
ಮೈಸೂರು; ಇಲ್ಲಿನ ಜೆ.ಪಿ.ನಗರದ ಜೆ. ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೆ ಜಯಂತಿ ಮಹೋತ್ಸವವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿAದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಾತನಾಡಿ, ಜನರ ಶೈಕ್ಷಣಿಕ ಜೀವನಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ರಾಜೇಂದ್ರ ಶ್ರೀಗಳು ಎಂದು ಸ್ಮರಿಸಿದರು.ಶ್ರೀಗಳ ವಿದ್ಯಾಭ್ಯಾಸ, ಶೈಕ್ಷಣಿಕ ಜೀವನ ಹಾಗೂ ಅವರು ವಿದ್ಯಾರ್ಥಿ ಜೀವನದಲ್ಲೇ ಆಗಿನ ಕಾಲದಲ್ಲಿ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪಡುತ್ತಿದ್ದ ಬವಣೆ ಕಂಡು ಮರುಗಿದ ಅವರು ಮುಂದೆ ಅನೇಕ ವಿದ್ಯಾರ್ಥಿನಿಲಯಗಳನ್ನು ಹಾಗೂ ಶಾಲಾ ಕಾಲೇಜುಗಳ ಸ್ಥಾಪನೆಗೆ ಕಾರಣೀಭೂತರಾದ ಬಗ್ಗೆ ಹಾಗೂ ಅಂದಿನಿAದ ಇಂದಿನವರೆಗೂ ನಾನಾ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಶ್ರಯ ಹಾಗೂ ವಿದ್ಯಾಭ್ಯಾಸ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಸ್.ಎಸ್. ಕಾಲೇಜು ಊಟಿ ರಸ್ತೆಯ ನಿವೃತ್ತ ಪ್ರಾಧ್ಯಾಪಕ ಸದಾಶಿವಮೂರ್ತಿ ಮಾತನಾಡಿ, ರಾಜೇಂದ್ರ ಶ್ರೀಗಳು ಜ್ಞಾನಾನ್ನ ದಾಸೋಹಿಗಳು, ಕಾಯಕ ತಪಸ್ವಿಗಳು ಎಂಬುದನ್ನು ದೃಷ್ಠಾಂತಗಳ ಮೂಲಕ ತಿಳಿಸಿದರು.ಹಾಗೂ ಅವರು ತಮ್ಮ ವೈಯುಕ್ತಿಕ ನಿದರ್ಶನಗಳನ್ನು ನೀಡಿ ಶ್ರೀಗಳ ಮಾತೃಹೃದಯವನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ರವರು ಭಾಗವಹಿಸಿ ಸ್ವಾಮೀಜಿಯವರ ಬಗ್ಗೆ ಅಭಿಮಾನಪೂರ್ವಕವಾಗಿ ಮಾತನಾಡಿದ ಸುಸಂದರ್ಭವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಎಸ್.ಎನ್.ಅರ್ಚನಾ, ಶಾಲೆಯ ಕನ್ನಡ ಶಿಕ್ಷಕಿ ಲತಾ ಸುಬ್ಬಣ್ಣ, ಲೇಖನಾ, ಮಧು ದೊಡ್ಡಮನಿ ಹಾಗು ಕವಿನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ಗುರುನಮನ ಗೀತೆಯನ್ನು ನಡೆಸಿಕೊಟ್ಟರು. ಶಾಲೆಯ ವಿದ್ಯಾರ್ಥಿಗಳು ರಾಜೇಂದ್ರ ಶ್ರೀಗಳ ಜೀವನ ಘಟನಾಧಾರಿತ ಕಿರು ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.
