Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ


ಮೈಸೂರು: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶನಿವಾರ ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ರಘುಗೆ ಅಭಿನಂದನೆ ಹಾಗೂ ಬಿಜೆಪಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಸಮಾನತೆ ದೂರ ಮಾಡಿ ಸಮ ಸಮಾಜದ ನಿರ್ವಾಣ ಕನಸನ್ನು ಬಸವಣ್ಣ ಕಂಡಿದ್ದರು. ಆದರೆ, ಕಾಯುವುದೇ ಕೈಲಾಸ ಎಂದು ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು, ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮಾಡಿ, ಸಮಾಜಗಳನ್ನು ಒಡೆಯುವ ಕೆಲಸ ಮಾಡಿದರು. ಕಾಂಗ್ರೆಸ್ ಸರ್ಕಾರ ಕಪಟ ನಾಟಕವಾಡುತ್ತಿದೆ ಎಂದು ಸಿದ್ದರಾಮಯ್ಯ ಹೆಸರನ್ನು ಹೇಳದೆ ಟೀಕಿಸಿದರು. ಕಾಂಗ್ರೆಸ್ ನಾಯಕರು ಕಾಯಕ ಸಮುದಾಯಗಳ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಸ್ವಾತಂತ್ರ÷್ಯ ಬಂದ ನಂತರ ಈ ಜನರ ಹೆಸರೇಳಿಕೊಂಡು ವೋಟ್ ಬ್ಯಾಂಕ್ ಮಾಡಿಕೊಂಡಿತೇ ಹೊರತು, ಯಾವ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಅಂಬೇಡ್ಕರ್ ಅವರನ್ನು ಷಡ್ಯಂತ್ರ,ಕುತAತ್ರ ಮಾಡಿ ಚುನಾವಣೆಯಲ್ಲಿ ಸೋಲಿಸಿತು.ಈಗ ಮತ್ತೆ ಅವರ ಹೆಸರನ್ನು ಹೇಳಿ ಮತ ಪಡೆಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಕಿಡಿಕಾರಿದರು.
ಕಾಯಕ ಸಮಾಜದ ಜನರು ಬದುಕು ಕಟ್ಟಿಕೊಳ್ಳಲು ನ್ಯಾಯ ಒದಗಿಸಲಿಲ್ಲ.ಬಡವರು ಬಡವರಾಗಿಯೇ ಉಳಿಯಲು ಕಾಂಗ್ರೆಸ್ ಕಾರಣವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್, ಡಿ. ದೇವರಾಜ ಅರಸು,ಮಹಾತ್ಮ ಗಾಂಧಿ ಹೆಸರೇಳುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರ್ವರಿಗೂ ಸಾಮಾಜಿಕ ನ್ಯಾಯದಂತೆ ಕೆಲಸ ಮಾಡುತ್ತಿದೆ. ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ಪ್ರಧಾನಮಂತ್ರಿ ಸ್ಥಾನದಲ್ಲಿ ಕುಳಿತಿರುವುದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಕಾಲದ ಸಾಧನೆ ಮುಡಾ ನಿವೇಶನ ಪಡೆದಿದ್ದು,ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಲೂಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿದ್ದಾಗಿದೆ. ಕೊಪ್ಪಳದಲ್ಲಿ ಗವಿ ಸಿದ್ದಪ್ಪ ಹತ್ಯೆ, ಯಲ್ಲಾಪುರದಲ್ಲಿ ಯುವತಿ ಹತ್ಯೆ,ಹುಬ್ಬಳ್ಳಿಯಲ್ಲಿ ಯುವತಿ ಹತ್ಯೆ, ಕೊಪ್ಪಳದಲ್ಲಿ ಹೋರಿ ಓಡಿಸಲು ಮುಂದಾದಾಗ ಮತೀಯವಾದಿಗಳು ಕೈಕತ್ತರಿಸಿದರೂ ಕ್ರಮಕೈಗೊಳ್ಳದ ಸರ್ಕಾರಕ್ಕೆ ನರ ಸತ್ತು ಹೋಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೊಲೆಗೀಡಾದ ಅಮಾಕರ ಮನೆಗೆ ಸಚಿವರುಗಳು ಹೋಗಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಓಲೈಕೆ ರಾಜಕಾರಣದಿಂದಾಗಿ ಹಿಂದುಗಳ ಮರಣ ಹೋಮವಾಗಿದೆ. ಎಂದು ಕಿಡಿಕಾರಿದರು. ಗೃಹಲಕ್ಷಿ÷್ಮÃ ಯೋಜನೆಯಡಿ ಹಗರಣ ನಡೆದಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಚಮ್ಮಾರರು ಹೊಲಿಯುತ್ತಿದ್ದ ಚಪ್ಪಾಲಿಗಳನ್ನು ಲಿಡ್ಕರ್ ನಿಗಮದಿಂದ ಖರೀದಿಸಲಾಗುತ್ತಿತ್ತು. ಆದರೆ, ಈಗ ಹೊರ ರಾಜ್ಯದವರೆಗೆ ಹೊಲಿದು ಕೊಡುವಂತೆ ಮಾಡಲು ಟೆಂಡರ್ ಕರೆದಿದೆ. ಅಕ್ರಮ ವಲಸಿಗರಿಗೆ ಪೌರತ್ವವನ್ನು ತೀರ್ಮಾನ ಮಾಡುವುದು ಕೇಂದ್ರ ಸರ್ಕಾರದ ಅಧಿಕಾರವೇ ಹೊರತು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ.ಹಾಗಾಗಿ, ಮುಂದಿನ ವಾರ ರಾಜ್ಯಪಾಲರನ್ನು ಭೇಟಿ ಮಾಡಿ ಪಿಎಸ್ ಆರ್ ಕೊಡಲು ಅವಕಾಶ ನೀಡದಂತೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು. ಹಿಂದು ವಿರೋಧಿ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಿದಂತೆ
ಮುAದಿನ ದಿನಗಳಲ್ಲಿ ಹಿಂದು ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹೊಗೆಯುವ ದಿನಗಳು ಬರಲಿದೆ ಎಂದು ನುಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಯಕ ಸಮಾಜಗಳ ಅಭಿವೃದ್ದಿಗೆ ಸಂಕಲ್ಪ ಮಾಡಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಾಂತರಾಮ್ ಸಿದ್ದಿ, ಮ.ನಾಗರಾಜ್, ಕಿಶೋರ್ ಕುಮಾರ್ ಅವರಂತಹ ಮುಖಂಡರಿಗೆ ಬಿಜೆಪಿಯಲ್ಲಿ ಸ್ಥಾನಮಾನದ ಅವಕಾಶ ಕೊಡಲಾಗಿದೆ. ಬುಡಕಟ್ಟು ಸವಾಜಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟçಪತಿಗಳನ್ನಾಗಿ ಮಾಡಿರುವುದನ್ನು ಕಾಯಕ ಸಮಾಜದವರು ಅರ್ಥ ಮಾಡಿಕೊಂಡು ಕೈ ಜೋಡಿಸಬೇಕು ಎಂದರು.