
ಮೈಸೂರು; ಜಿಲ್ಲೆಯ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪಂಚಮುಖಿ ಆಂಜನೇಯ ಹಾಗೂ ಲಕ್ಷ್ಮಿನರಸಿಂಹ ಮೂರ್ತಿಗಳು ಮೈಸೂರಿನ ಶ್ರೀ ಗಣಪತಿ ಆಶ್ರಮಕ್ಕೆ ಆಗಮಿಸಿದವು.ಕಂಚಿಯಲ್ಲಿ ಸಿದ್ದವಾದ 6 ಅಡಿ ಎತ್ತರದ ಲಕ್ಷ್ಮಿನರಸಿಂಹ ಹಾಗೂ ಕೋಲಾರದ ಮಾಲೂರಿನಲ್ಲಿ ಸಿದ್ದವಾದ 5.5 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹಗಳು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಮುನ್ನ ಗಣಪತಿ ಆಶ್ರಮಕ್ಕೆ ತಲುಪಿತು. ದತ್ತ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿಗಳು ವಿಗ್ರಹಗಳಿಗೆ ವಿಶೇಷ ಪೂಜೆ ನೆರವೇರಿಸಿ, ಗಟ್ಟವಾಡಿ ಗ್ರಾಮಕ್ಕೆ ಬೀಳ್ಕೊಟ್ಟರು. ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ, ನಗರಪಾಲಿಕೆಯ ಮಾಜಿ ಸದಸ್ಯ ಮ.ವಿ.ರಾಂಪ್ರಸಾದ್, ಬಿಜೆಪಿ ಮುಖಂಡ ಪ್ರದೀಪ್ಕುಮಾರ್, ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಗಮಧ್ಯ ಮೂರ್ತಿಗಳಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನೆರವೇರಿದ ನಂತರ ಶ್ರೀ ಸುಭ್ರಹ್ಮಣ್ಯ ಕ್ಷೇತ್ರ ತಲುಪಿತು.