Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

13 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಮಾಪನ


ಮೈಸೂರು ; ಗ್ರೂಪ್ ಹೆಚ್‍ಕ್ಯೂ ಎನ್‍ಸಿಸಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ 13 ಕರ್ನಾಟಕ ಬೆಟಾಲಿಯನ ಎನ್‍ಸಿಸಿಯ ಸಂಯೋಜಿತ ವಾರ್ಷಿಕ ಥಲ್ ಸೈನಿಕ್ ಶಿಬಿರ ವನ್ನು ಮೈಸೂರಿನ ಪೆÇಲೀಸ ತರಬೇತಿ ಶಾಲೆಯಲ್ಲಿ ಜೂನ್ 11 ರಿಂದ 20 ರವರೆಗೆ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಸಂಜೀವ ಯಮನಪ್ಪ ಕೊಡತೆ ಮತ್ತು ಉಪ ಶಿಬಿರ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಅರುಣ ಪ್ರಕಾಶ ಮೌರ್ಯ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ 113 ಟಿಎಸ್‍ಸಿ ಕೆಡೆಟ್‍ಗಳು ಸೇರಿದಂತೆ ಮೈಸೂರು ಗ್ರೂಪ್‍ನ ವಿವಿಧ ಘಟಕಗಳಿಂದ ಒಟ್ಟು 593 ಕೆಡೆಟ್‍ಗಳು ಭಾಗವಹಿಸಿದರು. ಇದರೊಂದಿಗೆ 2 ಅಧಿಕಾರಿಗಳು, 6 ಎಎನ್‍ಒಗಳು, 27 ಪಿಐ ಸಿಬ್ಬಂದಿ, 2 ಜಿಸಿಐಗಳು, 6 ನಾಗರಿಕ ಕಚೇರಿ ಸಿಬ್ಬಂದಿ ಸೇರಿ ಒಟ್ಟು 634 ಜನರ ಆಹಾರ ವ್ಯವಸ್ಥೆ ಹೊಂದಿದ್ದ ಶಿಬಿರ ಇದಾಗಿತ್ತು. ಶಿವಕುಮಾರ, ಪ್ರಭುಸ್ವಾಮಿ, ಮಂಜುನಾಥ, ಶಶಿಕುಮಾರ, ಲಕ್ಷ್ಮಿ ಮತ್ತು ಪ್ರಸನ್ನ ಎಂಬ ವಿವಿಧ ಶಾಲಾ-ಕಾಲೇಜುಗಳ ಎಎನ್‍ಒಗಳು ಶಿಬಿರದ ತರಬೇತಿ ಮತ್ತು ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ದೈಹಿಕ ಸಾಮರ್ಥ್ಯ, ತಂಡ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಉತ್ತೇಜಿಸಲು ಪ್ರತಿದಿನ ಯೋಗ, ದೈಹಿಕ ತರಬೇತಿ, ಕ್ರೀಡೆಗಳು, ರಸಪ್ರಶ್ನೆ ಸ್ಪರ್ಧೆಗಳು, ಚರ್ಚೆಗಳು, ಲೆಕ್ಚರೆಟ್‍ಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ನಡೆಸಲಾಯಿತು.
ಆರೋಗ್ಯ ಮತ್ತು ನೈರ್ಮಲ್ಯ, ಪ್ರಥಮ ಚಿಕಿತ್ಸೆ, ಪೆÇೀಕ್ಸೋ ಜಾಗೃತಿ, ಸೈಬರ್ ಸುರಕ್ಷತೆ, ಮೊಬೈಲ್ ವ್ಯಸನ ಮುಕ್ತತೆ, ರಸ್ತೆ ಸುರಕ್ಷತೆ, ಅಗ್ನಿ ಸುರಕ್ಷತೆ ಮತ್ತು ಮೈಸೂರು ಜಿಲ್ಲಾ ಪೆÇಲೀಸರ ಶ್ವಾನ ದಳದ ಪ್ರದರ್ಶನ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು.
ಆಯುರ್ವೇದ ವೈದ್ಯೆ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಪೆÇೀಷಕರಾದ ಡಾ. ಗೀತಾ ಸೈದಾಪುರ, ಅವರು ಲೆಫ್ಟಿನೆಂಟ್ ಕರ್ನಲ್ ಸಂಜೀವ ಯಮನಪ್ಪ ಕೊಡತೆ ಅವರ ಪತ್ನಿ, ಶಿಬಿರದ ಸಂದರ್ಭದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳ ಕುರಿತು ಅಧಿವೇಶನ ನಡೆಸಿದರು. ಅವರು ಶಿಬಿರದ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿದರು. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳಿಲ್ಲದೆ ಶಿಬಿರವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು/
ಪಿಟಿಎಸ್‍ನ ಉಸ್ತುವಾರಿ ಪ್ರಾಂಶುಪಾಲ ಅಡಿಷನಲ್ ಎಸ್‍ಪಿ ಮಲ್ಲಿಕ್ ಸಿ ಅವರ ಸಂಪೂರ್ಣ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.