮೋದದೇವಿ ಒಡೆಯರು ಇದೀಗ ಆಯ್ಕೆಮಾಡಿದ್ದಾರೆ.
ರಾಜ ವಂಶಸ್ಥರಾದ ಯದುವೀರ್ ಶ್ರೀಕಂಠದ ದತ್ತ ನರಸಿಂಹರಾಜ ಒಡೆಯರ್ ಅವರು ದಸರಾದ ನವರಾತ್ರಿ ಸಂದರ್ಭದಲ್ಲಿ ಧಾರ್ಮಿಕ ಮಹತ್ವವುಳ್ಳ ಚಿನ್ನದ ಸಿಂಹಾಸನಕ್ಕೆ ನವರಾತ್ರಿ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಸಿಂಹಾಸನ ಏರಿ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುವುದು ನಡೆಯುತ್ತಿರುವ ಸಂಪ್ರದಾಯ. ಜೊತೆಗೆ ಅರಮನೆಯ ರಾಜವಂಶಸ್ಥರು ನವರಾತ್ರಿ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ದಸರಾಗೆ ಬರುವ ಗಜಪಡೆಯ ಗಂಡು ಆನೆಗಳನ್ನು ಪಟ್ಟದ ಆನೆಯಾಗಿ ಆಯ್ಕೆ ಮಾಡಿಕೊಳ್ಳುವುದು ಸಂಪ್ರದಾಯ.
ಮೊದಲ ತಂಡದಲ್ಲಿ ಅರಮನೆ ಪ್ರವೇಶಿಸಿದ ಒಂಬತ್ತು ಗಜಪಡೆಗಳಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳನ್ನು ಪ್ರಮೋದಾದೇವಿ ಒಡೆಯರು ಅರಮನೆಯ ಆನೆಯ ಬಾಗಿಲಿನ ಮೂಲಕ ಸವಾರಿ ತೊಟ್ಟಿಗೆ ಕರೆಯಿಸಿಕೊಂಡು ಎಲ್ಲ ಆನೆಗಳನ್ನು ಪರಿಶೀಲನೆ ಮಾಡಿದ ಬಳಿಕ, ಬಲಭೀಮನಾದ ಶ್ರೀಕಂಠನನ್ನು ಪಟ್ಟದ ಆನೆಯಾಗಿ, ಏಕಲವ್ಯ ಆನೆಯನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿದರು. ಬಳಿಕ ಎಲ್ಲಾ ಆನೆಗಳಿಗೂ ಕಬ್ಬಿನ ಜಲ್ಲೆಗಳನ್ನು ನೀಡಿ ತಿನಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ರಾಜವಂಶಸ್ಥರ ಖಾಸಗಿ ದರ್ಬಾರಿಗೆ ಹಾಗೂ ಇತರ ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಮೋದಾದೇವಿ ಒಡೆಯರು ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕವಲ್ಯ ಆನೆಗಳನ್ನು ಆಯ್ಕೆ ಮಾಡಿಕೊಂಡರು ಎಂದು ತಿಳಿಸಿದರು.
ಪಟ್ಟದ ಆನೆ ಹಾಗೂ ನಿಶಾನೆ ಆನೆಯ ಕೆಲಸ : ಅರಮನೆಯ ಶರನವರಾತ್ರಿಯ ಪ್ರತಿದಿನ ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಆನೆಗಳನ್ನ ಬಳಸಿ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ರಾಜವಂಶಸ್ಥರು ಖಾಸಗಿ ದರ್ಬಾರು ನಡೆಸುತ್ತಾರೆ. ಈ ಸಂದರ್ಭದಲ್ಲಿ ಅರಮನೆಯ ಹೆಣ್ಣು ಆನೆಗಳನ್ನು ಹಾಗೂ ಒಂಟೆ, ಕುದುರೆ, ಹಸು ಬಳಸುತ್ತಾರೆ. ಆದರೆ ದಸರಾಕ್ಕೆ ಬಂದ ಗಂಡು ಆನೆಗಳನ್ನು ಪಟ್ಟದ ಆನೆ ಹಾಗೂ ನಿಶಾನೆ ಆನೆಯಾಗಿ ಬಳಸುವುದು ಸಂಪ್ರದಾಯ.
ಅರಮನೆಯ ಸಂಪ್ರದಾಯದAತೆ ರಾಜವಂಶಸ್ಥರು ಕೇವಲ ಹೆಣ್ಣು ಆನೆಗಳನ್ನು ಮಾತ್ರ ಸಾಕುತ್ತಾರೆ. ಅವರು ಗಂಡು ಆನೆಗಳನ್ನು ಸಾಕುವುದಿಲ್ಲ. ಈಗ ಅರಮನೆಯ ರಾಜವಂಶಸ್ಥರು ಎರಡು ಹೆಣ್ಣು ಆನೆ ಮಾತ್ರ ಸಾಕಿದ್ದು, ದಸರಾ ಸಂದರ್ಭದಲ್ಲಿ ಅರಮನೆಯ ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳಿಗೆ ದಸರಾ ಗಂಡು ಆನೆಗಳನ್ನು ಪಟ್ಟದ ಆನೆ ಹಾಗೂ ನಿಶಾನೆ ಆನೆಯಾಗಿ ಬಳಸುತ್ತಾರೆ. ಈ ಆನೆಗಳನ್ನು ಒಂಬತ್ತು ದಿನದ ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು, ಆಯುಧ ಪೂಜೆ ಹಾಗೂ ವಿಜಯ ದಶಮಿಯ ರಾಜವಂಶಸ್ಥರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ.