
• 100ಕ್ಕೂ ಹೆಚ್ಚು ಗುಜರಾತ್ ಕರಕುಶಲ ಕಲಾವಿದರ ವೈವಿಧ್ಯಮಯ ಕಲಾಕೃತಿಗಳು
ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ನಡೆಯುತ್ತಿರುವ ಗುಜರಾತ್ ಕರಕುಶಲ ಉತ್ಸವ 2026ಕ್ಕೆ ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ ದೊರೆಯುತ್ತಿದ್ದು, ಉತ್ಸವ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಜುಲೈ 3ರಂದು ಆರಂಭಗೊAಡಿರುವ ಈ ಉತ್ಸವವು ಜುಲೈ 12ರವರೆಗೆ ನಡೆಯಲಿದ್ದು, ಗುಜರಾತ್ನ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ಕರಕುಶಲ ಕಲಾವಿದರು ತಮ್ಮ ಅಪರೂಪದ ಕೈಮಗ್ಗ, ಕರಕುಶಲ ಹಾಗೂ ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ.
ಉತ್ಸವದಲ್ಲಿ ಗುಜರಾತ್ನ ಶ್ರೀಮಂತ ಕಲಾ ಪರಂಪರೆಯನ್ನು ಪ್ರತಿಬಿಂಬಿಸುವ ಕುಚ್ ಕಸೂತಿ, ಪಟೋಲಾ ಸೀರೆಗಳು, ಮಶ್ರೂ ಸಿಲ್ಕ್ ಮತ್ತು ಹತ್ತಿ ವಸ್ತçಗಳು, ಸಾಂಪ್ರದಾಯಿಕ ಆಭರಣಗಳು, ಮಣಿಗಳ ಕಲಾಕೃತಿಗಳು, ಗೃಹಾಲಂಕಾರ ವಸ್ತುಗಳು ಸೇರಿದಂತೆ ಹಲವಾರು ವಿಶಿಷ್ಟ ಉತ್ಪನ್ನಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
ಈ ಬಾರಿಯ ಉತ್ಸವದ ವಿಶೇಷ ಆಕರ್ಷಣೆಯಾಗಿ ರಾಷ್ಟç ಮತ್ತು ರಾಜ್ಯ ಪ್ರಶಸ್ತಿ ಪುರಸ್ಕöÈತ ಕರಕುಶಲ ಕಲಾವಿದರು ನೇರ ಕಲಾ ಪ್ರದರ್ಶನ (ಲೈವ್ ಡೆಮೋ) ನೀಡುತ್ತಿದ್ದು, ಕಲಾಭಿಮಾನಿಗಳು ಕಲಾವಿದರ ಕೈಚಳಕವನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ.
ಪ್ರಮುಖವಾಗಿ, ವಗೇಲಾ ಮಂಜುಲಾಬೆನ್ ಅವರಿಂದ ಕುಚ್ ಕಸೂತಿ ಕಲೆಯ ನೇರ ಪ್ರದರ್ಶನ, ಮೊಹಮ್ಮದ್ ಜುಬೇರ್ ಅವರಿಂದ ಮಶ್ರೂ ಸಿಲ್ಕ್ ಹಾಗೂ ಹತ್ತಿ ನೇಯ್ಗೆ ಪ್ರದರ್ಶನ, ಕಮಲ್ ಭಟ್ ಅವರಿಂದ ಅಪರೂಪದ ನೇಲ್ ಆರ್ಟ್ ಪ್ರದರ್ಶನ, ಮೆಹಜಾಜಾಬೆನ್ ಪಟೇಲ್ ಅವರಿಂದ ಸಾಂಪ್ರದಾಯಿಕ ಮಣಿಗಳ ಕಲಾಕೃತಿಗಳ ಪ್ರದರ್ಶನ, ಜಿತೇಂದ್ರ ಚೌಹಾಣ್ ಅವರಿಂದ ಪ್ರಸಿದ್ಧ ಪಟೋಲಾ ಸೀರೆಗಳ ಪ್ರದರ್ಶನ ಮತ್ತು ಮಾರಾಟ ವಿಶೇಷ ಗಮನ ಸೆಳೆಯುತ್ತಿವೆ.
ಗುಜರಾತ್ ಕರಕುಶಲ ಉತ್ಸವವು ಕೇವಲ ಪ್ರದರ್ಶನ ಮತ್ತು ಮಾರಾಟದ ವೇದಿಕೆಯಾಗಿರದೆ, ಭಾರತದ ವೈವಿಧ್ಯಮಯ ಕಲಾ ಪರಂಪರೆಯನ್ನು ಜನರಿಗೆ ಪರಿಚಯಿಸುವ ಹಾಗೂ ಕರಕುಶಲ ಕಲಾವಿದರಿಗೆ ನೇರ ಮಾರುಕಟ್ಟೆ ಅವಕಾಶ ಕಲ್ಪಿಸುವ ಮಹತ್ವದ ವೇದಿಕೆಯಾಗಿದೆ.
ಈ ವೇಳೆ ಇಂಡೆಕ್ಸ್÷್ಟ-ಸಿ ಅಧಿಕಾರಿ ಡಾ. ಸ್ನೇಹಲ್ ಮಕ್ವಾನಾ ಮಾತನಾಡಿ, “2016ರಿಂದ ಪ್ರತಿವರ್ಷ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಗುಜರಾತ್ ಕರಕುಶಲ ಉತ್ಸವವನ್ನು ಆಯೋಜಿಸುತ್ತಿದ್ದೇವೆ. 2026ರ ಉತ್ಸವವು ಇದುವರೆಗಿನ ಅತ್ಯಂತ ಯಶಸ್ವಿ ಉತ್ಸವವಾಗಿದೆ. ಮೈಸೂರಿನ ನಾಗರಿಕರಿಂದ ದೊರೆತ ಅಭೂತಪೂರ್ವ ಬೆಂಬಲದಿAದ ಕರಕುಶಲ ಕಲಾವಿದರು ಉತ್ತಮ ವ್ಯಾಪಾರ ನಡೆಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಉತ್ಸವದ ಯಶಸ್ಸಿಗೆ ಸಹಕರಿಸಿದ ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್, ಮಾಧ್ಯಮ ಮಿತ್ರರು ಹಾಗೂ ಮೈಸೂರಿನ ನಾಗರಿಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದು ತಿಳಿಸಿದರು.
ಮೈಸೂರಿನ ನಾಗರಿಕರು ಜುಲೈ 12ರವರೆಗೆ ನಡೆಯಲಿರುವ ಈ ಉತ್ಸವಕ್ಕೆ ಭೇಟಿ ನೀಡಿ, ಗುಜರಾತ್ನ ಶ್ರೀಮಂತ ಕರಕುಶಲ ಪರಂಪರೆಯನ್ನು ವೀಕ್ಷಿಸಿ, ಕಲಾವಿದರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.