Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ; ಜಿ.ಪಂ ಸಿಇಒ ಎಚ್ಚರಿಕೆ


ಜೂನ್ ತಿಂಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಗ್ರಾಪಂಗಳಿಗೆ ಪ್ರಶಸ್ತಿ ಪತ್ರ ವಿತರಣೆ
ಮೈಸೂರು: ಇ-ಹಾಜರಾತಿ, ಸಕಾಲ,ಮಾನವ ದಿನಗಳ ಸೃಜನೆ,ಕಂದಾಯ ವಸೂಲಾತಿ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ 255 ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ,ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬAಧಿಸಿದAತೆ ರಾಜ್ಯದ ಪ್ಯಾರಾಮೀಟರ್ಸ್ ನಲ್ಲಿ ಮೈಸೂರು ಜಿಲ್ಲೆಯು ಮೊದಲನೇ ಸ್ಥಾನದಲ್ಲಿದ್ದು,ದಕ್ಷಿಣಕನ್ನಡ,ಉಡುಪಿ ಜಿಲ್ಲೆಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಅದೇರೀತಿ ಮೈಸೂರು ಜಿಲ್ಲೆಯು ಮುಂದಿನ ದಿನಗಳಲ್ಲಿ ತನ್ನ ಕ್ರಮಾಂಕವನ್ನು ಉಳಿಸಿಕೊಳ್ಳಬೇಕಾದರೆ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಗ್ರಾಪಂಗಳಲ್ಲಿ ಸುಗಮವಾಗಿ ಕೆಲಸ ಆಗುವಂತೆ ಪ್ಲಾನ್ ಮಾಡಿಕೊಳ್ಳಬೇಕು. ಆಯಾಯ ದಿನದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸದಿದ್ದರೆ, ಒತ್ತಡ ಬೀಳಲಿದೆ. ಇ-ಹಾಜರಾತಿಯು ಶೇ.100ರಷ್ಟು ಆಗಬೇಕು. ಇಲ್ಲದಿದ್ದರೆ ಅಂತಹ ಪಂಚಾಯಿತಿಗಳ ಬಗ್ಗೆ ನಿಗಾ ಇಡಲಾಗುವುದು ಎಂದು ಹೇಳಿದರು.
ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಪಂ ಸಾಧನೆ ಮಾಡದ ಬಗ್ಗೆ ಪ್ರಸ್ತಾಪಿಸಿದಕ್ಕೆ, ಸಿಬ್ಬಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ಇರುವ ಕಾರಣ ಅಮಾನತುಪಡಿಸಲಾಗಿದೆ. ಹೀಗಾಗಿ,ಬೇರೆ ಪಂಚಾಯಿತಿಯವರನ್ನು ನಿಯೋಜನೆ ಮೇರೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಾ.ಪ. ಇಒ ಹೇಳಿದರು. ಇದಕ್ಕೆ ತೃಪ್ತರಾಗದ ಸಿಇಒ, ಕ್ರಿಮಿನಲ್ ಮೊಕದ್ದಮೆ ಇದ್ದರೆ, ಅಂತಹವರನ್ನು ಸೇವೆಯಿಂದ ವಜಾಗೊಳಿಸಿ ಬೇರೆಯವರ ನೇಮಕಕ್ಕೆ ಕ್ರಮಕೈಗೊಳ್ಳಿ. ನೀವು ತಕ್ಷಣವೇ ವರದಿ ನೀಡಿದರೆ ಅದರ ಬಗ್ಗೆ ಗಮನಹರಿಸಲಾಗುವುದು. ಈ ಬಗ್ಗೆ ಸೂಕ್ತ ವರದಿ ನೀಡಿ ಕ್ರಮಜರುಗಿಸುವಂತೆ ನಂಜನಗೂಡು ತಾಪಂ ಇಒಗೆ ಸೂಚಿಸಿದರು. ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಪಂನಲ್ಲಿ ಸಕಾಲ,ಇ-ಹಾಜರಾತಿ,ಇ-ಸ್ವತ್ತು ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಪ್ರಗತಿಯಾಗದಿರುವ ಅಂಶವನ್ನು ಗುರುತಿಸಿ ತರಾಟೆಗೆ ತಗೆದುಕೊಂಡರು. ಈ ವೇಳೆ ಇಒ ಅವರು ಪರಸ್ಪರ ಹೊಂದಾಣಿಕೆ ಇಲ್ಲದೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸರಿಪಡಿಸಲಾಗಿದೆ. ಕೆಲವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲ್ಲ ಎನ್ನುವ ದೂರುಗಳು ಬಂದಿವೆ ಎಂದರು. ಇದಕ್ಕೆ ಅತೃಪ್ತಿವ್ಯಕ್ತಪಡಿಸಿದ ಎಸ್.ಯುಕೇಶ್‌ಕುಮಾರ್, ಸಮರ್ಪಕವಾಗಿ ಕೆಲಸ ಮಾಡದ ಪಿಡಿಒಗಳು ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ನೀವು ವ್ಯವಸ್ಥೆಯನ್ನು ಹಾಳು ಮಾಡುವುದಲ್ಲದೆ, ಬೇರೆಯವರನ್ನು ಹಾಳು ಮಾಡಲು ದಾರಿ ತೋರಬೇಡಿ ಎಂದು ಚಾಟಿ ಬೀಸಿದರು. ಕೆ.ಆರ್.ನಗರ ತಾಲ್ಲೂಕಿನ ಡೋರನಹಳ್ಳಿ ಗ್ರಾಪಂನಲ್ಲಿ ಸ್ವಚ್ಚತಾ ಸಿಬ್ಬಂದಿ ಒಂದು ವರ್ಷದಿಂದ ಗೈರಾಗಿರುವ ಬಗ್ಗೆ ಪಿಡಿಒ ಹೇಳಿದಕ್ಕೆ ಕಿಡಿಕಾರಿದ ಸಿಇಒ, ಒಬ್ಬ ಸಿಬ್ಬಂದಿಯ ಮೇಲೆ ಕ್ರಮಜರುಗಿಸಲು ಶಕ್ತಿ ಇಲ್ಲವೇ? ಹೆದರಿಕೊಂಡುಕೆಲಸ ಮಾಡಿದರೆ, ಆರ್‌ಡಿಪಿಆರ್ ಇಲಾಖೆಯಲ್ಲಿ ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲ. ಯೂನಿಯನ್‌ನವರು ಬಂದು ಗಲಾಟೆ ಮಾಡುತ್ತಾರೆ ಎಂದರೆ ಏನರ್ಥ.ಅವರೇನಾ ಆಡಳಿತ ನಡೆಸೋದು ಎಂದು ಪ್ರಶ್ನಿಸಿದರು. ಬಿ.ಶೆಟ್ಟಹಳ್ಳಿ,ದೊಡ್ಡೇಬಾಗಿಲು, ಬ್ಯಾಡರಹಳ್ಳಿ, ಮುತ್ತಲವಾಡಿ,ಉಯಿಗೋಡನಹಳ್ಳಿಯಲ್ಲಿ ಶೇ.50ರಷ್ಟು ಪ್ರಗತಿಯಾಗಿರುವುದಕ್ಕೆ ಬೇಸರವ್ಯಕ್ತಪಡಿಸಿದರಲ್ಲದೆ, ಕಳೆದ ತಿಂಗಳು ತೀರಾ ಕಡಿಮೆ ಇರುವಂತಹ ಪಂಚಾಯಿತಿಗಳಿಗೆ ನೋಟಿಸ್ ಜಾರಿಗೊಳಿಸಿದಂತೆ ನಿಮಗೂ ನೋಟಿಸ್ ಕೊಡಬೇಕಾಗುತ್ತದೆ.ಮುಂದಿನ ತಿಂಗಳ ಹೊತ್ತಿಗೆ ಶೇ.100ರಷ್ಟು ಪ್ರಗತಿ ತೋರಿಸಬೇಕು ಎಂದು ಸೂಚನೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಭೀಮೇಶ್ ಕೆ.ಲಾಳಿಗೆ ಹಾಜರಿದ್ದರು.
ಉತ್ತಮ ಪ್ರಗತಿಸಾಧಿಸಿದ ಗ್ರಾಪಂಗಳಿಗೆ ಪ್ರಶಸ್ತಿ ವಿತರಣೆ ;
ಇದೇ ವೇಳೆ ಜೂನ್ ತಿಂಗಳಲ್ಲಿ ಪಂಚಾಯತ್‌ರಾಜ್, ಉದ್ಯೋಗ ಖಾತರಿ ಯೋಜನೆ, ಸ್ವಚ್ಚಭಾರತ್ ಮಿಷನ್,ವಸತಿ ಯೋಜನೆ ಉತ್ತಮ ಪ್ರಗತಿ ಸಾಧಿಸಿದ ಗ್ರಾಪಂಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲೆ ಮಟ್ಟದ ಪಂಚಾಯಿತಿಗಳ ಪೈಕಿ ಹೊರಳವಾಡಿ, ವಾಜಮಂಗಲ, ಹನುಮನಾಳು, ಹೊಸಕೋಟೆ,ಬಿ.ಶೆಟ್ಟಿಹಳ್ಳಿ, ತಾಲ್ಲೂಕು ಮಟ್ಟದ ಗುಂಪಿನಲ್ಲಿ ನಂಜನಗೂಡು, ತಿ.ನರಸೀಪುರ,ಸರಗೂರು, ತಾಲ್ಲೂಕು ಮಟ್ಟದ ಗ್ರಾಪಂಗಳಲ್ಲಿ ತಿ.ನರಸೀಪುರ ತಾಲ್ಲೂಕಿನ ಮೂಗೂರು,ಕಲಿಯೂರು, ಗರ್ಗೇಶ್ವರಿ, ಹುಣಸೂರು ತಾಲ್ಲೂಕಿನ ಬೋಳನಹಳ್ಳಿ, ತಟ್ಟೇಕೇರಿ, ಧರ್ಮಾಪುರ, ಸಾಲಿಗ್ರಾಮ ತಾಲ್ಲೂಕಿನ ತಂದ್ರೆ,ಹರದನಹಳ್ಳಿ, ಚನ್ನಂಗೇರೆ, ಕೆ.ಆರ್.ನಗರ ತಾಲ್ಲೂಕಿನ ಹಂಪಾಪುರ, ಅಡಗೂರು, ಲಾಳಂದೇವನಹಳ್ಳಿ, ನಂಜನಗೂಡು ತಾಲ್ಲೂಕಿನ ಹುಳಿಮಾವು, ಬಿಳಿಗೆರೆ, ಹಗಿನವಾಳು, ಮೈಸೂರು ತಾಲ್ಲೂಕಿನ ಆನಂದೂರು, ಜಯಪುರ, ಎಂ.ಬಿ.ಹಳ್ಳಿ,ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ, ಚಕ್ಕೋಡನಹಳ್ಳಿ, ನೂರಲಕುಪ್ಪೆ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ, ರಾವಂದೂರು, ಪಂಚವಳ್ಳಿ, ಸರಗೂರು ತಾಲ್ಲೂಇನ ಹಂಚೀಪುರ, ಮುಳ್ಳೂರು,ಕೆ.ಬೆಳತ್ತೂರು ಗ್ರಾಪಂಗಳಿಗೆ ಪ್ರಶಸ್ತಿ ವಿತರಿಸಲಾಯಿತು.