3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿರುವ ವಸತಿ ನಿಲಯದಲ್ಲಿ ಯೋಗಾಭ್ಯಾಸ ತರಬೇತಿ ಆರಂಭಿಸಬೇಕು; ಕಿಶೋರ್

ಮೈಸೂರು: ಯೋಗಕ್ಕೆ ಅಂತಾರಾಷ್ಟಿçÃಯ ಮನ್ನಣೆ ದೊರೆಯುತ್ತಿರುವ ಈ ದಿನಗಳಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿರುವ ವಸತಿ ನಿಲಯದಲ್ಲಿ ಯೋಗಾಭ್ಯಾಸ ಆರಂಭಿಸಬೇಕು ಎಂದು ಅಂತಾರಾಷ್ಟಿçÃಯ ಯೋಗ ತರಬೇತುದಾರ ಎಂ.ಆರ್.ಕಿಶೋರ್ ಒತ್ತಾಯಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯೋಗಾಸನ ತರಬೇತಿ ಪ್ರಾರಂಭವಾದಲ್ಲಿ ತಳಮಟ್ಟದಿಂದ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ವೈಜ್ಞಾನಿಕ ತರಬೇತಿಯ ಆಧಾರದ ಮೇಲೆ ಯೋಗ ಕ್ರೀಡಾಪಟುಗಳಿಗೆ ಅತಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆಕರ್ನಾಟಕದಲ್ಲಿ…

Read More

ಮೈಸೂರು ಜಿಲ್ಲೆಯಾದ್ಯಾಂತ ಕೃಷಿ ಭೂಮಿ ಉಳಿಸಿ ಅಭಿಯಾನ

ಮೈಸೂರು; ಕೃಷಿ ಭೂಮಿ ಫಲವತ್ತತೆ ರಕ್ಷಿಸಿ, ಸುಸ್ಥಿರ ಬೇಸಾಯಕ್ಕೆ ಉತ್ತೇಜನ ನೀಡಲು ಕೇಂದ್ರ ಕೃಷಿ ಮತ್ತು ರೈತರಕಲ್ಯಾಣ ಮಂತ್ರಾಲಯ ದಿಂದ ಮಹತ್ವಾಕಾಂಕ್ಷಿ ಕೃಷಿ ಭೂಮಿ ಉಳಿಸಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.ಐಸಿಎಆರ್ ಕೃಷಿ ವಿಜ್ಞಾನಕೇಂದ್ರ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಆಂದೋಲನವು ಜೂನ್ 1 ರಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು, ಜೂನ್ 30ರವೆರೆವಿಗೂ ನಿರಂತರವಾಗಿ ಜರುಗಲಿದೆ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ತಿಳಿಸಿದ್ದಾರೆ.ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಇಳುವರಿ…

Read More

ಹುಲಿ ರಕ್ಷಿತಾರಣ್ಯದಲ್ಲಿ ರೌಡಿಶೀಟರ್‌ನಿಂದ ಮದ್ಯದ ಪಾರ್ಟಿ: ಆರ್‌ಎಫ್‌ಒ ಸಸ್ಪೆಂಡ್

ಚಾಮರಾಜನಗರ; ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಕೋರ್ ವಲಯದಲ್ಲಿ ಮೂವರು ಮದ್ಯ ಸೇವನೆ ಮಾಡಿದ್ದ ಫೋಟೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂಬAಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ವಲಯ ಅರಣ್ಯಾಧಿಕಾರಿಯನ್ನು ಸರ್ಕಾರ ಸಸ್ಪೆಂಡ್ ಮಾಡಿದೆ.ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಡಿ.ಪುನೀತ್ ಕುಮಾರ್ ಅಮಾನತಾದವರು.ಮದ್ದೂರು ವಲಯದ ಕಳ್ಳ ಬೇಟೆ ಶಿಬಿರದ ಬಳಿಯ ಹುಲಿ ಕಟ್ಟೆಯಲ್ಲಿ ಮೂವರು ಮದ್ಯ ಸೇವನೆ ಮಾಡಿದ್ದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್…

Read More

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ವದಂತಿ ಸೃಷ್ಟಿಸಿರುವ ಕಿಡಿಗೇಡಿಗಳನ್ನು ಬಂಧಿಸಿ :ದೇವರಾಜ್ ಟಿ. ಕಾಟೂರು ಒತ್ತಾಯ

ಮೈಸೂರು; ಸಾಮಾಜಿಕ ಜಾಲ ತಾಣದಲ್ಲಿ ಸಚಿವ ಸತೀಶ್ ಜಾರಕಿ ಹೊಳಿ ಅವರ ವಿರುದ್ಧ ಅಪಪ್ರಚಾರ ಮತ್ತು ಜನರಲ್ಲಿ ಗೊಂದಲ ಸೃಷ್ಟಿ ಮಾಡಿ, ಅವರ ಹೆಸರಿಗೆ ಧಕ್ಕೆ ತಂದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆAದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ. ಕಾಟೂರು ಆಗ್ರಹಿಸಿದ್ದಾರೆ.ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸುವುದಕ್ಕೆ ಅವರ ವಿರುದ್ಧ ಸಹಿ ಸಂಗ್ರಹ ನಡೆಸಲಾಗಿದೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ…

Read More

ಜೂ 21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟಿçಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್

ಮೈಸೂರು; ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು ಮೈಸೂರು ಅರಮನೆ ಆವರಣದಲ್ಲಿ 12 ನೇ ಅಂತರಾಷ್ಟಿçÃಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ.ಆರ್ ತಿಳಿಸಿದರು.ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ12 ನೇ ಅಂತರಾಷ್ಟಿçÃಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ಯೋಗವನ್ನು ಯೋಗದಿನಕ್ಕೆ ಮಾತ್ರ ಮೀಸಲಿಡದೆ ಯೋಗಾಭ್ಯಾಸವನ್ನು ಪ್ರತಿದಿನ ಅಳವಡಿಸಿಕೊಳ್ಳಬೇಕು. ಯೋಗದ ವಿವಿಧ ಆಸನಗಳಿಂದ ದೇಹದ ಎಲ್ಲಾ ಸ್ನಾಯು ಹಾಗೂ ನರಗಳಿಗೆ ವ್ಯಾಯಾಮ ನೀಡಿ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.ಜೂ….

Read More

41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು

*ವಶಪಡಿಸಿಕೊಂಡ ಸ್ವತ್ತುಗಳು ವಾರಸ್ಮದಾರರಿಗೆ ವಾಪಾಸ್ ಮೈಸೂರು: ಮೈಸೂರು ನಗರದ ವಿವಿಧ ಠಾಣೆಯ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳೆದ ಮೂರು ತಿಂಗಳಲ್ಲಿ 41ಸ್ವತ್ತು ಕಳುವು ಮತ್ತು 3 ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದರು. ಮೈಸೂರು ನಗರ ಪೊಲೀಸ್ ಘಟಕದಿಂದ ಕಳೆದ 03 ತಿಂಗಳುಗಳಲ್ಲಿ ಒಂದು ದರೋಡೆ ಸಂಚು, ಎರಡು ಸುಲಿಗೆ, 10 ಕನ್ನ ಕಳುವು, 9 ಮನೆ ಕಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ. 10…

Read More

ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತುದಾರರನ್ನು ನೇಮಿಸಿಕೊಂಡು ಯೋಗ ತರಬೇತಿ ಆರಂಭಿಸಿ;ರಮೇಶ್ ಶೆಟ್ಟಿ

ಮೈಸೂರು: ಮೈಸೂರು ಜಿಲ್ಲೆಯ ಕ್ರೀಡಾ ವಸತಿ ನಿಲಯಗಳಲ್ಲಿ ಯೋಗ ತರಬೇತಿ ಆರಂಭಿಸಿ, ಅರ್ಹ ಯೋಗ ತರಬೇತುದಾರರನ್ನು ನೇಮಿಸಿ, ಯೋಗ ಕ್ರೀಡೆಗೆ ಉತ್ತೇಜನ ನೀಡಬೇಕೆಂದು ಅಂತರರಾಷ್ಟಿçÃಯ ಯೋಗ ಶಿಕ್ಷಕ ರಮೇಶ್ ಶೆಟ್ಟಿ ಒತ್ತಾಯಿಸಿದರು.ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮ,ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಅನೇಕ ಯೋಗ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದರೂ, ಪ್ರತಿಭಾವಂತ…

Read More

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಆಡಳಿತ ಎಲ್ಲರಿಗೂ ಮಾರ್ಗದರ್ಶಕವಾಗಿದೆ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಆಡಳಿತ ಎಲ್ಲರಿಗೂ ಮಾರ್ಗದರ್ಶಕವಾಗಿದೆ; ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಮಾರಿಯಮ್ಮನ ಸಮುದಾಯ ಭವನದಲ್ಲಿ ಟೀಂ ಮೈಸೂರು ತಂಡದ ವತಿಯಿಂದ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142ನೇ ಜಯಂತಿ ಹಾಗೂ 2025 – 26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಸಂಸ್ಥಾನವನ್ನಾಳಿದ ನಾಲ್ವಡಿ…

Read More

ಹಸು ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

ಮೈಸೂರು: ಹಾರ್ಟ್ ಸಂಸ್ಥೆ ವತಿಯಿಂದ ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಯುವಕರು ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ “ಹಸು ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ” ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.ಈ ತರಬೇತಿ ಕಾರ್ಯಕ್ರಮವು ಜೂನ್ 14ರಂದು ಬೆಳಿಗ್ಗೆ 10 ರಿಂದ ಸಂಜೆ 4.00 ಗಂಟೆಯವರೆಗೆ ಮೈಸೂರು ತಾಲೂಕಿನ , ಕೋಟೆಹುಂಡಿಯಲ್ಲಿರುವ ಹಾರ್ಟ್ ಸಂಸ್ಥೆಯಲ್ಲಿ ನಡೆಯಲಿದೆ.ಕಾರ್ಯಾಗಾರದಲ್ಲಿ ಪಶುಸಂಗೋಪನಾ ಮತ್ತು ಹೈನುಗಾರಿಕೆ ತಜ್ಞರು ಭಾಗವಹಿಸಿ ಹಸುಗಳ ವೈಜ್ಞಾನಿಕ ಸಾಕಾಣಿಕೆ, ಉತ್ತಮ ತಳಿಗಳ…

Read More

ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು; ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಉತ್ಸಾಹದೊಂದಿಗೆ ಆಚರಿಸಲಾಯಿತು. ಪ್ರಕೃತಿಯನ್ನು ಪೋಷಿಸುವ ಮತ್ತು ರಕ್ಷಿಸುವ ಮಹತ್ವವನ್ನು ಬಿಂಬಿಸುವAತೆ ಪ್ರಾಂಶುಪಾಲ ವೀಣಾ ಎಸ್. ಎ. ಹಾಗೂ ಮುಖ್ಯ ಶಿಕ್ಷಕಿಯರು ಸಸ್ಯಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಪರಿಸರಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಾಗೂ ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲಾಯಿತು.ಆಚರಣೆಯ ಅಂಗವಾಗಿ ಶಾಲೆಯ ಅಧ್ಯಕ್ಷ ಆರ್. ವಾಸುದೇವ ಭಟ್ ರವರು ಹತ್ತನೇ ತರಗತಿ ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ…

Read More