Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸಲು ಜಾನಪದ ಕಲಾತಂಡಗಳಿ0ದ ಅರ್ಜಿ ಆಹ್ವಾನ

ಮೈಸೂರು: ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಾನಪದ ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದ್ದು, ಸೆ. ೧೬ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಲು ಬಯಸುವ ಕಲಾತಂಡಗಳು ಅರ್ಜಿ ಸಲ್ಲಿಸುವಾಗ ತಮ್ಮ ತಂಡದ ಉತ್ತಮ ಭಾವಚಿತ್ರದೊಂದಿಗೆ ತಂಡದ ಸದಸ್ಯರುಗಳ ವಿವರ, ಅಂಚೆ ವಿಳಾಸ ಮತ್ತು ತಂಡದ ಮುಖ್ಯಸ್ಮರ ಮೊಬೈಲ್, ದೂರವಾಣಿ ಸಂಖ್ಯೆ ವಿವರವನ್ನು ಒಳಗೊಂಡAತೆ ಅರ್ಜಿಯನ್ನು ಸಮನ್ವಯಾಧಿಕಾರಿಗಳು, ದಸರಾ…

Read More

ಕೇಂದ್ರದ ನಿಯಮಗಳಡಿ ೧೦೧ ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ; ಇನ್ನೊಂದು ವಾರದಲ್ಲಿ ಮತ್ತೆ ಪರಿಶೀಲನೆ; ಡಿಸಿಎಂ ಡಾ.ಜಿ.ಪರಮೇಶ್ವರ

ರಾಜ್ಯದ ಕಾನೂನಿನಡಿಯಲ್ಲಿ ಬರ ಘೋಷಿಸಿದರೆ ಪರಿಹಾರ ಸಿಗುವುದಿಲ್ಲ; • ರೈತರ ಕೈತಪ್ಪಿದ ಬೆಳೆ ; ಪರಿಹಾರ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಹುಣಸೂರು: ರಾಜ್ಯದ ಕಾನೂನಿನಡಿಯಲ್ಲಿ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದರೆ, ಪರಿಹಾರ ಸಿಗುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಘೋಷಣೆ ಮಾಡಬೇಕು. ಹಾಗಾಗಿ ೧೦೧ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೊಂದು ವಾರ ಬಿಟ್ಟು ಪರಿಶೀಲನೆ ನಡೆಸಿ, ಆಗ ಈ ವರ್ಗಕ್ಕೆ ಸೇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಉಪ…

Read More

ಮಳೆ ಕೊರತೆ: ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ ಡಾ. ಜಿ. ಪರಮೇಶ್ವರ್

• ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು.• ರೈತರಿಗೆ ಕಿರುಕುಳ ನೀಡದಂತೆ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ಮೈಸೂರು; ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಮಂಗಳವಾರ ಮೈಸೂರು ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರನ ಕೊಪ್ಪಲು ಗ್ರಾಮದಲ್ಲಿ ಬರವೀಕ್ಷಣೆಯ ಸಂದರ್ಭದಲ್ಲಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ,…

Read More

ನಗರ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು : ಸಚಿವ ಹೆಚ್.ಸಿ.ಬಾಲಕೃಷ್ಣ

ಮೈಸೂರು: ರಾಜ್ಯದ ಜನಸಂಖ್ಯೆಯಲ್ಲಿ ಅಂದಾಜು ಶೇ ೪೦ ರಷ್ಟು ಜನ ನಗರ ಪ್ರದೇಶದಲ್ಲಿ ವಾಸವಾಗಿದ್ದು, ನಗರ ಪ್ರದೇಶಗಳ ಅಭಿವೃದ್ಧಿಗೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ ೩೦ ರಷ್ಟು ಅನುದಾನ ದೊರಕುತ್ತದೆ, ಉಳಿದ ಹಣವನ್ನು ಕ್ರೋಢೀಕರಿಸಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು.ಮಂಗಳವಾರ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹಾಸನ ಹಾಗೂ ಮಂಡ್ಯ…

Read More

ಸೆ.28 ರಿಂದ ಅ.5ರವರೆಗೆ ದಸರಾದ ಯುವ ಸಂಭ್ರಮ

ಮೈಸೂರು: ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮನರಂಜೆಯ ಮುನ್ಮ್ನಡಿಯಾದ ಯುವ ಸಂಭ್ರಮ ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದೆ.ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ನಗರದ ಮಾನಸಗಂಗೋತ್ರಿಯ ಬಯಲು ರಂಗಮAದಿರದಲ್ಲಿ ನಡೆಸಿಕೊಂಡು ಬರುತ್ತಿರುವ ಯುವ ಸಂಭ್ರಮವನ್ನು ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ವಿಶೇಷವಾಗಿ ಆಯೋಜಿಸಲು ಉಪ ಸಮಿತಿ ನಿರ್ಧರಿಸಿದ್ದು, ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ನಡೆಸಿ ಹಲವಾರು…

Read More

ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ;ಸಚಿವ ಬಾಲಕೃಷ್ಣ

*ಬಿಜೆಪಿಯವರಿಗೆ ನಮ್ಮನ್ನು ಬೈದುಕೊಂಡು ಓಡಾಡುವುದೇ ಕೆಲಸ ಮೈಸೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿರೂಗಳ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಆರೋಪಿ ಅಷ್ಟೇ, ಅಪರಾಧಿ ಅಲ್ಲ; ಪ್ರಕರಣ ಕೋರ್ಟ್ನಲ್ಲಿದೆ, ತೀರ್ಪು ಏನಾಗುತ್ತೋ ನೋಡೋಣ ಎಂದು ಸಚಿವ ಬಾಲಕೃಷ್ಣ ಹೇಳಿದರು. ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರು ನಮ್ಮನ್ನು ಹೊಗಳುತ್ತಾರೆಯೇ? ನಮ್ಮನ್ನು ತೆಗಳುವುದು, ಬೈದುಕೊಂಡು ಓಡಾಡುವುದೇ ಅವರ ಕೆಲಸ ಎಂದು…

Read More

ಬೋನಿಗೆ ಬಿದ್ದ ಹುಲಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹೆಚ್.ಡಿ.ಕೋಟೆ; ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಹುಲಿಯೊಂದು ಸಿಕ್ಕಿ ಬಿದ್ದು ಸೆರೆಯಾದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.ಕಳೆದ ಕೆಲವು ದಿನಗಳಿಂದ ಹೊಸಹೊಳಲು ಗ್ರಾಮದ ಸುತ್ತಮುತ್ತ ಹುಲಿ ಸಂಚರಿಸುತ್ತಿರುವುದು ಕಂಡುಬAದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಚಲನವಲನದ ಮೇಲೆ ನಿಗಾ ವಹಿಸಿ, ಹುಲಿ ಸೆರೆಗೆ ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸಿದ್ದರು. ಇದೀಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ…

Read More

ನಗರ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡಿ; ಸಚಿವ ಹೆಚ್.ಸಿ.ಬಾಲಕೃಷ್ಣ

ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಒತ್ತುವರಿ ತೆರವಿಗೆ ಅಭಿಯಾನ ಮೈಸೂರು; ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಇರುವ ಕೋರ್ಟ್ ಪ್ರಕರಣಗಳ ಕುರಿತು ಪೌರಾಡಳಿತ ಇಲಾಖೆಯ ಕಾನೂನು ವಿಭಾಗ ಸಮರ್ಥವಾಗಿ ವಾದ ಮಂಡಿಸಬೇಕು. ಸ್ಥಳೀಯ ಸಂಸ್ಥೆಗಳು ಆಸ್ತಿಗಳ ಒತ್ತುವರಿ ತೆರವು ಮಾಡಲು ಅಭಿಯಾನ ಕಾರ್ಯವನ್ನು ಹಮ್ಮಿಕೊಳ್ಳುವುದು. ಒತ್ತುವರಿ ತೆರವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ತಿಳಿಸಿದರು.ಸೋಮವಾರ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು…

Read More

9 ಆನೆಗಳಲ್ಲಿನ ತೂಕದಲ್ಲಿ ಶ್ರೀಕಂಠ ಆನೆಯೇ ಬಲ ಭೀಮ !

ಮೈಸೂರು: ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲೆಂದು ಕಾಡಿನಿಂದ ಅರಮನೆ ನಗರಿ ಮೈsಸೂಗೆ ಬಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಮೊದಲ ತಂಡದ 9 ಆನೆಗಳ ತೂಕ ಪರಿಶೀಲನೆಯನ್ನು ಭಾನುವಾರ ನಡೆಸಲಾಯಿತು. ಅಂಬಾವಿಲಾಸ ಅರಮನೆಯ ಶೆಡ್‌ಗಳಿಂದ ಎಲ್ಲಾ 9 ಆನೆಗಳನ್ನು ಧನ್ವಂತರಿ ರಸ್ತೆಯಲ್ಲಿರುವ ತೂಕ ಮಾಪನ ಕೇಂದ್ರ ಸಾಯಿರಾಂ ಅಂಡ್ ಕಂಪನಿ ಕೇಂದ್ರಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಜನರು ತಮ್ಮ ಕಣ್ಣ ಮುಂದೆ ಸಾಲಾಗಿ ಹಾದು ಹೋಗುತ್ತಿದ್ದ ಆನೆಗಳನ್ನು ನೋಡಿ ಖುಷಿಗೊಂಡರು. ತಮ್ಮ…

Read More

*ಸರಳ ದಸರಾ ಮಾಡುವುದಿಲ್ಲ. ಕಂಬಳ ಮಾಡುವ ಬಗ್ಗೆ ನಾನು ಯಾವುದೇ ಪ್ರತಿಷ್ಠೆಯನ್ನು ತೆಗೆದುಕೊಂಡಿಲ್ಲ;ಸಿಎಂ ಡಿ.ಕೆ.ಶಿವಕುಮಾರ್

ದಸರಾ ಉದ್ಘಾಟಕರ ಆಯ್ಕೆಯನ್ನು ನಾನೇ ಮಾಡುತ್ತೇನೆ; ಮೈಸೂರು; ರಾಜ್ಯವನ್ನು ಆವರಿಸಿರುವ ಬರಗಾಲದ ನೆಪದಲ್ಲಿ ಸರಳವಾಗಿ ನಾಡ ಹಬ್ಬ ಮೈಸೂರು ದಸರಾ ಮಾಡುವುದಿಲ್ಲ. ಆದರೆ, ವಿಭಿನ್ನವಾಗಿ ಈ ಬಾರಿ ದಸರಾ ಮಾಡುತ್ತೇವೆ. ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಶನಿವಾರ ಮೈಸೂರಿನ ಓವಲ್ ಗ್ರೌಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನ ನಡೆಯಲಿರುವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಮಿಲಿಟರಿ, ಸೇನಾ ಪಡೆಗಳು ಇರಲಿವೆ. ಇದರ…

Read More