Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಠ್ಯಕ್ರಮವನ್ನು ವಿದ್ಯಾರ್ಥಿಗಳ ನಾಳಿನ ಭವಿಷ್ಯಕ್ಕಾಗಿ ಕ್ರಿಯಾತ್ಮಕವಾಗಿ ರೂಪಿಸಬೇಕಿದೆ; ಇಸ್ರೋದ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಶಶಿ ಶೇಖರ್


ಮೈಸೂರು; ಪಠ್ಯಕ್ರಮವನ್ನು ವಿದ್ಯಾರ್ಥಿಗಳ ನಾಳಿನ ಭವಿಷ್ಯಕ್ಕಾಗಿ ಕ್ರಿಯಾತ್ಮಕವಾಗಿ ರೂಪಿಸಬೇಕಿದೆ; ಇಸ್ರೋದ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಶಶಿ ಶೇಖರ್ ಹೇಳಿದರು.
ಸೋಮವಾರ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜೋತಿ ಸಭಾಂಗಣದಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ‘ಬಾಹ್ಯಾಕಾಶ ಗಡಿನಾಡುಗಳು: ನಾವೀನ್ಯತೆಗಳು, ಪರಿಶೋಧನೆ ಮತ್ತು ಅನ್ವೇಷಣೆ’ ವಿಷಯ ಕುರಿತಂತೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಾಹ್ಯಾಕಾಶಕ್ಕೆ ಯಾವುದೇ ಗಡಿಗಳು ಇರುವುದಿಲ್ಲ. ಅದು ಯಾವುದೇ ತಪ್ಪುಗಳನ್ನು ಕ್ಷಮಿಸುವುದಿಲ್ಲ ಎಂದರು. ವಿಜ್ಞಾನದಲ್ಲಿ ಕುತೂಹಲವು ಬೆರೆತಾಗ ನಿಜವಾದ ಅನ್ವೇಷಣೆ ಮತ್ತು ನಾವಿನ್ಯತೆಯನ್ನು ಮಾರ್ಪಾಡಿಸುವುದಕ್ಕೆ ಸಾಧ್ಯ ಎಂದರು. ವಿದ್ಯಾರ್ಥಿ ಸಮೂಹ ಸೋಲಿನ ಭಯವಿಲ್ಲದೆ ವಿಶಿಷ್ಟ ರೀತಿಯಲ್ಲಿ ನಾವಿನ್ಯತೆಗೆ ಕೊಡುಗೆ ನೀಡಬೇಕಿದೆ ಎಂದು ತಿಳಿಸಿದರು. ಪಠ್ಯಕ್ರಮವನ್ನು ವಿದ್ಯಾರ್ಥಿಗಳ ನಾಳಿನ ಭವಿಷ್ಯಕ್ಕಾಗಿ ಕ್ರಿಯಾತ್ಮಕವಾಗಿ ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಲೋಕನಾಥ್ ಎನ್.ಕೆ ಮಾತನಾಡಿ, ವಿಜ್ಞಾನ ಮತ್ತು ನಾವಿನ್ಯತೆ ಒಂದು ನಾಣ್ಯದ ಎರಡು ಮುಖಗಳು . ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ವಿಜ್ಞಾನದಲ್ಲಿ ತೀಕ್ಷ್ಣವಾದ ವೀಕ್ಷಣೆ ಬಹುಮುಖ್ಯವಾಗಿದೆ. ನಾವಿನ್ಯತೆಯನ್ನು ಮೂಡಿಸಲು ವಿದ್ಯಾರ್ಥಿಗಳು ಜಗತ್ತನ್ನು ಸೂಕ್ಷ್ಮವಾಗಿ ವೀಕ್ಷಿಸಬೇಕಾಗಿದೆ ಎಂದು ತಿಳಿಸಿದರು. ಪ್ರಕೃತಿ ನಮ್ಮ ಅತ್ಯುತ್ತಮ ಶಿಕ್ಷಕಿಯಾಗಿದ್ದು, ಮಾನವ ಕುಲವೂ ನಿರಂತರವಾಗಿ ಕಲಿಯಲು ಮತ್ತು ವಿಕಸನಗೊಳ್ಳಲು ಸದಾ ಪ್ರೇರೇಪಿಸುತ್ತದೆ ಎಂದರು. ವಿದ್ಯಾರ್ಥಿಗಳು ನಾವಿನ್ಯತೆಯ ನಿಜವಾದ ಮನೋಭಾವವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮೂಲ ಪಠ್ಯಪುಸ್ತಕಗಳನ್ನು ಓದಬೇಕು. ಜೊತೆಗೆ ಶ್ರೇಷ್ಠ ವಿಜ್ಞಾನಿಗಳ ಜೀವನದ ಸಾಧನೆಗಳನ್ನು ಸತತ ಅಧ್ಯಯನ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕಿ ಡಾ. ಪ್ರತಿಮಾ ಡಿ.ಎಸ್ ಮಾತನಾಡಿ, ಬಾಹ್ಯಾಕಾಶ ಸಂಶೋಧನೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ, ಪ್ರಸ್ತುತ ಯುಗದ ಎಲ್ಲಾ ಜ್ಞಾನ ಶಿಸ್ತುಗಳ ಜೊತೆಗೆ ಅವಿನಾಭಾವ ಸಂಬAಧ ಹೊಂದಿದೆ ಎಂದರು. ಮೂಲ ವಿಜ್ಞಾನದ ಮಹತ್ವವನ್ನು ತಿಳಿಸುತ್ತಾ, ಎಲ್ಲಾ ವೈಜ್ಞಾನಿಕ ಪ್ರಗತಿಗಳ ಅಡಿಪಾಯವಾಗಿದೆ. ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಕಲಿಯಲು ಸಹಾಯಕವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ರೇಚಣ್ಣ, ಮೈಸೂರು ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣೇಗೌಡ.ಪಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸೌಮ್ಯ ಬಿ, ಧಾತ್ರಿ , ಸೌಜನ್ಯ, ದೀಕ್ಷಾ, ವಂದನಾ ಎಂ ಯೋಗೇಶ್ ಉಪಸ್ಥಿತರಿದ್ದರು. ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಮೂರು ತಾಂತ್ರಿಕ ಗೋಷ್ಠಿಗಳು ನಡೆಯಿತು. ಮೊದಲ ತಾಂತ್ರಿಕ ಗೋಷ್ಠಿ: ಬೆಂಗಳೂರಿನ ಇಸ್ರೋ (ISಖಔ) ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಶಶಿ ಶೇಖರ್ ಆರ್. ಅವರು “ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಸವಾಲುಗಳು” (Sಠಿಚಿಛಿe ಒissioಟಿs ಚಿಟಿಜ ಅhಚಿಟಟeಟಿges) ವಿಷಯ ಕುರಿತು ಮಾತನಾಡಿದರು.
ಎರಡನೇ ತಾಂತ್ರಿಕ ಗೋಷ್ಠಿ: ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಶಿವಲಿಂಗಸ್ವಾಮಿ ಟಿ. ಅವರು “ನಕ್ಷತ್ರಗಳ ಜೀವನ ಚಕ್ರ” (ಐiಜಿe ಅಥಿಛಿಟe oಜಿ Sಣಚಿಡಿs) ಎಂಬ ವಿಷಯ ಕುರಿತು ಉಪನ್ಯಾಸ ಮಾಡಿದರು.
ಅಂತಿಮ ತಾಂತ್ರಿಕ ಗೋಷ್ಠಿ: ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ ಕಾಸ್ಮೋಸ್ (ಅಔSಒಔS) ಯೋಜನಾ ಸಹವರ್ತಿ-1 ಆದ ಅಮೋಘವರ್ಷ ಎನ್. ಅವರು “ಇಪ್ಪತ್ತೊಂದನೇ ಶತಮಾನದ ದೂರದರ್ಶಕಗಳು” (ಖಿeಟesಛಿoಠಿes iಟಿ ಖಿತಿeಟಿಣಥಿ-ಈiಡಿsಣ ಅeಟಿಣuಡಿಥಿ) ವಿಷಯ ಕುರಿತು ಮಾತನಾಡಿದರು.