Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು; ತೋಟದಪ್ಪ ಬಸವರಾಜು


ಮೈಸೂರು; ತಿ.ನರಸೀಪುರ ಸ್ಭೆರಿದಂತೆ ಎಲ್ಲೆಡೆ ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಬಿಜೆಪಿಯ ವರುಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಯೊಂದು ಹಬ್ಬಗಳ ಆಚರಣೆಗಳನ್ನು ಅದರದೇ ಆದ ಸಂಪ್ರದಾಯ, ವೈಶಿಷ್ಟತೆಯಿಂದ, ವೈಜ್ಞಾನಿಕ ತಳಹದಿಯ ಮೇಲೆ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ನಮ್ಮ ಸಂವಿಧಾನ ಸಂಪೂರ್ಣ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡಿದೆ. ಗೌರಿ ಗಣೇಶ ಹಬ್ಬ ಆಚರಿಸುವುದು ರಾಷ್ಟಿçÃಯತೆ ಶಾಂತಿ, ಸೌಹಾರ್ದತೆ, ಸಾಮರಸ್ಯ , ದೇಶಭಕ್ತಿ ಇವುಗಳ ಅರಿವು ಮೂಡಿಸಲು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಇಂತಹ ಪವಿತ್ರ ರಾಷ್ಟಿçÃಯ ಹಬ್ಬ ಆಚರಿಸಲು ತಿ.ನರಸೀಪುರ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸಾಂಗವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಹಬ್ಬ ಆಚರಣೆಗೆ ಅನಗತ್ಯ ನಿಬಂಧನೆ ನಿರ್ಬಂಧನೆಗಳನ್ನು ಸಾರ್ವಜನಿಕರ ಮೇಲೆ ಹಾಕುವುದು ಖಂಡನೀಯ. ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ನಡೆಯಾಗುತ್ತದೆ. ಇದು ಕಾನೂನು ಅಧಿಕಾರ ದುರ್ಬಳಕೆಯ ನಡೆಯಾಗುತ್ತದೆ . ಗೌರಿ, ಗಣೇಶ ಹಬ್ಬ ದಶಕಗಳಿಂದಲೂ ಶಾಂತಿಯಿAದ ನಡೆದುಕೊಂಡು ಬರುತ್ತಿದೆ. ಇದಕ್ಕೆ ಕಲ್ಲು ಹಾಕುವ ಕೆಲಸವನ್ನು ಸಂಬAಧಪಟ್ಟ ಅಧಿಕಾರಿಗಳು ಮಾಡಬಾರದು, ಬ್ರಿಟಿಷರಂತೆ ವರ್ತಿಸಬಾರದು ಸುಸೂತ್ರವಾಗಿ ನಡೆಯಲು ವ್ಯವಸ್ಥೆಯ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ತಾಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂದಿನಿAದ ಹಬ್ಬ ಮುಗಿಯುವವರೆಗೆ ಟಿ ನರಸೀಪುರ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನಗಳ ತಪಾಸಣೆ ನಡೆಸುವ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಹಬ್ಬದ ಸಾಮಗ್ರಿ ಸರಂಜಾಮುಗಳನ್ನು ಕೊಳ್ಳಲು ಹಳ್ಳಿ ಹಳ್ಳಿಗಳಿಂದ ಕುಟುಂಬ ಸಮೇತ ವಾಹನಗಳಲ್ಲಿ ಬರುತ್ತಾರೆ. ಪೊಲೀಸರನ್ನು ಕಂಡು ಭಯ ಬಿದ್ದು ಯಾವುದೇ ಅನಾಹುತ ಗಳು ಆಗಬಾರದು ಎಂಬ ಕಾರಣಕ್ಕಾಗಿ ತಕ್ಷಣವೇ ವಾಹನಗಳ ತಪಾಸಣೆಯನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು , ಸಂಬAಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.