Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೃಷಿ ಹಾಗೂ ಗೃಹಬಳಕೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗ್ರಹಿಸಿ ರೈತರಿಂದ ಸೆಸ್ಕ್ ಎಂಡಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ


ಮೈಸೂರು; ಕೃಷಿ ಹಾಗೂ ಗೃಹಬಳಕೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗ್ರಹಿಸಿ ರೈತರು ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಹಿನಕಲ್‌ನಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಂಡಿ ಕಚೇರಿ ಮುಂದೆ ಜಮಾಯಿಸಿದ ರೈತರು ರಾಜ್ಯ ಹಾಗೂ ಕೇಂದ್ರ ಮತ್ತು ವಿದ್ಯುತ್ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ, ಸಮರ್ಪಕ ವಿದ್ಯುತ್ ಪೂರೈಕೆ ಗೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನೆ ನೇತೃತ್ವ ವಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಬರಗಾಲದ ನೆಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷ÷್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ ಸೆಟ್ಟುಗಳಿದ್ದು, ಇವುಗಳಿಗೆ ಕೇವಲ ಎರಡು ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಗೃಹಬಳಕೆ ವಿದ್ಯುತ್ತನ್ನು ಸಹ ಅನಿಮಿತವಾಗಿ ಕಟ್ ಮಾಡುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಅದೇ ರೀತಿಯಾಗಿ ರಾತ್ರಿ ವೇಳೆ ತೋಟದ ಮನೆಯಲ್ಲಿ ಇರುವ ಕೃಷಿ ಪಂಷೆಟ್ ಬಳಕೆದಾರರು ಹಾಗೂ ಗೃಹಬಳಕೆದಾರರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ವಿದ್ಯುತ್ ದೀಪಗಳನ್ನು ಹಚ್ಚಿ, ಕಾಡು ಪ್ರಾಣಿಗಳ ರಕ್ಷಣೆ ಪಡೆಯುವ ಪರಿಸ್ಥಿತಿ ಇದ್ದು, ಈಗ ವಿದ್ಯುತ್ ಲೋಡ್ ಸೆಡ್ಡಿಂಗ್ ನಿಂದಾಗಿ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬರದ ನಡುವೆ ಅಲ್ಪ ಸ್ವಲ್ಪ ನೀರು ಇರುವ ಕೃಷಿ ಪಂಪ್ ಸೆಟ್ ರೈತರು ಜೀವನೋಪಾಯಕ್ಕಾಗಿ ತರಕಾರಿ, ಸೊಪುö್ಪ, ಹೈನುಗಾರಿಕೆ ಇವುಗಳನ್ನು ಅವಲಂಬಿಸಿದ್ದು, ಈಗ ಇವುಗಳಿಗೂ ಸಹ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ತೀವ್ರ ಹಿನ್ನಡೆ ಆಗುತ್ತಿದೆ. ತಕ್ಷಣ ರಾಜ್ಯ ಮತ್ತು ಕೇಂದ್ರ ವಿದ್ಯುತ್ ಸಂಗ್ರಹಕ್ಕೆ ಸಂಬAಧಪಟ್ಟAತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಸಂಗ್ರಹ ಮಾಡುವ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕೆಗಳಿಗೂ ಸಹ ಶಿಫ್ಟ್ ಮತ್ತು ಪಾಳಿಯ ಮುಖಾಂತರ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಐಟಿ ,ಬಿಟಿ ಕಂಪನಿಗಳಿಗೆ ಹೆಚ್ಚಿನ ಮಾನ್ಯತೆ ನೀಡಿ, ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ತಾರತಮ್ಯ ಮಾಡುವುದು ಸರಿಯಲ್ಲ. ಇದರಿಂದ ಕೃಷಿ ಕ್ಷೇತ್ರವು ತೊಂದರೆ ಅನುಭವಿಸುವ ಪರಿಸ್ಥಿತಿಯನ್ನು ಸರ್ಕಾರಗಳು ನಿರ್ಮಾಣ ಮಾಡುತ್ತಿವೆ. ಆದ್ದರಿಂದ ಇಂತಹ ತಾರತಮ್ಯ ನೀತಿಯನ್ನು ಬಿಟ್ಟು, ಕೃಷಿ ಪಂಪ್ ಸೆಟ್ಟುಗಳು ಮತ್ತು ಗ್ರಾಮೀಣ ಭಾಗಕ್ಕೂ ಸಮರ್ಪಕ ವಿದ್ಯುತ್ ನೀಡಬೇಕು. ತಕ್ಷಣ ಸರ್ಕಾರ ಮತ್ತು ಇಂಧನ ಸಚಿವರು ಇದರ ಬಗ್ಗೆ ಗಮನ ಹರಿಸದಿದ್ದರೆ ರೈತರು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿAದ ನಡೆದ ಈ ಪ್ರತಿಭಟನೆಯಲ್ಲಿ ಮುಖಂಡರಾದ ಕೆರೆ ಹುಂಡಿ ರಾಜಣ್ಣ, ಹನುಮಯ್ಯ, ಹಾಲಿನ ನಾಗರಾಜ್, ವಳಗೆರೆ ಗಣೇಶ್, ಕಸುವಿನಹಳ್ಳಿ ಮಂಜೇಶ್, ಮುದ್ದಹಳ್ಳಿ ಮಧು, ದೇವಿರಮ್ಮನಹಳ್ಳಿ ಪುಟ್ಟಸ್ವಾಮಿ, ಹುಂಡಿ ಮಹೇಶ್, ಚಿದಂಬರ ಜೆಸಿಬಿ, ಸ್ಯಾಂಡರಳ್ಳಿ ಬಸವರಾಜು, ನಾಗರಾಜಪ್ಪ, ಹೊನ್ನೇಗೌಡನಳ್ಳಿ ಮಹೇಶ್, ಸಿದ್ದಯ್ಯನ ಹುಂಡಿ ಸೋಮಣ್ಣ, ಕೀರ್ತಿ, ಮಾದಪ್ಪ, ವಳಗೆರೆ ಮಹೇಶ್, ಶಿವಾನಂದ ಸೇರಿದಮತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು