
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ ಆಗಸ್ಟ್ 15ರ ಬಳಿಕ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ನಗರಪಾಲಿಕೆಯಿಂದ ಕೈಗೊಳ್ಳುವ ರಸ್ತೆ ಪ್ಯಾಚ್ ವರ್ಕ್ಗಳ ಕಾಮಗಾರಿಯನ್ನು ದಸರಾ ಆರಂಭಕ್ಕೂ ಮುನ್ನ ಮುಗಿಸಬೇಕು ಎಂದು ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು. ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳು ಕೈಗೊಂಡಿರುವ ಪ್ರಮುಖ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಸರಾ ಮಹೋತ್ಸವ ಸಂದರ್ಭದಲ್ಲಿ ಹೊರಗಿನಿಂದ ಹೆಚ್ಚು ಜನರು ಬರುವ ಕಾರಣ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗಲಿದೆ. ಕೆಲವು ಕಡೆಗಳಲ್ಲಿ ಆರಂಭವಾಗಿರುವ ಕಾರಣ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ,ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಜತೆಗೆ ಆಗಸ್ಟ್ 15ರ ನಂತರ ವೈಟ್ ಟ್ಯಾಪಿಂಗ್ ಸ್ಥಗಿತಗೊಳಿಸಬೇಕು. ಆರಂಭಿಸದ ಕಾಮಗಾರಿಗಳನ್ನು ದಸರಾ ಮುಗಿದ ಮೇಲೆ ಶುರು ಮಾಡಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪದ್ಮನಾಭ ಮಾತನಾಡಿ,ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ದಿಯೋಜನೆಯಡಿ 20 ಕಾಮಗಾರಿಗಳು ಮಂಜೂರಾಗಿದ್ದು,ಒAದು ಮುಗಿದಿದ್ದು,16ಪ್ರಗತಿಯಲ್ಲಿ,ಮೂರು ಆರಂಭಿಸಬೇಕು. ನಗರದಲ್ಲಿ ಕೈಗೊಂಡಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಮುಕ್ತಾಯಕ್ಕೆ 2028ರ ಜನವರಿ ತಿಂಗಳಿಗೆ ಗಡುವು ಇದೆ.ಈಗಾಗಲೇ ಮಾನಂದವಾಡಿ,ಬೋಗಾದಿ ಮುಖ್ಯರಸ್ತೆ ಸೇರಿ ಆರು ಕಿ.ಮೀ ಮುಗಿದಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರವಾಸಿಗರಿಗೆ ತೊಂದರೆಯಾಗಬಾರದು.ಈಗ ವೈಟ್ ಟ್ಯಾಪಿಂಗ್ ನಡೆಯುತ್ತಿರುವ ಮಾರ್ಗಗಳಲ್ಲಿ ವಾಹನಗಳು ಹೋಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ದಸರಾ ಮುಗಿದ ಮೇಲೆ ಹೊಸ ಕಾಮಗಾರಿ ಶುರು ಮಾಡಬೇಕು. ವೈಟ್ ಟ್ಯಾಪಿಂಗ್ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು.ಆಗಿಂದಾಗ್ಗೆ ವರದಿ ನೀಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮÃಕಾಂತ್ ರೆಡ್ಡಿ ಮಾತನಾಡಿ, ಬಂಡೀಪಾಳ್ಯದ ಬಳಿ ಇರುವ ದೇವಲಾಪುರ ಗ್ರಾಮದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಶುರು ಮಾಡಿದ್ದು,ಯುವ ದಸರಾ ಸಂದರ್ಭದಲ್ಲಿ ತೊಂದರೆಯಾಗದAತೆ ಕಾಮಗಾರಿ ನಿಲ್ಲಿಸಿ ಸಮತಟ್ಟು ಮಾಡಿಕೊಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ.ಸಂಬAಧಿಸಿದ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಅದೇ ರೀತಿ ಮಣಿಪಾಲ್ ಜಂಕ್ಷನ್ ರಸ್ತೆಯ ಕಾಮಗಾರಿ ಕೂಡ ನಡೆಯುತ್ತಿದೆ. ಮೈಸೂರು-ನಂಜನಗೂಡು ರಸ್ತೆ,ದೇವಲಾಪುರ ರಸ್ತೆಯಲ್ಲಿ ಓಡಾಡಲು ಜಾಗ ಮಾಡಿಕೊಡಲಾಗಿದೆ ಎಂದರು.
ದಸರಾ ಶುರು ಮುನ್ನ ಪ್ಯಾಚ್ ವರ್ಕ್ ಮುಗಿಸಲು ಸೂಚನೆ: ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ನಗರದಲ್ಲಿ ಕೈಗೊಳ್ಳುವ ಮುನ್ನ ಪ್ಯಾಚ್ ವರ್ಕ್ ಮುಗಿಸಬೇಕು ಎಂದು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ದಸರಾ ಹೊತ್ತಲ್ಲಿ ಕಾಮಗಾರಿ ಮಾಡಿದರೆ ಸಂಚಾರ ಸಮಸ್ಯೆಯಾಗಲಿದೆ. ಕೆಲವು ಕಡೆ ಮುಗಿಯದೆ ದಸರಾ ಪ್ರಾರಂಭವಾದ ಮೇಲೂ ಕಾಮಗಾರಿ ನಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನಗರಪಾಲಿಕೆ ಅಧೀಕ್ಷಕ ಅಭಿಯಂತರರಾದ ಕೆ.ಜೆ.ಸಿಂಧು,ಈಗಾಗಲೇ ಪ್ಯಾಚ್ ವರ್ಕ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಲೈನಿಂಗ್ ಪೇಟಿಂಗ್ ವರ್ಕ್ಗೆಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಗುತ್ತಿಗೆದಾರರಿಗೆ ಈ ಬಾರಿ ನಿಗದಿತ ಸಮಯದೊಳಗೆ ಮುಗಿಸುವ ಷರತ್ತು ಹಾಕಲಾಗುವುದು ಎಂದರು. ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್, ರಸ್ತೆಗಳಲ್ಲಿ ಜೀಬ್ರಾ ಕ್ರಾಸ್ ಪೇಟಿಂಗ್ ಮಾಡಲು ಪೊಲೀಸ್ ಇಲಾಖೆಯಲ್ಲಿ ಅವಕಾಶವಿಲ್ಲ. ನಗರಪಾಲಿಕೆ ಪೇಟಿಂಗ್ ಮಾಡುವಾಗಲೇ ಜೀಬ್ರಾ ಕ್ರಾಸ್ ಮಾಡಿದರೆ ಅನುಕೂಲವಾಗಲಿದೆ. ಈ ಬಗ್ಗೆ ಪಾಲಿಕೆಗೆ ಸೂಚನೆ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಡಾ.ಯತೀಂದ್ರ, ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಪಟ್ಟಿ ಕೊಡುವ ರಸ್ತೆಗಳಲ್ಲಿ ಜೀಬ್ರಾ ಕ್ರಾಸ್‌ಪೇಟಿಂಗ್ ಮಾಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮÃಕಾಂತ್ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರರಾಜ್, ಡಿಸಿಎಫ್ ಪರಮೇಶ್, ಕಾವೇರಿ ನೀರಾವರಿ ನಿಗಮದ ಮಂಡ್ಯ ಎಸ್‌ಇ ರಘುರಾಮ್, ಮೈಸೂರು ಎಸ್‌ಇ ರಘುಪತಿ, ಹಾರಂಗಿ ಎಸ್‌ಇ ಸತೀಶ್, ಎನ್‌ಎಚ್‌ಎಐ ಕಾರ್ಯಪಾಲಕ ಅಭಿಯಂತರ ಸಿರೀಸ್ ಗಂಗಾಧರ್,ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಈರಣ್ಣ, ಭಾಸ್ಕರ್,ಸೆಸ್ಕ್ ಅಧೀಕ್ಷಕ ಅಭಿಯಂತರ ಸುನಿಲ್‌ಕುಮಾರ್ ಮತ್ತಿತರರು ಹಾಜರಿದ್ದರು.