
ಮೈಸೂರು; ಮಾನವ ಕುಲಕ್ಕೆ ಕೃತಕ ಬುದ್ಧಿಮತ್ತೆಯು ವರವಾಗಿದೆ ಎಂದು ಬೆಂಗಳೂರಿನ ಶಿಕ್ಷಣ ಸಂಶೋಧನಾ ಸಂಸ್ಥೆಯ ಕೈಗಾರಿಕೋದ್ಯಮದ ಸಲಹೆಗಾರ ಶಂಕರ್ ಪ್ರಸಾದ್ ಕೆ.ಎಸ್ ಹೇಳಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಪ್ಲೇಸ್ಮೆಂಟ್ ಸೆಲ್ ವತಿಯಿಂದ ‘ಓಚಿvigಚಿಣiಟಿg ಣhe ಂge oಜಿ ಂI: ಛಿಚಿಡಿeeಡಿ oಠಿಠಿoಡಿಣuಟಿiಣies ಚಿಟಿಜ ಈuಣuಡಿe sಞiಟಟs ‘ ವಿಷಯ ಕುರಿತಂತೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ಕುರಿತು ಯಾರು ಭಯ ಪಡುವ ಅಗತ್ಯವಿಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವ ಕುಲಕ್ಕೆ ನೆರವಾಗಿದೆ ಎಂದರು. ಇದರ ಆಗಮನದಿಂದ ಹೆಚ್ಚಿನ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಿವೆ. ಕೃತಕ ಬುದ್ಧಿಮತ್ತೆಯ ಆಗಮನದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯು ಸಂತೋಷಪಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಪಿಎಲ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಸುಕುಮಾರ್ ರಂಗಚಾರಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ಯುಗದಲ್ಲಿ ತಾಂತ್ರಿಕ ಬದಲಾವಣೆಗಳನ್ನು ನೈಜ ಪ್ರಪಂಚದ ಅವಕಾಶಗಳನ್ನಾಗಿ ಪರಿವರ್ತಿಸಲು ಉದ್ಯಮಶೀಲತೆಯ ಕೌಶಲ್ಯಗಳು ಅತ್ಯಂತ ಅವಶ್ಯಕವಾಗಿದೆ ಎಂದರು. ವೇಗವಾಗಿ ಉದ್ಯಮಗಳನ್ನು ನಿರ್ಮಿಸಲು ಎಐ ಅಗತ್ಯ ಪರಿಕರಗಳನ್ನು ಒದಗಿಸುತ್ತದೆ. ಜೊತೆಗೆ ಅರ್ಥಪೂರ್ಣ ಆವಿಷ್ಕಾರಗಳನ್ನು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಉದ್ಯಮಿಗಳು ಇಂತಹ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ರೇಚಣ್ಣ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ ಉಮೇಶ್ ವಿ, ಧಾತ್ರಿ, ವೈಷ್ಣವಿ ಆರ್, ಹರ್ಷಿತಾ.ಎಂ, ಚರಿಷ್ಮ ಕೆ.ಜಿ ಉಪಸ್ಥಿತರಿದ್ದರು. ಅಧ್ಯಾಪಕರು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆ ನಂತರ ಮೂರು ಗೋಷ್ಠಿಗಳು ನಡೆಯಿತು.
ತಾಂತ್ರಿಕ ಗೋಷ್ಠಿ -1 ಬಿಪಿಎಲ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಸುಕುಮಾರ್ ರಂಗಾಚಾರಿ ಅವರು ‘ಂI ಯುಗದಲ್ಲಿ ಉದ್ಯಮಶೀಲತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು’ ವಿಷಯ ಕುರಿತು ಉಪನ್ಯಾಸ ನೀಡಿದರು.
ತಾಂತ್ರಿಕ ಗೋಷ್ಟಿ-2 ಇನೋಮಂತ್ರ ಕನ್ಸಲ್ಟಿಂಗ್ ಪ್ರೆöÊವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಕೇಶ್‌ಬಾಬು ಕೆ ಎಲ್ ಅವರು ‘ಬೆಳವಣಿಗೆಗೆ ವಿನ್ಯಾಸ ಚಿಂತನೆಯನ್ನು ಅನ್ವೇಷಿಸಿ’ ವಿಷಯ ಕುರಿತು ಮಾತನಾಡಿದರು.
ತಾಂತ್ರಿಕ ಗೋಷ್ಠಿ -3
ಬೆಂಗಳೂರಿನ ಶಿಕ್ಷಣ ಸಂಶೋಧನಾ ಸಂಸ್ಥೆಯ ನಿರ್ವಾಹಕರಾದ ಶ್ರೀ ಶಂಕರ್‌ಪ್ರಸಾದ್ ಕೆ ಎಸ್ ಅವರು ‘ ಕೃತಕ ಬುದ್ಧಿಮತ್ತೆ :ವೃತ್ತಿ ಮತ್ತು ಅವಕಾಶಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.