Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬರಪೀಡಿತ ಜಿಲ್ಲೆ ಘೋಷಣೆ ಮಾಡಿ, ಕಬ್ಬು ಬಾಕಿ ಪ್ರತಿ ಟನ್‌ಗೆ 50 ರೂಪಾಯಿ ಪಾವತಿಗೆ ಒತ್ತಾಯಿಸಿ ಜು. 27ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ


ಮೈಸೂರು; ಬರಪೀಡಿತ ಜಿಲ್ಲೆ ಘೋಷಣೆ ಮಾಡಿ, ಕಬ್ಬು ಬಾಕಿ ಪ್ರತಿ ಟನ್‌ಗೆ 50 ರೂಪಾಯಿ ಪಾವತಿಗೆ ಒತ್ತಾಯಿಸಿ ಜು. 27ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದು,್ದ ಜಾನುವಾರುಗಳಿಗೆ ಮೇವು , ಜನರಿಗೆ ಕುಡಿಯಲು ನೀರು ಸಾಕಷ್ಟು ಇಲ್ಲ. ರೈತರು ಹಾಕಿರುವ ಬೆಳೆಗಳಾದ ರಾಗಿ, ಜೋಳ, ಮೆಕ್ಕೆಜೋಳ , ಹತ್ತಿ, ಸೂರ್ಯಕಾಂತಿ ಸಹ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ಕೃಷಿ ಪಂಪು ಸೆಟ್ಟುಗಳಲ್ಲಿ ಸಹ ನೀರು ನಿಂತು ಹೋಗಿದೆ . ಇದರಿಂದ ಬೆಳೆದಿರುವಂತಹ ಕಬ್ಬು , ಬಾಳೆ, ಅರಿಶಿಣ, ತೆಂಗು ಇಳುವರಿಯಲ್ಲಿ ನಷ್ಟವೆ ಹೊಂದಿವೆ. ಆದ್ದರಿಂದ ತಕ್ಷಣ ಬರಪೀಡಿತ ಘೋಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಮಾನದಂಡಗಳನ್ನು ಬದಲಾಯಿಸಿ, ವೈಜ್ಞಾನಿಕ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ ಘೋಷಣೆ ಮಾಡಬೇಕು. ಇದರಿಂದ ರೈತರ ಜೀವನ ಉಳಿಯುವಂತಾಗುತ್ತದೆ ಎಂದರು.
ರಾಜ್ಯ ಸರ್ಕಾರ ವ್ಯಾಪ್ತಿ ಬರುವ ಸುಮಾರು 25,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 30,000 ಕೋಟಿ ರೂಪಾಯಿಯ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಬರಗಾಲ ಜಿಲ್ಲೆಗಳ ರಾಷ್ಟಿçÃಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು. ಖಾಸಗಿ ಫೈನಾನ್ಸ್ ಗಳ ಅಟ್ಟಹಾಸ ಮುಂದುವರೆದಿದ್ದು, ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ . ಇದು ನಿಲ್ಲಬೇಕು. ಗ್ರಾಮ ಪಂಚಾಯತ್ ಮಟ್ಟ ದಲ್ಲಿ ಮೇವು ಬ್ಯಾಂಕು ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯೂ ಕಳೆದ ಸಾಲಿನ ಬಾಕಿ ಸರ್ಕಾರದ ಆದೇಶ ಪ್ರತಿ ಟನ್ ಗೆ 50 ರೂನಂತೆ ಮೈಸೂರು ಮತ್ತು ಚಾಮರಾಜನಗರ ದಲ್ಲಿ ಸುಮಾರು ಎಂಟು ಕೋಟಿ ರೂ ಬಾಕಿ ಪಾವತಿ ತಕ್ಷಣ ಮಾಡಬೇಕು. ಅದಕ್ಕೂ ಮುನ್ನ ಕಾರ್ಖಾನೆ ಆರಂಭಕ್ಕೆ ಸರ್ಕಾರ, ಜಿಲ್ಲಾಡಳಿತ ರಹದಾರಿ ನೀಡಬಾರದು. ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರ ಜೊತೆ ಕಬ್ಬು ಬೆಳೆಗಾರರ ಸಭೆ ನಡೆಸಿ, ರೈತರಿಗೆ ಹಣ ಪಾವತಿ ಸೂಚನೆ ನೀಡಬೇಕು ಎಂದರು. ಉತ್ತರ ದಕ್ಷಿಣ ಎಂಬ ತರಾತಮ್ಯ ಇರಬಾರದು ಕೇಂದ್ರ ಸರ್ಕಾರ ಈಖP ದರ ಪ್ರತಿ ಟನ್ ಗೆ 3650 ರೂ.10.25 ಕ್ಕೆ ನಿಗದಿ ಮಾಡಿದೆ ಅದರಂತೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆಯವರೇ ಬರಿಸಲಿ ಅದನ್ನು ಬಿಟ್ಟು ಕರ್ನಾಟಕ ದಲ್ಲಿ ದಕ್ಷಿಣ ಭಾಗದ ಕಾರ್ಖಾನೆ ಗಳು ಮಂಡ್ಯ ಮೈಸೂರ್. ಚಾಮರಾಜನಗರ ದಾವಣಗೆರೆ ವರೆಗೆ ರೈತರೆಕಬ್ಬು ಕಟ್ ಮಾಡಿ ಕಾರ್ಖಾನೆ ಯಗೇಟ್ಗೆ ಸಾಗಿಸು ವ ನಿಯಮ ರದ್ದು ಆಗಬೇಕು, ಇದರಿಂದ ರೈತರಿಗೆ ಪ್ರತಿ ಟನ್ ಗೆ 1000 ರೂ. ಕಡಿಮೆ ಸಿಗುತ್ತದೆ . ಈ ಭಾಗದ ರೈತರಿಗೆ ಎಫ್ ಆರ್‌ಪಿ ಆಧಾರದಂತೆ 3650 ರಲ್ಲಿ1% ಕಳೆದು 3300 ರೂ.ರೈತರಿಗೆ ಜಮಾ ಆಗಬೇಕು, ಇಲ್ಲಿ 2000 ರೂ.ಮಾತ್ರ ರೈತರಿಗೆ ಜಮಾ ಆಗುತ್ತಿದೆ ಇದು ನಿಲ್ಲಬೇಕು, ಕೇಂದ್ರ ಈಖP ಯಂತೆ ರೈತರಿಗೆ ಹಣ ಪಾವತಿ ಆಗಬೇಕು. ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಅಧ್ಯಕ್ಷ ರಾಜು, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ,ಖಜಾAಚಿ ರಾಜಣ್ಣ, ಜಿಲ್ಲಾ ಖಜಾಂಚಿ ಮಾದಪ್ಪ, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ , ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ಇತರರು ಹಾಜರಿದ್ದರು