
ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿಗಳ ಬಿಡುಗಡೆ
ಮೈಸೂರು : ನಗರದ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿಗಳನ್ನು ಬುಧವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ತನ್ಮೂಲಕ ಅಭಿಮನ್ಯುವಿಗೆ ಅಕ್ಷರ ತೇರಿನ ಬೀಳ್ಕೊಡಿಗೆ ನೀಡಲಾಯಿತು.
ಮೈಸೂರು ಕಲ್ಚರಲ್ ಅಸೋಸಿಯೇಷನ್, ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ವತಿಯಿಂದ ಮೈಸೂರಿನ ನಜರ್ ಬಾದ್ ನಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ, ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಬಿ. ಮಂಜುನಾಥ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಣಿಗಳ ನಡವಳಿಕೆ ಬಗ್ಗೆ ಬರೆಯುವುದೇ ಒಂದು ಭಾವನಾತ್ಮಕ ಹಾಗೂ ಬಹು ದೀರ್ಘವಾದ ಪ್ರತಿಕ್ರಿಯೆಯಾಗಿದೆ. ಏಕೆಂದರೆ ನನ್ನ ವಿದೇಶಿ ಸ್ನೇಹಿತರೊಬ್ಬರು ಒಂದು ಪಕ್ಷಿಯ ಬಗ್ಗೆ 50 ವರ್ಷ ಅಧ್ಯಯನ ಮಾಡಿ ಅವುಗಳ ವರ್ತನೆಯ ಬಗ್ಗೆ ದಾಖಲಿಸಿದರು. ಆದರೂ ಅದು ಪೂರ್ಣಗೊಳ್ಳಲಿಲ್ಲ. ಇಂತಹ ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ರಮೇಶ್ ಉತ್ತಪ್ಪ ಅವರು ಕೃತಿ ರಚಿಸಿದ್ದಾರೆ. ಅದರಲ್ಲಿಯೂ ಆನೆಗಳ ವರ್ತನೆ, ಮನುಷ್ಯರು ಅವುಗಳೊಟ್ಟಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಅಂಶಗಳನ್ನು ತಿಳಿಸಿದ್ದಾರೆ ಎಂದರು. ರಮೇಶ್ ಉತ್ತಪ್ಪ ಅವರ ಎರಡೂ ಕೃತಿಗಳ ರಚನೆಯೇ ಒಂದು ಭಾವನಾತ್ಮಕ ಪ್ರತಿಕ್ರಿಯೆ ಆಗಿದೆ. ಅದರ ಮೂಲಕ ಜನರಿಗೆ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗುವುದಾದರೆ ಸಂತೋಷ ಎಂದು ಅಭಿನಂದಿಸಿರು. ಅಪರ ಜಿಲ್ಲಾಧಿ ಕಾರಿ ಆರ್.ಐಶ್ವರ್ಯ ಅವರು ಅಭಿಮನ್ಯುವಿನ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಾಣಿಗಳಿಗೆ ಸಾಹಿತ್ಯದ ಮೂಲಕ ಅಭಿನಂದಿಸುವ ಪ್ರಪಂಚದಲ್ಲಿಯೇ ವಿಶಿಷ್ಟ ಕೃತಿ ಇದಾಗಿದೆ. ಪ್ರಾಣಿಗಳೊಂದಿಗೆ ಸಂಯಮದಿAದ ವರ್ತಿಸಬೇಕು. ಮೌನ ಸಂವಹನ ಮಾಡಬೇಕು. ದೂರದಿಂದಲೇ ನೋಡಿ ಪ್ರಾಣಿಗಳ ಸೌಖ್ಯ ಬಯಸಬೇಕು ಎಂದು ಕೃತಿಯ ಮೂಲಕ ತಿಳಿಸಿಕೊಡಲಾಗಿದೆ,” ಎಂದು ತಿಳಿಸಿದರು.
“ಲೇಖಕರು ಕಥೆ ಹೇಳುವುದು ಸಹಜ. ಆದರೆ, ಅಭಿಮನ್ಯು ಆನೆಯನ್ನು ಮುಖ್ಯವಾಗಿ ಇಟ್ಟುಕೊಂಡು ಆತನ ಮೂಲಕವೇ ಆತನ ವಿಶಿಷ್ಟ ಕಾರ್ಯಗಳಮನ್ನು ಹೇಳಿಸುವ ಸಾಹಿತ್ಯದ ಕಾರ್ಯ ವಿಶೇಷವಾಗಿದೆ. ಪ್ರಾಣಿಗಳು ಬಹಳ ಸೂಕ್ಷ÷್ಮ ಜೀವಿಗಳು. ಹಾಗಾಗಿ ಅವುಗಳೊಂದಿಗೆ ಮೌನದಿಂದಲೇ ಮಾತನಾಡಬೇಕು. ದೂರದಲ್ಲೇ ನಿಂತು ಅವಗಳ ಸೌಖ್ಯ ಬಯಸಬೇಕು ಎಂಬ ಅಂಶವನ್ನು ರಮೇಶ್ ಉತ್ತಪ್ಪ ಅವರು ಕೃತಿಯ ಮೂಲಕ ತಿಳಿಸಿದ್ದಾರೆ,” ಎಂದರು.
ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ಅಭಿಮನ್ಯುವಿನ ಬಗ್ಗೆ ಪುಸ್ತಕ ಬರೆದಿದ್ದೇವೆ ಎಂದಾಗ ಅದರ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಇರಬಹುದು ಎಂದುಕೊAಡೇ. ಆದರೆ, ಓದಿದಾಗ ಇದೊಂದು ಭಾವನಾತ್ಮಕ ಕವಿತೆಗಳ ಸಮಾಗಮ ಎಂದು ತಿಳಿಯಿತು. ಅಭಿಮನ್ಯು ಕಾರ್ಯಚರಣೆಗಳಿದರೆ ವೀರಾವೇಶದಿಂದ ಹೋರಾಡಿ ರೈತರ ಜಮೀನುಗಳಿಗೆ ನುಗ್ಗಿ ಹಾವಳಿ ಎಬ್ಬಿಸುವ ಆನೆಗಳನ್ನು ತಹಬದಿಗೆ ತರುತ್ತಾನೆ. ಅದೇ ರೀತಿ ದಸರಾ ಮಹೋತ್ಸವಕ್ಕೆ ಕರೆತಂದರೆ ತನ್ನಷ್ಟು ಸಂಯಮದವ ಯಾರೂ ಇಲ್ಲ ಎಂಬAತೆ ಲಕ್ಷಾಂತರ ಜನರ ನಡುವೆ ಅಂಬಾರಿ ಹಿತ್ತು ಜಂಬೂಸವಾರಿ ಹೊತ್ತು ಸೈ ಎನಿಸಿಕೊಳ್ಳುತ್ತಾನೆ. ಈ ರೀತಿ ಎರಡು ವೈರದ್ಯಗಳನ್ನು ಹೊಂದಿ ಅವುಗಳನ್ನು ಕರಾರುವಕ್ಕಾಗಿ ನಿಭಾಯಿಸುವ ಗುಣವನ್ನು ಹೊಂದಿರುವ ಈ ರೀತಿಯ ಪ್ರಾಣಿಯನ್ನು ನೋಡಿಯೇ ಇಲ್ಲ ಎಂದು ಸ್ಮರಿಸಿದರು.
ವಸಂತ ಮತ್ತು ಅಭಿಮನ್ಯುವಿನ ನಡುವೆ ಅವಿನಾಭಾವ ಸಂಬAಧವಿದೆ. ಅದಕ್ಕಾಗಿಯೇ ಅವರಿಬ್ಬರ ಕೆಲಸ ಇಷ್ಟು ಯಶಸ್ವಿಯಾಗಿದೆ. ವಸಂತನಿಗೆ ಮತ್ತೊಂದು ಆನೆ ಕೊಡುತ್ತೇವೆ. ಆತ ಅದನ್ನೂ ಪಳಗಿಸಿ ತನ್ನ ಎಂದಿನ ಕೆಲಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಬಳಿಕ ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ಕಾರ್ಯದರ್ಶಿ ಮಹದೇವ್ ಅಭಿಮನ್ಯು ಮಾವುತ ವಸಂತ ಅವರಿಗೆ ಸನ್ಮಾನಿಸಿದರು. ಇದೇ ವೇಳೆ ಮಾವುತ ವಸಂತ ಮಾತನಾಡಿ, ಕರ್ನಾಟಕದ ಎಲ್ಲಾ ಕಡೆ ಕೆಲಸ ಮಾಡಿರುವ ಅಭಿಮನ್ಯು ಆನೆಯ ಬಗ್ಗೆ ರಮೇಶ್ ಉತ್ತಪ್ಪ ಅವರು ಪುಸ್ತಕ ಬರೆದಿದ್ದಾರೆ. ಆ ಪುಸ್ತಕಗಳನ್ನು ಎಲ್ಲರೂ ಓದಬೇಕು. ಆನೆಗಳನ್ನು ಪಳಗಿಸುವುದು ಅಷ್ಟು ಸುಲಭವಲ್ಲ. ಎಲ್ಲರೂ ದಸರಾಗೆ ಬರಬೇಕು. ಆನೆಗಳನ್ನು ಹಾಗೂ ತಾಯಿ ಚಾಮುಂಡೇಶ್ವರಿಯನ್ನು ನೋಡಬೇಕು ಎಂದರು.
ಸಾರ್ವಜನಿಕ ಗ್ರಂಥಾಲಯ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಕೃತಿಗಳ ಕರ್ತÈ ಐತಿಚಂಡ ರಮೇಶ್ ಉತ್ತಪ್ಪ ಹಾಗೂ ಇತರರು ಇದ್ದರು.
