Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರಾಧಾಕೃಷ್ಣನ್ ಅವರ ಆದರ್ಶ ಶಿಕ್ಷಕತ್ವ ಇಂದಿನ ಶಿಕ್ಷಕರಿಗೆ ಪ್ರೇರಣೆಯಾಗಿದೆ; ಪ್ರೊ. ಎಂ. ನಂಜಯ್ಯ ಹೊಂಗನೂರು


ಮೈಸೂರು; ಇಂದಿನ ದಿನಗಳಲ್ಲಿ ಶಿಕ್ಷಕ ಮತ್ತು ಶಿಕ್ಷಣ ಅಪಾಯದ ಹಂಚಿನಲ್ಲಿದೆ. ಸರ್ಕಾರಗಳು ಶಿಕ್ಷಣಕ್ಕೆ ನೀಡಬೇಕಾದ ಸವಲತ್ತು ಮತ್ತು ಆದ್ಯತೆ ನೀಡದಿರುವುದರಿಂದ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರ ಸವಾಲುಗಳನ್ನು ಎದುರಿಸುತ್ತಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಂ.ನAಜಯ್ಯ ಹೊಂಗನೂರು ಕಳವಳ ವ್ಯಕ್ತಪಡಿಸಿದರು.
ಸಮರ್ಥನಂ ವಿಶೇಷ ಚೇತನರ ಸಂಸ್ಥೆ, ಮೈಸೂರು ಮತ್ತು ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಮಾನಸಗಂಗೋತ್ರಿಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಆಚರಣೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಧಾಕೃಷ್ಣನ್ ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ತತ್ವಶಾಸ್ತç ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ 1918 ಯಿಂದ 1921 ಸೇವೆ ಸಲ್ಲಿಸಿದ್ದರು. ಅವರು ಕೋಲ್ಕತ್ತಾಗೆ ವರ್ಗಾವಣೆಯಾಗಿ ತೆರಳುವಾಗ, ಮೈಸೂರಿನ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರು ಕುದುರೆ ಬಂಡಿಗೆ ಕುದುರೆಯನ್ನು ಕಟ್ಟದೆ, ತಾವೇ ಆ ಬಂಡಿಯನ್ನು ಎಳೆದುಕೊಂಡು ರೈಲ್ವೆ ಸ್ಟೇಷನ್‌ವರೆಗೆ ತಲುಪಿಸಿ ಬೀಳ್ಕೊಟ್ಟ ಪ್ರಸಂಗವು ಅವರ ಮೇಲಿದ್ದ ಗೌರವಕ್ಕೆ ಸಾಕ್ಷಿಯಾಗಿದೆ. ನಂತರದ ದಿನಗಳಲ್ಲಿ ದೇಶದ ಮೊದಲ ಉಪರಾಷ್ಟçಪತಿಯಾಗಿ, ಎರಡನೇ ರಾಷ್ಟçಪತಿಯಾಗಿ ಅವರು ಶಿಕ್ಷಕ ಸಮುದಾಯಕ್ಕೆ ಹಾಗೂ ದೇಶಕ್ಕೆ ದೊಡ್ಡ ಘನತೆಯನ್ನು ತಂದುಕೊಟ್ಟರು ಎಂದರು.
ಕೇವಲ ಜ್ಞಾನ ನೀಡುವುದಷ್ಟೇ ಅಲ್ಲದೆ, ಗೃಹಪಾಠ ಮತ್ತು ವಾರಾನ್ನ ಪದ್ಧತಿಯ ಮೂಲಕ ನಿರ್ಗತಿಕ ವಿದ್ಯಾರ್ಥಿಗಳಿಗೆ ಆಶ್ರಯ ಹಾಗೂ ಊಟ ನೀಡಿ ಪೋಷಿಸುತ್ತಿದ್ದ ಹಳೆಯ ಕಾಲದ ಶಿಕ್ಷಕರ ಕೊಡುಗೆಯನ್ನು ಸ್ಮರಿಸಲಾಯಿತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಂI) ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ನಿಜವಾದ ಶಿಕ್ಷಕರ ಅಸ್ತಿತ್ವಕ್ಕೆ ಆತಂಕ ಎದುರಾಗಬಹುದೇ ಎಂಬ ಕಳವಳ ವ್ಯಕ್ತಪಡಿಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮಗುವಿನ ಅಕ್ಷರಜ್ಞಾನ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಅವರಿಗೆ ಹೆಚ್ಚಿನ ವೇತನ, ಸೌಲಭ್ಯ ಮತ್ತು ಮಾನ್ಯತೆ ಸಿಗಬೇಕು ಎಂದು ಒತ್ತಾಯಿಸಲಾಯಿತು. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಬಸವ ಅಧ್ಯಯನ ಕೇಂದ್ರದ ಮೂಲಕ ಇಂತಹ ಸಂಸ್ಥೆಗಳ ಸಾಂಸ್ಕöÈತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ನಿವೃತ್ತ ಪ್ರಾಧ್ಯಾಪಕÀ ಪುಟ್ಟವೀರಪ್ಪ ಮಾತನಾಡಿ, ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಶ್ರೀಮಂತನಿಗೆ ವಿದೇಶಗಳಲ್ಲಿ ಗೌರವ ಕಡಿಮೆಯಾಗಬಹುದು, ಆದರೆ ಜ್ಞಾನಿಗೆ ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಗೌರವ ಸಿಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಉನ್ನತ ಹಂತಕ್ಕೇರಲು ಗುರುವಿನ ಮಾರ್ಗದರ್ಶನವೇ ಮುಖ್ಯ ಕಾರಣ ಎಂದು ತಿಳಿಸಿದರು.
ಮಗುವಿಗೆ ತಾಯಿ ಮೊದಲ ಗುರು, ತಂದೆ ಎರಡನೇ ಗುರು ಹಾಗೂ ಶಾಲೆಯ ಆಚಾರ್ಯರು ಮೂರನೇ ಗುರುವಾಗಿದ್ದು, ಈ ಮೂವರ ಕೊಡುಗೆ ಅಪಾರವಾದುದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗ ಮುಖ್ಯಸ್ಥ ಎಂ ಶಿವರಾಜು ವಹಿಸಿದ್ದರು. ಮುಖ್ಯೋಪಾಧ್ಯಾಯಾರಾದ ಬ್ರಮರಾಂಭ, ಸುಬ್ರಮಣಿ ರಾಜೇಂದ್ರ, ಮಂತೇಶ್, ಚೈತ್ರಕುಮಾರಿ, ವಿಶೇಷ ಶಿಕ್ಷರಾದ ಪಿ.ಪದ್ಮ, ಹೆಚ್.ವಿದ್ಯಾವತಿ, ಬೃಂದಾಬಾಯಿ, ಅಭಿಲಾಷಾ, ತ್ರಿವೇಣಿ , ಸ್ಮöÈಧುಲ್, ಸ್ಪರ್ಶ, ಲತಾ, ಡಾ. ಯಮುನದೇವಿ, ಶಿಲ್ಪಾ ಸೇರಿದಂತೆ ಮತ್ತಿತರು ಹಾಜರಿದ್ದರು.