Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ ಧ್ಯಾನ ಮಾಡಬೇಕಾಗಿದೆ; ಡಾ.ಎ. ಎಸ್ ಚಂದ್ರಶೇಖರ್


ಮೈಸೂರು; ನಗರದ ಹೂಟಗಳ್ಳಿಯಲ್ಲಿರುವ ಶ್ರೀ ಪರಮಹಂಸ ಯೋಗ ಶಿಕ್ಷಣ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 12ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಎ. ಎಸ್ ಚಂದ್ರಶೇಖರ್ ಮಾತನಾಡಿ, ಇಂದು ಕಲುಷಿತವಾಗಿರುವ ವಾತಾವರಣದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ. ಆರೋಗ್ಯವಂತ ಪ್ರಜೆಗಳಾಗಬೇಕಾದರೆ ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಪ್ರಾಣಾಯಾಮ, ಧ್ಯಾನ ಮಾಡಬೇಕಾಗಿದೆ. ದೈಹಿಕ , ಮಾನಸಿಕ, ಆಧ್ಯಾತ್ಮಿಕ ಮತ್ತು ಭೌತಿಕ ಸಾಧನೆಗೆ ಯೋಗವು ಅತ್ಯವಶ್ಯಕ. ಆರೋಗ್ಯವಂತ ಪ್ರಜೆಗಳಾದರೆ ಆರೋಗ್ಯವಂತ ದೇಶವನ್ನು ಕಟ್ಟಬಹುದು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಯೋಗದ ಬಗ್ಗೆ ಹಲವಾರು ಸಲಹೆಗಳನ್ನು ನೀಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಯೋಗ ವಿದ್ಯೆಯನ್ನು ನೀಡಿ, ತಮ್ಮ ಮಕ್ಕಳು ಸಮಾಜದಲ್ಲೇ ಸತ್ಪ್ರಜೆಗಳಾಗಿ ಬೆಳೆಯಲು ಗಮನವನ್ನು ನೀಡಿ ಎಂದರು.
ಕಾರ್ಯಕ್ರಮದಲ್ಲಿ ಶ್ರೀಪರಮ ಹಂಸ ಯೋಗ ಶಿಕ್ಷಣ ಮಂದಿರದ ಅಧ್ಯಕ್ಷರೂ ಆದ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜು, ಗೌರವ ಅಧ್ಯಕ್ಷ ಟಿ. ಜಲೇಂದ್ರ ಕುಮಾರ್, ಹರ್ಷಿತ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.
ನಂತರ ಸಂಘ ಚತ್ವಂ ಪ್ರಾರ್ಥಎನ್ನು ಶ್ರೀ ಪರಮ ಹಂಸ ಯೋಗ ಶಿಕ್ಷಣ ಮಂದಿರದ ಶಿಕ್ಷಣಾರ್ಥಿಗಳೊಂದಿಗೆ ಪ್ರಾರ್ಥನೆಯು ನಡೆಯಿತು. ನಂತರ ಕೆಜಿ ದೇವರಾಜು ರವರು ಯೋಗಾಸನಕ್ಕೆ ಚಾಲನೆ ನೀಡಿದರು.
ತಡಾಸನ, ಆದಷ್ಟಾಸನ, ಅರ್ಧ ಚಕ್ರಾಸನ, ತ್ರಿಕೋಣಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕ್ ಆಸನ, ಉತ್ತಾನ ಮಂಡೂಕಾಸನ, ವಕ್ರಸನ, ಮಕರಾಸನ, ಭುಜಂಗಾಸ, ಶಾಲಾಭಾಸನ, ಸೇತುಬಂಧನ, ಉತ್ತಾನ ಪಾದಾಸನ, ಪವನಮುಕ್ತಾಸನ, ಶವಾಸನ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.