Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಣೆಯ ಮೇಲೆ ವಿಭೂತಿ ಪ್ರೀತಿ,ಹೃದಯದ ಒಳಗೆ ಬಾಂಗ್ಲಾವಲಸಿಗರ ಪ್ರೀತಿ: ಡಿಕೆಶಿಗೆ ಕುಟುಕುಸಿಎಂ ಕೈಗೆ ಧಾರ,ಕೊರಳಿಗೆ ಹಾರ ಹಾಕಿಕೊಂಡಾಕ್ಷಣ ಅವರನ್ನು ಹಿಂದೂ ಪರ ಎಂದು ನಂಬಲಾಗದು


ಮೈಸೂರು: ಡಿ.ಕೆ.ಶಿವಕುಮಾರ್ ಟೆಂಡರ್ ಸಿಎಂ. ಸಿದ್ದರಾಮಯ್ಯರ ನಂತರ ಟೆಂಡರ್ ಆಗಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದಾರೆ. 3ರಿಂದ 4ಸಾವಿರ ಕೋಟಿ ಟೆಂಡರ್‌ಗೆ ಅನುಮೋದನೆ ಪಡೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು. ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ರಘುಗೆ ಅಭಿನಂದನೆ ಹಾಗೂ ಬಿಜೆಪಿಗೆ ಕೃತಜ್ಞತಾ ಸಮರ್ಪಣಾ ಸವಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯರು ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಮುಡಾದಲ್ಲಿ ಸೈಟ್ ಮಾಡಿಕೊಂಡಿದ್ದು ದೊಡ್ಡ ಸಾಧನೆಯಾಗಿದೆ. ಈಗ ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಂದರು ನೂರಾರು, ಸಾವಿರಾರು ಕೋಟಿರೂಗಳ ಟೆಂಡರ್ ಮಾಡುತ್ತಿದ್ದಾರೆ. ಇವರ ಅಧಿಕಾರದ ಅವಧಿ ಇರುವುದೇ ಇನ್ನೂ ಒಂದುವರೆ ವರ್ಷವಾದರೂ ಬೆಂಗಳೂರಿನಲ್ಲಿ ಕಸದ ನಿರ್ವಹಣೆಗೆ ಟೆಂಡರ್, ಟೆನಲ್ ಅಳವಡಿಕೆಗೆ 40ಸಾವಿರ ಕೋಟಿ ಟೆಂಡರ್,ಬಿಡದಿ ಟೌನ್‌ಶಿಪ್‌ಗೆ ಟೆಂಡರ್ ಕರೆದಿದ್ದಾರೆ.ಮುಂದಿನ 30-40ವರ್ಷಗಳಲ್ಲಿ ಕರೆಯಬಹುದಾದಷ್ಟು ಟೆಂಡರ್ ಮೊತ್ತವನ್ನು ಈಗಲೇ ಕರೆದಿದ್ದಾರೆ. ಡಿ.ಕೆ.ಶಿವಕುಮಾರ್ ಅಂದರೆ ಟೆಂಡರ್. ಟೆಂಡರ್ ಸಿಎಂ ಆಗಿಯೇಬಂದಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ 60ಸಾವಿರ ಎಕರೆಯಷ್ಟು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ ಒಂದೂವರೆ ವರ್ಷಗಳು ಮಾತ್ರ ಅಧಿಕಾರದಲ್ಲಿರುವಾಗ ಸ್ಕೀಂ ಮಾಡಿಕೊಂಡು ಲೂಟಿ ಮಾಡಲು ನಿಂತಿದ್ದಾರೆ.ಗೃಹಲಕ್ಷಿ÷್ಮÃ ಯೋಜನೆಯಡಿ 5ಸಾವಿರ ಕೋಟಿ ರೂ ಹಗರಣ ಮಾಡಿದ್ದಾರೆ ಎಂದು ದೂರಿದರು.
ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಡಲು ಶಾಶ್ವತ ನಿವಾಸಿ ಪ್ರಮಾಣ ಪತ್ರ ಕೊಡಲು ಮುಂದಾಗಿರುವ ಆದೇಶ ಕೈ ಬಿಡಬೇಕು. ಕೇಂದ್ರಸರ್ಕಾರದ ಕಾನೂನು ತಿರುಚಲಾಗಿದೆ. ದೇಶದಲ್ಲಿ , ಪಶ್ಚಿಮಬಂಗಾಳದಲ್ಲಿ ಅಕ್ತಮ ಬಾಂಗ್ಲಾ ವಲಸಿಗರು ನುಸುಳಲು ಕಾಂಗ್ರೆಸ್ ಹಾಗೂ ನಿಮ್ಮ ಪಾರ್ಟನರ್ ಸರ್ಕಾರವೇ ಕಾರಣವಾಗಿತ್ತು. ಈಗ ಕರ್ನಾಟಕದಲ್ಲಿ ಎಸ್‌ಐಆರ್‌ನಿಂದ ಕಾಪಾಡಲು ಪ್ರಮಾಣ ಪತ್ರ ಕೊಡುವ ಹುನ್ನಾರ ಮಾಡಲಾಗಿದೆ ಎಂದು ದೂರಿದರು.ಹಿಂದುಳಿದ ಸಮುದಾಯದಲ್ಲಿ ಅತಿ ಹಿಂದುಳಿದ ಸಮುದಾ?ಂ ಗುರುತಿಸಿ ಪ್ರಾತಿನಿಧ್ಯ ಕೊಡಬೇಕು ಎನ್ನುವುದು ಪಕ್ಷದ ನೀತಿ ಮತ್ತು ಬದ್ಧತೆ?ಂಗಿದೆ. ದೇಶದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ನಡೆ??ಂತ್ತಿದ್ದು, ಇಡೀ ಕುಟುಂಬ ಭಾಗಿ?ಂಗಿ ದೇಶದ ನಾಗರಿಕತೆ?ಂನ್ನು ಉಳಿಸಿಕೊಳ್ಳಬೇಕು. ಎರಡು ಕೋಟಿಗಿಂತಲೂ ಹೆಚ್ಚು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಅಕ್ರಮ ವಲಸಿಗರು. ಕರ್ನಾಟಕದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶದವರಾಗಿದ್ದಾರೆ. ಬೆಂಗಳೂರಿನಲ್ಲಿ 60 ಲಕ್ಷ ಖರ್ಚು ವಾಡಿ ವಿವಾನದಲ್ಲಿ ಬಾಂಗ್ಲಾಕ್ಕೆ ಕಳುಹಿಸಿರುವುದನ್ನು ಪೊಲೀಸ್ ಆಯುಕ್ತರು ಹೇಳಿದ್ದಾರೆ ಎಂದರು.
ಸಮಾರAಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ಎನ್.ಮಹೇಶ್, ಗೋವಿಂದ ಕಾರಜೋಳ, ಸಂಸದರಾದ ದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಿ.ಸಿ.ಮೋಹನ್, ಮಾಜಿ ಸಂಸದ ಪ್ರತಾಪ್‌ಸಿಂಹ , ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕರಾದ ಎಲ್.ನಾಗೇಂದ್ರ,ಬಿ.ಹರ್ಷವರ್ಧನ್, ಎಸ್.ಬಾಲರಾಜು, ಸಿ.ರಮೇಶ್, ನಿರಂಜನ್ ಕುಮಾರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ,ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ವಿಭಾಗೀಯ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ, ಮಾಜಿ ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಶಿವಕುವಾರ್, ಬಿಜೆಪಿ ಸ್ಲಂ ಮೋರ್ಚಾ ವಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಒಕ್ಕೂಟದ ಪದಾಧಿಕಾರಿಗಳಾದ ರಾಜಶೇಖರ್, ಚನ್ನಕೇಶವ ಶೆಟ್ಟಿ, ಮೈ.ನಾ.ಲೋಕೇಶ್, ಮನೋಜ್ ಸಿಂಗ್ ಚೌಹಾಣ್, ವಿಜಯಕುಮಾರ್, ಶಿವಣ್ಣ, ಹನೂರು ವೆಂಕಟೇಶ, ಈಶ್ವರಚಾರ್, ಡಾ.ಇಂದ್ರೇಶ್, ಸತ್ಯ ನಾರಾಯಣ, ಹನುಮಂತ, ವಿದ್ಯಾಸಾಗರ್, ಚಂದ್ರಶೇಖರ,ಸೋಮಣ್ಣ ಮತ್ತಿತರರು ಹಾಜರಿದ್ದರು.