
ಮೈಸೂರು: ನಾವು ಕಂಬಳ ಕ್ರೀಡೆಗೆ ವಿರುದ್ಧವಿಲ್ಲ. ಆದರೆ ನಾಡ ಹಬ್ಬ ಮೈಸೂರು ದಸರಾ ವೇಳೆ ಕಂಬಳ ಕ್ರೀಡೋತ್ಸವ ನಡೆಸುವುದು ಬೇಡ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದು ಮೈಸೂರಿನ ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಪ್ರಸಿದ್ಧಿಯಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಕAಬಳ ವಿಚಾರದಲ್ಲಿ ಶಾಸಕ ಅಶೋಕ ರೈ ನನಗೆ ಯಾವ ವಿವರಣೆಯನ್ನೂ ನೀಡಿಲ್ಲ. ಆ ವಿಚಾರದಲ್ಲಿ ನನ್ನ ಜೊತೆ ಅವರು ಏನನ್ನೂ ಚರ್ಚೆ ಮಾಡಿಲ್ಲ. ಆ ಅಗತ್ಯವೂ ಇಲ್ಲ ಎಂದರು.
ಮೈಸೂರು ದಸರಾ ಸಾಂಸ್ಕöÈತಿಕ ಹಿನ್ನೆಲೆಯೇ ಬೇರೆ, ಕಂಬಳವೇ ಬೇರೆ. ಎಲ್ಲದಕ್ಕೂ ದಸರೆಯನ್ನು ಜೋಡಿಸುವುದು ಸರಿಯಲ್ಲ. ಮೈಸೂರಿನ ಜನತೆಯ ಭಾವನೆಯೂ ಇದೇ ಆಗಿದೆ. ಸರ್ಕಾರ ಕಂಬಳ ಮಾಡಿದರೆ ಇದು ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ ಆಗುತ್ತದೆ. ಈ ಸರ್ಕಾರ ಇದುವರೆಗೂ ಜನರ ಭಾವನೆಗಳ ವಿರುದ್ಧವಾಗಿಯೇ ಕೆಲಸ ಮಾಡಿದೆ. ಈಗ ಕಂಬಳವನ್ನು ಜನರ ಭಾವನೆಗೆ ವಿರುದ್ಧವಾಗಿಯೇ ಮಾಡುತ್ತಿದೆ ಎಂದು ದೂರಿದರು.
ದಸರಾವನ್ನು ಬಹಳ ಅಚ್ಚುಕಟ್ಟಾಗಿ ಮಾಡಲಿ. ಕಳೆದ ಮೂರು ವರ್ಷಗಳಿಂದಲೂ ದಸರಾ ಯಶಸ್ವಿಯಾಗಿ ನಡೆದಿಲ್ಲ. ಈ ಬಾರಿಯಾದರೂ ಅಚ್ಚುಕಟ್ಟಾಗಿ ಮಾಡಲಿ ಎಂದು ಹೇಳಿದರು.
ಪ್ರತಿ ದಸರಾದಲ್ಲೂ ಒಂದಿಲ್ಲೊAದು ವಿವಾದ ಸೃಷ್ಟಿ ಮಾಡಲಾಗುತ್ತಿದೆ. ವಿವಾದ, ಹೋರಾಟದ ನಡುವೆ ದಸರಾ ನಡೆಯುವಂತೆ ಆಗಿದೆ. ಈ ಬಾರಿಯೂ ಅದು ಮುಂದುವರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಸರಾದಲ್ಲಿ ಪಾಸ್ ವ್ಯವಸ್ಥೆ ರದ್ದುಪಡಿಸಲಿ. ಗ್ಲೋಬಲ್ ಟೆಂಡರ್ ಮೂಲಕ ಪಾಸ್ ಹಂಚಲಿ. ಈ ಸಲಹೆಯನ್ನು ಮುಖ್ಯಮಂತ್ರಿಗೆ ಕೊಟ್ಟಿದ್ದೇನೆ. ದಸರಾ ವೇಳೆ ಪಾಸ್ಗಳದ್ದೇ ದೊಡ್ಡ ಗದ್ದಲ ನಡೆಯುತ್ತಿದೆ. ಮಾಡುವ ಕೆಲಸ ಬಿಟ್ಟು ಪಾಸ್ ಬಗ್ಗೆ ಜಟಾಪಟಿ ಇರುತ್ತದೆ. ಈ ಗೊಂದಲ ತಪ್ಪಬೇಕು. ಪಾಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಸರಳ ದಸರಾ ಎಂಬ ಹೆಸರು ಹಾಕಿದರೆ ಅದು ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ಬರುತ್ತದೆ ಎಂದೂ ಹೇಳಿದ್ದೇನೆ ಎಂದರು