ಸಮಕಾಲೀನ ದಲಿತ ಕಾವ್ಯಕ್ಕೆ ‘ಎಲ್ಲಾದರು ಹದವಿದ್ದರೆ’ ಮಹತ್ವದ ಕೊಡುಗೆ: ರೂಪ ಹಾಸನ
ಮೈಸೂರು: ನಿರಂತರ ಫೌಂಡೇಶನ್, ಮೈಸೂರು ಹಾಗೂ ತಮಟೆ ಪುಸ್ತಕ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಅವರ ಕವನ ಸಂಕಲನ ‘ಎಲ್ಲಾದರು ಹದವಿದ್ದರೆ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸಾಹಿತ್ಯದ ಸೊಗಡಿನ ನಡುವೆ ನೆರವೇರಿತು.ಬರಹಗಾರ್ತಿ ರೂಪ ಹಾಸನ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, “ಕವಿಗೆ ಮುಗ್ಧತೆ, ನಿರ್ದಿಷ್ಟತೆ ಮತ್ತು ಸಂವೇದನಾಶೀಲತೆ ಎಂಬ ಗುಣಗಳು ಸದಾ ಜೊತೆಯಾಗಿರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಎಲ್ಲಾದರು ಹದವಿದ್ದರೆ’ ಕೃತಿ ಕನ್ನಡ ಕಾವ್ಯಲೋಕಕ್ಕೆ…