Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಾಯಕ ಸಮಾಜಗಳನ್ನ ರಾಜ್ಯ ಸರ್ಕಾರ ನಿರ್ಲಕ್ಷ ಮಾಡಿದೆ; ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ


ಮೈಸೂರು; ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು ಸಣ್ಣ ಸಣ್ಣ ನಿರ್ಲಕ್ಷ÷್ಯ ಮಾಡಿದ್ದಾರೆ ತಾತ್ಸಾರ ಮಾಡಿದ್ದಾರೆ ಕಾಯಕ ಸಮಾಜಗಳನ್ನ ಸರ್ಕಾರ ನಿರ್ಲಕ್ಷ ಮಾಡಿದೆ ಅವರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಶನಿವಾರ ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಆರ್.ರಘುಗೆ ಅಭಿನಂದನೆ ಹಾಗೂ ಬಿಜೆಪಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾಯಕ ಸಮಾಜದ ಯೋಜನೆಗಳನ್ನು ಜಾರಿಗೆ ತಂದಿದೆ. ಚುನಾವಣೆಯಲ್ಲಿ ಸಣ್ಣ ಸಣ್ಣ ಸಮುದಾಯಗಳನ್ನ ಬಳಸಿಕೊಂಡು ಆನಂತರ ನಿರ್ಲಕ್ಷ ಮಾಡುವ ಸರ್ಕಾರವನ್ನು ಬೆಂಬಲಿಸಬೇಕೇ ಎಂದು ಕಾಯಕ ಸಮಾಜಗಳು ಯೋಚಿಸಬೇಕು ಎಂದರು. ಜಾತಿ ಹುಡುಕಿ ಈಗ ಗ್ಯಾರೆಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಬೇಕು ಎಂದು ಹೇಳಿದರು.
ಮೈಸೂರು ಪ್ರಾಂತ್ಯದಲ್ಲಿ ವಿ.ಶ್ರೀನಿವಾಸ ಪ್ರಸಾದ್ ಅವರು ದಲಿತ ಸವಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದರು.ಅವರನ್ನು ಮಧ್ಯರಾತ್ರಿ ಮಂತ್ರಿಗಿರಿಯಿAದ ಹೊರದಬ್ಬಿದರು. ಬಿ.ಬಸವಲಿಂಗಪ್ಪ ಅವರು ಇನ್ನೇನು ಮುಖ್ಯಮಂತ್ರಿ ಆಗಿಯೇ ಬಿಟ್ಟರು ಎನ್ನುವ ಹೊತ್ತಿನಲ್ಲಿ ಮಂತ್ರಿಗಿರಿ ತಪ್ಪಿಸಿದರು ಎಂದು ಕಿಡಿಕಾರಿದರು. ಎಸ್ ಸಿಎಸ್ ಪಿ ಟಿಎಸ್‌ಪಿ ಅನುದಾನ ಲೂಟಿ ಮಾಡಿ ಶೋಷಣೆ ಮಾಡಿದರು.ಬಿಜೆಪಿ ಅಧಿಕಾರಕ್ಕೆ ಬಂದಾಗ ಬೀದಿಯಲ್ಲಿ ಹೋರಾಟ ಹೋರಾಟ. ಸಾಯಾಂಕಾಲವಾದ ಮೇಲೆ ತೂರಾಟ. ಹೋರಾಟ ಮಾಡುವಂತೆ ಹೇಳಿಕೊಟ್ಟವರು ಅವರನ್ನು ಸಂಜೆ ತೂರಾಡುವಂತೆ ಮಾಡುತ್ತಾರೆ. ಈಗ ದಲಿತರ ಹಣವನ್ನು ನುಂಗಿರುವ ಸರ್ಕಾರದ ವಿರುದ್ದ ಯಾಕೇ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರನ್ನು ಕಿತ್ತೊಗೆದರು: ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರು ಅಧಿಕಾರದಿಂದ ಕಿತ್ತು ಹೊಗೆದರು. ಹಿಂದುಳಿದ ವರ್ಗಗಳ ನಾಯಕನನ್ನು ರಾತ್ರೋರಾತ್ರಿ ಕೆಳಗಿಳಿಸಿ ದೊಡ್ಡ ಅನ್ಯಾಯ ಮಾಡಿದ ಬಗ್ಗೆ ರಾಹುಲ್ ಗಾಂಧಿ, ಈ ದೇಶದ ಪ್ರಜೆಯೇ ಅಲ್ಲ, ವಿದೇಶಗಳಲ್ಲಿ ನಿಂತು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ,ಕಾಯಕ ಜೀವಿಗಳು ಒಂದಾಗಿ ಒಗ್ಗಟ್ಟಾಗಬೇಕು. ದಲಿತರು, ಹಿಂದುಳಿದ ವರ್ಗಗಳ ಜನರನ್ನು ಪೇಟೆಂಟ್ ತೆಗೆದುಕೊಂಡAತೆ ಮಾತನಾಡುವ ಕಾಂಗ್ರೆಸ್ ಈ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿಲ್ಲ.ಆದರೆ ಬಿಜೆಪಿ ಕರ್ನಾಟಕ ಸೇರಿದಂತೆ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಲಾಗಿದೆ ಎಂದರು. ಡಿ.ದೇವರಾಜ ಅರಸು ಅವರನ್ನು ಕಾಂಗ್ರೆಸ್‌ನಿAದ ಉಚ್ಚಾಟನೆ ಮಾಡಿತು. ನಿಧನರಾದ ಮೇಲೆ ಅವರ ಅಂತ್ಯಕ್ರಿಯೆಗೆ ಕಾಂಗ್ರೆಸ ನಾಯಕರು ಬರಲೇ ಇಲ್ಲ. ಎಚ್.ಡಿ.ದೇವೇಗೌಡರನ್ನು ಕಾರಣವಿಲ್ಲದೆ ಅಧಿಕಾರದಿಂದ ಕೆಳಗೆ ಇಳಿಸಿ, ಕನ್ನಡಿಗನಿಗೆ ಅನ್ಯಾಯ ಮಾಡಿದರು. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ.ಪುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಉ ವ್ಯವಸ್ಥೆ ಮಾಡದೆ ಏಕಾಏಕಿ ತೆರವುಗೊಳಿಸುವ ಕೆಲಸ. ಫುಟ್ ಪಾತ್ ಒತ್ತುವರಿ ತೆರವಿಗೆ ನಮ್ಮ ವಿರೋಧ ಇಲ್ಲ.ಆದರೆ ಬಡವರಿಗೆ ಅನುಕೂಲ ಮಾಡಿಕೊಡಬೇಕು.ಮೂರು ವರ್ಷಗಳ ಕಾಲದಿಂದ ಯಾವುದೇ ಅಭಿವೃದ್ಧಿ ಆಗಿಲ್ಲದೆ ಬರೀ ಭ್ರಷ್ಟಾಚಾರದ ಆಡಳಿತ ನಡೆಯುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಬರಪರಿಸ್ಥಿತಿ ಇರುವ್ಯದರಿಂದ ತಕ್ಷಣವೇ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ರಾಜ್ಯ ಸರ್ಕಾರ ಖಾಯಂ ನಿವಾಸಿಗಳ ಪತ್ರವನ್ನು ನೀಡಲು ಆರಂಭಿಸಿರುವುದು ಆತಂಕಕಾರಿಯಾಗಿದೆ. ರಾಜ್ಯದಲ್ಲಿರುವ ಬಾಂಗ್ಲಾ ದೇಶದವರಿಗೆ, ಪಾಕಿಸ್ತಾನದವರಿಗೆ ಖಾಯಂ ನಿವಾಸಿ ಪತ್ರ ನೀಡುವ ಅಪಾಯವಿದೆ. ಈ ರೀತಿಯ ಯೋಜನೆ ಮಾಡುವುದು ದೇಶದ ಭದ್ರತೆಗೆ ಗಂಡಾAತರವಾಗಲಿದೆ. ಹಾಗಾಗಿ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ವಿಪಕ್ಷ ನಾಯಕ ಆರ್.ಅಶೋಕ್, ಎನ್.ಮಹೇಶ್, ಸಂಸದರಾದ ದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಿ.ಸಿ.ಮೋಹನ್ , ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ, ಮಾಜಿ ಶಾಸಕರಾದ ಎಲ್.ನಾಗೇಂದ್ರ,ಬಿ.ಹರ್ಷವರ್ಧನ್, ಎಸ್.ಬಾಲರಾಜು, ಸಿ.ರಮೇಶ್, ನಿರಂಜನ್ ಕುಮಾರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ,ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ವಿಭಾಗೀಯ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್ ಗೌಡ, ಮಾಜಿ ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಶಿವಕುವಾರ್, ಬಿಜೆಪಿ ಸ್ಲಂ ಮೋರ್ಚಾ ವಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಒಕ್ಕೂಟದ ಪದಾಧಿಕಾರಿಗಳಾದ ರಾಜಶೇಖರ್, ಚನ್ನಕೇಶವ ಶೆಟ್ಟಿ, ಮೈ.ನಾ.ಲೋಕೇಶ್, ಮನೋಜ್ ಸಿಂಗ್ ಚೌಹಾಣ್, ವಿಜಯಕುಮಾರ್, ಶಿವಣ್ಣ, ಹನೂರು ವೆಂಕಟೇಶ, ಈಶ್ವರಚಾರ್, ಡಾ.ಇಂದ್ರೇಶ್, ಸತ್ಯ ನಾರಾಯಣ, ಹನುಮಂತ, ವಿದ್ಯಾಸಾಗರ್, ಚಂದ್ರಶೇಖರ,ಸೋಮಣ್ಣ ಮತ್ತಿತರರು ಹಾಜರಿದ್ದರು.