Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಲು ಹಾಗೂ ಗೋಪುರ ಗಳಿಗೆ ಸುಣ್ಣ- ಬಣ್ಣ

ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ನಗರದ ಚಾಮುಂಡಿಬೆಟ್ಟದ ಮೆಟ್ಟಲುಗಳ ಮೂಲಕ ತಾಯಿ ಚಾಮುಂಡೇಶ್ವರಿಯ ದರ್ಶನ ಆಗಮಿಸುವ ಹಿನ್ನೆಲೆಯಲ್ಲಿ ಮೆಟ್ಟಲುಗಳು ಹಾಗೂ ಗೋಪುರಗಳು ಸುಂದರ ಕಾಣಲು ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರು ಮೆಟ್ಟಲುಗಳಿಗೆ ಹಾಗೂ ಗೋಪುರಗಳಿಗೆ ಸುಣ್ಣ, ಬಣ್ಣ ಬಳಿಯುವ ಮೂಲಕ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಅಧ್ಯಕ್ಷ ಯದುನಂದನ್ ಜಿ, ಭಕ್ತಾದಿಗಳು ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು, ಸ್ನೇಹಿತರಲ್ಲ ಸೇರಿತಾಯಿ ಚಾಮುಂಡೇಶ್ವರಿ ಅಮ್ಮನ ಸೇವೆ ಮಾಡುವ ಮೂಲಕ ಒಂದು ಅಳಿಲು ಸೇವೆ ಮಾಡುತ್ತಿದ್ದೇವೆ…

Read More

ಭಗವಾನ್ ರಮಣ ಮಹರ್ಷಿಗಳ 146ನೇ ಜಯಂತಿ ಆಚರಣೆ

*ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ, ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳು ವಿತರಣೆಮೈಸೂರು: ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರ ಟ್ರಸ್ಟ್ ಆವರಣದಲ್ಲಿ ಭಗವಾನ್ ರಮಣ ಮಹರ್ಷಿಗಳ 146 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಲಕ್ಷ ರೂ ವರೆಗೂ ಧನಸಹಾಯ ಮಾಡಿದರು ಹಾಗೂ 100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾನಸ…

Read More

ಮೈಪಾಲ್ ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್ ನ 300 ಉದ್ಯೋಗಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

ಮೈಸೂರು: ನಗರದ ಕೆ ಆರ್ ಎಸ್ ರಸ್ತೆಯಲ್ಲಿರುವ ಮೈಸೂರು ಪಾಲಿಮರ್ಸ್ ಹಾಗೂ ರಬ್ಬರ್ ಪ್ರಾಡಕ್ಟ್÷್ಸ ಸಂಸ್ಥೆಯ 45ನೇ ವರ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ 300ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ ಡಿ ನಾಗರಾಜನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಾರ್ಮಿಕರು ಹಾಗೂ ಮಾಲೀಕರು ಎಂಬ ಭೇದಭಾವವಿಲ್ಲ. ಸಂಸ್ಥೆಯ ಏಳಿಗೆಗಾಗಿ ದುಡಿಯುವವರೆಲ್ಲರೂ ಇಲ್ಲಿ ಮಾಲೀಕರೇ. ರಕ್ತದಾನದ ಸಾಮಾಜಿಕ ಕಾರ್ಯದ ಮೂಲಕ…

Read More

ರೂಪಾಯಿ ಮೌಲ್ಯ ವೃದ್ಧಿಗೆ ರಫುö್ತ ಪ್ರಮಾಣ ಹೆಚ್ಚಳ ಅಗತ್ಯ:ಸುರೇಶ್ ಕುಮಾರ್ ಜೈನ್

ಮೈಸೂರು: ವಿದೇಶಿಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದನ್ನು ಕಡಿಮೆ ಮಾಡಿ, ನಮ್ಮ ದೇಶದಲ್ಲಿ ತಯಾರಾದ ವಸ್ತುಗಳನ್ನು ಹೊರದೇಶಗಳಿಗೆ ಹೆಚ್ಚಾಗಿ ಕಳುಹಿಸಿದಾಗ ಮಾತ್ರ ಭಾರತೀಯ ರೂಪಾಯಿಯ ಮೌಲ್ಯ ವೃದ್ಧಿಯಾಗಲು ಸಾಧ್ಯ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಹೇಳಿದರು.ಸೋಮವಾರ ನಗರದ ಹೋಟಲ್ ಪ್ರೆಸಿಡೆಂಟ್‌ನಲ್ಲಿ ಏರ್ಪಡಿಸಿದ್ದ ರಾಜ್ಯದ ರಫುö್ತ ವಲಯವನ್ನು ವಿಸ್ತರಿಸಿ, ರಫುö್ತ ಪ್ರಮಾಣವನ್ನು ಹೆಚ್ಚಿಸುವ ರಫುö್ತ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಚೀನಾದಿಂದ ಆಮದು ಮಾಡಿಕೊಳ್ಳುವ ಸೋಲಾರ್ ಪ್ಯಾನಲ್ ಸೇರಿದಂತೆ ಇನ್ನಿತರ ವಿದೇಶಿ ಉತ್ಪನ್ನಗಳಿಗೆ…

Read More

ಚಾಮುಂಡೇಶ್ವರಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಮೈಸೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಇಂದು ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಅವರು ದೇವಸ್ಥಾನಕ್ಕೆ ತೆರಳಿ ಜಗನ್ಮಾತೆ ಶ್ರೀಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ನಾಡಿನ ಅನ್ನದಾತ ರೈತರಿಗೆ ಹಾಗೂ ಜನತೆಗೆ ಒಳಿತಾಗಲೆಂದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ನಿಕಟಪೂರ್ವ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಹಾಗೂ ಅರ್ಚಕ ಸುನೀಲ್ ಉಪಸ್ಥಿತರಿದ್ದರು.

Read More

ಸೇವಾವಧಿಯಲ್ಲಿ ಮಾಡಿದ ಸಾರ್ಥಕ ಸೇವೆಯು ಎಂದಿಗೂ ಶಾಶ್ವತವಾಗಿರುತ್ತದೆ : ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಬಿ. ಕೆ

ಪಿರಿಯಾಪಟ್ಟಣ : ಸೇವಾವಧಿಯಲ್ಲಿ ಮಾಡಿದ ಸಾರ್ಥಕ ಸೇವೆಯು ಎಂದಿಗೂ ಶಾಶ್ವತವಾಗಿರುತ್ತದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್.ಬಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.  ಪಿರಿಯಾಪಟ್ಟಣ ತಾಲ್ಲೂಕು ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಇವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶ್ರೀನಿವಾಸ್ ರವರು ನಾನು ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸ್ಥಳೀಯ ಶಾಸಕರಾದ ಕೆ.ವೆಂಕಟೇಶ್ ರವರು ಸಹಕಾರ ನೀಡಿದರು ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಇಲಾಖೆ…

Read More

ಎಸ್.ಜಾನಕಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ಮೈಸೂರಿನಲ್ಲಿ ಶನಿವಾರ ನಿಧನರಾದ ಖ್ಯಾತ ಬಹುಭಾಷಾ ಗಾಯಕ ಎಸ್.ಜಾನಕಿಯವರ ನಿಧನಕ್ಕೆ ಶಾಸಕ ಟಿ.ಎಸ್.ಶ್ರಿವತ್ಸ ಅವರು ತೀವ್ರ ಸಂತಾಪ ಸೂಚಿಸಿ, ಕಂಬಿನಿ ಮಿಡಿದಿದ್ದಾರೆ.ನಗರದ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಿದ ಅವರು, ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು, ಭಾವಪೂರ್ಣ ಗೌರವ ನಮನ ಸಲ್ಲಿಸಿದರು. ಬಳಿಕ ಅಲ್ಲಿದ್ದ ಎಸ್.ಜಾನಕಿಯವರ ಕುಟುಂಬದವರಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು.

Read More

ಜಾನಕಮ್ಮನ ಅಂತಿಮ ದರ್ಶನ ಪಡೆದ ಎಸ್.ಜಯಪ್ರಕಾಶ್

ಮೈಸೂರು; ಚಿತ್ರ ನಟ ಹಾಗೂ ಬಿಜೆಪಿ ಮುಖಂಡ ಎಸ್ ಜಯಪ್ರಕಾಶ್ (ಜೆಪಿ) ಹಾಗೂ ಭಗೀರಥ ಚಿತ್ರದ ನಿರ್ಮಾಪಕರಾದ ಚೇತನ್ ರಮೇಶ್ ರವರು ಇಂದು ಮೈಸೂರಿನಲ್ಲಿ ಗಾನಕೋಗಿಲೆ ಎಸ್ ಜಾನಕಿ ರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು.ಮಹಾರಾಜ ಕಾಲ್ಭೆಜ್ ಮೈದಾನಕ್ಕೆ ಆಗಮಿಸಿದ ಅವರು, ಜಾನಕಮ್ಮನವರ ದರ್ಶನ ಪಡೆದು, ಭಾವುಕರಾಗಿ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿದರು. ಬಳಿಕ ಈ ಬಾರಿ ನಡೆಯುವ ನಾಡ ಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಎಸ್ ಜಾನಕಿ…

Read More

ಗದ್ದಿಗೆ ಮುಖ್ಯ ರಸ್ತೆಗೆ ಎಸ್.ಜಾನಕಿಯವರ ಹೆಸರಿಡಿ

ಮೈಸೂರು; ಮೈಸೂರಿನಲ್ಲಿ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಹೆಸರನ್ನು ಗದ್ದಿಗೆ ಮುಖ್ಯ ರಸ್ತೆಗೆ ನಾಮಕರಣ ಮಾಡಬೇಕೆಂದು ಎಸ್.ಜಾನಕಿಯವರ ಕೇರ್ ಟೇಕರ್ ನವೀನ್ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮನವಿಯನ್ನು ಸಿಎಂ ಈಡೇರಿಸಿದರೆ, ಜಾನಕಿ ಅವರಿಗೆ ಮೈಸೂರು ಮೇಲಿದ್ದ ಪ್ರೀತಿ ಸಾರ್ಥಕವಾಗಲಿದೆ ಎಂದು ಹೇಳಿದರು.ತಮ್ಮ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿದಾಗ ಜಾನಕಮ್ಮನವರು ತೀವ್ರ ಬೇಸರಗೊಂಡಿದ್ದರು. ಜನಗಳ ಮಧ್ಯೆ ಇರಲು ಇಷ್ಟವಿಲ್ಲ ಎಂದು ಹೇಳಿ, ಕಾಡಿಗೆ…

Read More

ಗಾನ ಕೋಗಿಲೆ ಜಾನಕಿ ಅಮ್ಮನವರ ಅಗಲಿಕೆಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಂತಾಪ

ಮೈಸೂರು: ಪ್ರಖ್ಯಾತ ಹಿನ್ನೆಲೆ ಗಾಯಕಿ, `ಗಾನ ಕೋಗಿಲೆ’ ಎಂದೇ ಖ್ಯಾತರಾದ ಜಾನಕಿ ಅಮ್ಮನವರ ಅಗಲಿಕೆಗೆ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.“ಜಾನಕಿ ಅಮ್ಮನವರ ಅಗಲಿಕೆ ನಮಗೆ ಅಪಾರ ದುಃಖವನ್ನು ಉಂಟುಮಾಡಿದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಮೈಸೂರಿಗೆ ಬಂದು ಇಲ್ಲೇ ನೆಲೆಸಿದ್ದರು. ಆಗಾಗ ಆಶ್ರಮಕ್ಕೆ ಬಂದು ಸ್ವಾಮೀಜಿಯವರ ದರ್ಶನ ಪಡೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಕೇವಲ ದರ್ಶನ ಪಡೆದುಕೊಂಡು ಹೋಗುತ್ತಿದ್ದರು,” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.ಸ್ವಾಮೀಜಿಯವರ ಕುರಿತು ಹಾಡಿದ್ದ…

Read More