Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಿವಿಲ್ ಕಾನ್‌ಸ್ಟೆಬಲ್ಸ್ ಅಣುಕು ಪರೀಕ್ಷೆ ಉದ್ಘಾಟನೆ: ಯಶಸ್ಸಿಗೆ ಶಿಸ್ತು ಮತ್ತು ಅಣುಕು ಪರೀಕ್ಷೆಗಳು ಅತ್ಯಗತ್ಯ: ನಿತೀಶ್ ಪಾಟೀಲ್


ಮೈಸೂರು: ಅಭ್ಯರ್ಥಿಗಳು ಮನೆಯಲ್ಲಿ ಎಷ್ಟೇ ಓದಿದರೂ ಪರೀಕ್ಷಾ ಕೇಂದ್ರದ ವಾತಾವರಣ, ಅಲ್ಲಿನ ಒತ್ತಡ ಮತ್ತು ಸಮಯದ ನಿರ್ವಹಣೆಗೆ ಅಣುಕು ಪರೀಕ್ಷೆಗಳು ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಅವರು ಹೇಳಿದರು.
ಮಂಗಳವಾರ ನಗರದ ಪೀಪಲ್ಸ್ ಪಾರ್ಕ್ನಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಹಾಗೂ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ವಿಜಯನಗರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪೋಲೀಸ್ ಇಲಾಖಾ(ಸಿವಿಲ್ ಕಾನ್ಹೇಬಲ್ಸ್) ನೇಮಕಾತಿಯ “ಅಣುಕು” ಪರೀಕ್ಷೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸ್ಪರ್ಧಾ ಅಭ್ಯರ್ಥಿಗಳು ಒಎಂಆರ್ ಶೀಟ್‌ಗಳನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳು ಮಾಡುವ ಸಣ್ಣಪುಟ್ಟ ತಪುö್ಪಗಳಿಂದ, ಇಡೀ ಪರೀಕ್ಷೆಯೇ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಂತಹದೇ ತಪುö್ಪಗಳಿದ್ದರೂ ಅವುಗಳನ್ನು ಮಾಕ್ ಟೆಸ್ಟ್ಗಳಲ್ಲೇ ತಿದ್ದಿಕೊಳ್ಳಬೇಕು. ನೀವು ದಿನಕ್ಕೆ 12 ರಿಂದ 16 ಗಂಟೆ ಓದಿದರೂ, ಮಾಕ್ ಟೆಸ್ಟ್ ಬರೆಯದಿದ್ದರೆ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಕಷ್ಟ ಎಂದರು. ಅಭ್ಯರ್ಥಿಗಳು ತಮ್ಮ ಒಟ್ಟು ಅಧ್ಯಯನದ ಅವಧಿಯಲ್ಲಿ ಕನಿಷ್ಠ ಶೇ. 30 ರಷ್ಟು ಸಮಯವನ್ನು ಮಾಕ್ ಟೆಸ್ಟ್ಗಳಿಗಾಗಿ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಸರ್ಕಾರಿ ಉದ್ಯೋಗವನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಪಡಲೇಬೇಕು, ಅದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂದು ಹೇಳಿದರು.
ಕೇವಲ ಐಎಎಸ್ ಪರೀಕ್ಷೆ ಮಾತ್ರವಲ್ಲದೆ, ಕೆಪಿಎಸ್‌ಸಿ, ಪಿಡಿಒ, ಬ್ಯಾಂಕ್ ಪರೀಕ್ಷೆಗಳು ಹಾಗೂ ಆರ್‌ಬಿಐ ಪರೀಕ್ಷೆಗಳನ್ನು ಬರೆದಿದ್ದೆ. ಯಾವುದೇ ಗುರಿಯನ್ನು ತಲುಪಲು ಇತರ ಪರೀಕ್ಷೆಗಳನ್ನು ಕೀಳಾಗಿ ಕಾಣಬಾರದು ಎಂದು ಕಿವಿ ಮಾತು ಹೇಳಿದರು.
ಯಾವ ಹುದ್ದೆಯೂ ಸಣ್ಣದಲ್ಲ ಮೊದಲು ಕಾನ್ಸ್ಟೇಬಲ್ ಆಗಿ, ನಂತರ ಪಿಎಸ್‌ಐ ಹಾಗೂ ಐಪಿಎಸ್ ಹುದ್ದೆಯನ್ನೂ ಅಲಂಕರಿಸಬಹುದು. ನನ್ನ ಬ್ಯಾಚ್‌ನಲ್ಲಿದ್ದ ನರ್ಸ್ ಒಬ್ಬರು ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಮುಕ್ತ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಓದಿದವರೂ ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ ಎಂದು ಉದಾಹರಣೆ ನೀಡಿದರು.
ಇಂಗ್ಲಿಷ್ ಬರುವುದಿಲ್ಲ ಎನ್ನುವ ಕೀಳರಿಮೆ ಬೇಡ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಹ ಯುಪಿಎಸ್‌ಸಿ ಪಾಸ್ ಮಾಡಿದ್ದಾರೆ. ನಾನು ಕೂಡ ಮುಂಚೆ ಕನ್ನಡ ಮಾಧ್ಯಮದಲ್ಲೇ ಓದಿದ್ದು, ನನ್ನ ಒಂದು ಐಚ್ಛಿಕ ವಿಷಯ ಕನ್ನಡ ಸಾಹಿತ್ಯವಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ ಮಾಜಿ ಕಮಿಷನರ್ ಗುರುದತ್ ಹೆಗಡೆ ಮತ್ತು ಬಿಜಾಪುರದ ಹಾಲಿ ಎಸ್ಪಿ ಲಕ್ಷ÷್ಮಣ್ ನಿಂಬರಗಿ ಅವರಂತಹ ಅಧಿಕಾರಿಗಳು ಇಂಗ್ಲಿಷ್ ಮಾಧ್ಯಮದ ಹಿನ್ನೆಲೆಯವರಾಗಿದ್ದರೂ, ಯುಪಿಎಸ್‌ಸಿ ಪರೀಕ್ಷೆಯ ಎಲ್ಲಾ ಪತ್ರಿಕೆಗಳನ್ನು ಕನ್ನಡದಲ್ಲೇ ಬರೆದು ತೇರ್ಗಡೆಯಾಗಿದ್ದಾರೆ. ಭಾಷೆಗಿಂತ ಕಠಿಣ ಪರಿಶ್ರಮ ಮುಖ್ಯ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಕ್ಷಣದ ಫಲಿತಾಂಶವನ್ನು ನಿರೀಕ್ಷಿಸಬಾರದು. ಮೊದಲ ಆರು ತಿಂಗಳು ಏನು ಓದಬೇಕು ಎನ್ನುವ ಗೊಂದಲವೇ ಇರುತ್ತದೆ. ಆದರೆ ಸತತವಾಗಿ ಏಳು-ಎಂಟು ವರ್ಷಗಳ ಕಾಲ ಪ್ರಯತ್ನಿಸಿ ಯಶಸ್ಸು ಕಂಡವರೂ ಇದ್ದಾರೆ. ಅಭ್ಯರ್ಥಿಗಳು ಶಿಸ್ತನ್ನು ಬೆಳೆಸಿಕೊಂಡು, ಮಾಕ್ ಟೆಸ್ಟ್ಗಳ ಮೂಲಕ ತಮ್ಮ ತಪುö್ಪಗಳನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯಬೇಕು. ಆಡಳಿತ ಮಂಡಳಿಯು ಸದಾ ಅಭ್ಯರ್ಥಿಗಳ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್.ಬಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಮುಖ್ಯಸ್ಥ ರಮೇಶ್ ನರಸಯ್ಯ ಮತ್ತಿತರರು ಉಪಸ್ಥಿತರಿದ್ದರು.