3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಿರುಪಯುಕ್ತ ಹಾಳೆಗಳಿಂದ ತಯಾರಿಸಿದ ನೋಟ್ ಪುಸ್ತಕ ವಿತರಣೆ


ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ನಿತೀಶ್ ಪಾಟೀಲ್‌ರಿಂದ ಶಾಲಾ ಮಕ್ಕಳಿಗೆ ಹಸ್ತಾಂತರ
ಮೈಸೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆ, ಪೀಪಲ್ಸ್ ಪಾರ್ಕ್ನಲ್ಲಿರುವ ನಗರ ಕೇಂದ್ರ ಗ್ರಂಥಾಲಯ, ಬಾಲ್ಯ ಫೌಂಡೇಷನ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕಗಳ ಬಳಕೆಯಾಗದ ಹಾಳೆಗಳನ್ನು ಮರುಬಳಕೆ ಮಾಡಿಕೊಂಡು ತಯಾರಿಸಿದ ನೋಟ್ ಪುಸ್ತಕಗಳನ್ನು ನಗರದ ನಾನಾ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ನೋಟ್ ಪುಸ್ತಕಗಳಲ್ಲಿ ಬಳಕೆಯಾಗದೇ ಉಳಿಯುವ ಖಾಲಿ ಪುಟಗಳು ಮತ್ತೊಬ್ಬರ ಶೈಕ್ಷಣಿಕ ಅಭ್ಯಾಸಕ್ಕೆ ದಾರಿ ದೀಪವಾಗಬಲ್ಲದು. ಹಾಗಾಗಿ ಅಂತಹ ಖಾಲಿ ಪುಟಗಳನ್ನು ಸಂಗ್ರಹಿಸಿ, ಅದಕ್ಕೆ ಪುಸ್ತಕ ರೂಪ ನೀಡಿ, ಬಡ ಮಕ್ಕಳಿಗೆ ನೀಡುವ ಅಭಿಯಾನಕ್ಕೆ ಕೆಲ ದಿನಗಳ ಹಿಂದೆ ಚಾಲನೆ ನೀಡಿತ್ತು. ಈ ಕಾರ್ಯಕ್ರಮದ ಧ್ಯೇಯೋದ್ದೇಶದಂತೆ ಬುಧವಾರ ಹೀಗೆ ತಯಾರಾದ ಪುಸ್ತಕಗಳನ್ನು ನಗರದ ಸಿಎಸ್‌ಐ ವಿಕ್ಟೋರಿಯಾ ಶಾಲೆ, ಗಾಡಿಚೌಕ ಹಿರಿಯ ಪ್ರಾಥಮಿಕ ಶಾಲೆ, ಮಹಜನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪುನರ್ ಬಳಕೆಗೆ ನೀಡಲಾಯಿತು. ಅಲ್ಲದೇ ಅಭಿಯಾನಕ್ಕೆ ನೆರವಾಗುವ ಉದ್ದೇಶದಿಂದ ತಾವು ಬಳಕೆ ಮಾಡಿದ ನೋಟ್ ಪುಸ್ತಕದಲ್ಲಿ ಉಳಿದ ಖಾಲಿ ಹಾಳೆಗಳನ್ನು ಅಭಿಯಾನದ ಬಳಕೆಗೆ ಶಾಲೆ ಮಕ್ಕಳು ನೀಡಿದರು.
ಈ ಅಭಿಯಾನಕ್ಕೆ ಕೈ ಜೋಡಿಸುವವರು ಬಳಕೆಯಾಗದೇ ಉಳಿಯುವ ನೋಟ್ ಪುಸ್ತಕದ ಹಾಳೆಗಳನ್ನು ಸಾರ್ವಜನಿಕರು ನಗರದಲ್ಲಿರುವ ಸಾರ್ವಜನಿಕರಿಂದ ಗ್ರಂಥಾಲಯಗಳಿಗೆ ನೀಡಿದರೆ. ಅದನ್ನು ಬಾಲ್ಯ ಫೌಂಡೇಷನ್ ಸೇರಿದಂತೆ ಇನ್ನಿತರ ಕೆಲ ಸಂಘ ಸಂಸ್ಥೆಗಳು ಅದನ್ನು ಸ್ವೀಕರಿಸಿ ವ್ಯವಸ್ಥಿತವಾಗಿ ಬೈಂಡಿAಗ್ ಮಾಡಿಸಲಿವೆ. ನಂತರ ಅದನ್ನು ಅಗತ್ಯವಿರುವವರಿಗೆ ನೀಡುವ ಮೂಲಕ ಹಾಳೆ ತಯಾರಿಸಲು ಮರ ಕಡಿಯುವ ಪ್ರಮಾಣವನ್ನು ತಗ್ಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ನಿತೀಶ್ ಪಾಟೀಲ್ ಅವರು, ಮರು ಬಳಕೆಗೆ ಸಿದ್ದವಾಗಿರುವ ನೋಟ್ ಪುಸ್ತಕವನ್ನು ಶಾಲೆ ಮಕ್ಕಳಿಗೆ ವಿತರಿಸಿ ಮಾತನಾಡಿ, ನೋಟ್ ಪುಸ್ತಕಗಳ ಖಾಲಿ ಹಾಳೆ ಬಳಕೆಯಿಂದ ಮರಗಳ ಕಡಿಯುವ ಪ್ರಮಾಣ ತಗ್ಗುತ್ತದೆ. ಹಾಗಾಗಿ ಇದೊಂದು ಪರಿಸರ ಸ್ನೇಹಿ ಅಭಿಯಾನವಾಗಿದೆ. ಮಕ್ಕಳು ಬಳಕೆಯಾಗದ ಹಾಳೆಗಳನ್ನು ನೀಡುವ ಮೂಲಕ ಬೇರೆಯವರ ಶಿಕ್ಷಣ ಮುಂದುವರಿಕೆಗೆ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ಮಕ್ಕಳ ಸ್ಕಿçÃನ್ ಟೈಂ ಹೆಚ್ಚಾಗುವುದರಿಂದ ಅವರ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಮಕ್ಕಳು ಮೊಬೈಲ್ ಬಳಕೆಯನ್ನು ಆದಷ್ಟು ತಗ್ಗಿಸಿ ಕೇವಲ ಓದಿಗಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೇಖಕ ರಮೇಶ್ ಉತ್ತಪ್ಪ ಅವರು ನೋಟ್ ಪುಸ್ತಕಗಳ ಮರುಬಳಕೆ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಮರುಬಳಕೆ ಪರಿಕಲ್ಪನೆಯೇ ಒಂದು ಹೆಮ್ಮೆಯ ಅದ್ಬುತ ಚಿಂತನೆಯಾಗಿದೆ. ಇದರಿಂದ ರಾಷ್ಟçದ ಪ್ರಗತಿಗೆ ಕೊಡುಗೆ ನೀಡಿದಂತಾಗುತ್ತದೆ. ಹಾಗಾಗಿ ಹಳೆಯ ಪುಸ್ತಕ ಬಳಕೆ ಮಾಡುವುದನ್ನು ತಪ್ಪಾಗಿ ಭಾವಿಸದೇ ಆ ರೀತಿಯ ಬಳಕೆಯಿಂದ ನೀವು ರಾಷ್ಟçದ ಪ್ರಗತಿಗೆ ಕೊಡುಗೆ ನೀಡುತ್ತಿದ್ದೀರಿ ಎಂದು ಹೆಮ್ಮೆಪಡಬೇಕು. ಈ ಉಪಯುಕ್ತ ಅಭಿಯಾನ ಇನ್ನೂ ಹೆಮ್ಮರವಾಗಿ ಬೆಳೆಯಲೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್, ಬಿಇಒಗಳಾದ ಕೃಷ್ಣ, ರೇವಣ್ಣ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ, ಮಹಾರಾಜ ಕಾಲೇಜು ಪ್ರಾಂಶುಪಾಲ ಡಾ.ವಿ. ಷಣ್ಮುಗಂ, ಬಾಲ್ಯ ಫೌಂಡೇಷನ್ ಸಂಸ್ಥಾಪಕ ಕೆ.ಎಸ್. ಅನೀಲ್ ಹಾಗೂ ಇತರರು ಇದ್ದರು.