
ಮೈಸೂರು; ಅರಮನೆ ನಗರಿ ಮೈಸೂರು ಸುಂದರವಾಗಿ ಇರಬೇಕಾದರೆ ಜನಗಳ ಸಹಕಾರ ಬೇಕು. ಹಿಂದಿನ ರಾಜರುಗಳು ನಮಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅದನ್ನು ಉಳಿಸಿಕೊಳ್ಳುವಂತ ಕೆಲಸ ನಾವು ಮಾಡಬೇಕು ಎಂದು ಮೈಸೂರು ನಗರಪಾಲಿಕೆಯ ನಿವೃತ್ತ ಆಯುಕ್ತ ಇಬ್ರಾಹಿಂ ಹೇಳಿದರು.
ಶನಿವಾರ ನಗರದ ಸುಬ್ಬರಾಯನ ಕೆರೆಯಲ್ಲಿರುವ ಸ್ವಾತಂತ್ರö್ಯ ಉದ್ಯಾನವನದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಏರ್ಪಡಿಸಿದ್ದ ಜಯ ಚಾಮರಾಜೇಂದ್ರ ಒಡೆಯರ್ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿಗೆ ಸ್ವಚ್ಛತೆ ನಗರಿ ಎಂದು ಎರಡನೇ ಸ್ಥಾನದಲ್ಲಿತ್ತು . ಇದೆಲ್ಲ ಪೌರಕಾರ್ಮಿಕರು ಮತ್ತು ಸಾರ್ವಜನಿಕರ ಸ್ಪಂದನೆಯಾಗಿತ್ತು ಎಂದರು.
ಸಮಾಜ ಸೇವಕ ನಟರಾಜ್ ಜೋಯಿಸ್ ಮಾತನಾಡಿ, ಅಂದಿನ ಮಹಾರಾಜರುಗಳು ಪ್ರಜೆಗಳ ಏಳಿಗೆ ಗಾಗಿಯೇ ದುಡಿಯುತ್ತಿದ್ದರು. ಅವರಿಗೆ ಬಂದAತ ತೆರಿಗೆಯಲ್ಲಿ ಸಮಗ್ರವಾಗಿ ಎಲ್ಲರೂ ಒಂದೇ ರೀತಿ ನೋಡುವಂತೆ ಕೆಲಸಗಳು ಮಾಡುತ್ತಿದ್ದರು. ಅಲ್ಲಿನ ಜನರ ಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡುತ್ತಿದ್ದರು. ಇದೇ ರೀತಿ ಕೆಂಪೇಗೌಡರು ಸಹ ಬೆಂಗಳೂರು ಮತ್ತು ಸುತ್ತಮುತ್ತ ನಗರಗಳಲ್ಲಿ ಇರುವಂತಹ ಕೆರೆಗಳನ್ನು ಜೀವಂತವಾಗಿ ಇರಿಸಲು ಪ್ರಯತ್ನ ಮಾಡಿದರು. ಬೆಂಗಳೂರು ಸುತ್ತಮುತ್ತಲಿನಲ್ಲಿ ಹಳ್ಳಕೊಳ್ಳ ಜಾಗಗಳಲ್ಲಿ ಕೆರೆಯ ಸಮೃದ್ಧಿ ಮಾಡಿ, ಜನರಿಗೆ ಮತ್ತು ಜಾನುವಾರುಗಳಿಗೆ, ವ್ಯವಸಾಯಕ್ಕೆ ನೀರಿನ ಕೊರತೆ ಆಗಬಾರದಂತೆ ಮಳೆ ನೀರನ್ನು ಸಂಗ್ರಹಣೆ ಮಾಡುವುದು ಹೇಗೆ ಎಂದು ನಾಡಪ್ರಭು ಕೊಡಿಗೆ ಕೊಟ್ಟಿದ್ದಾರೆ. ಹಾಗೂ ಅಲ್ಲಿನ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಕೆಲವು ಬಡಾವಣೆಗಳನ್ನು ಸಹ ನಿರ್ಮಾಣ ಮಾಡಿದರು. ಇಂದಿಗೂ ಸಹ ಬೆಂಗಳೂರಿನ ಮೆಜೆಸ್ಟಿಕ್ ಸುತ್ತ ಮುತ್ತಲಿನಲ್ಲಿ ಎಲ್ಲಾ ಜನಾಂಗದವರ ಬೀದಿಗಳು ಇವೆ. ಅವರ ಕುಲಕಸುಬು ಇಂದಿಗೂ ಸಹ ಮಾಡುತ್ತಾ ಬಂದಿದ್ದಾರೆ. ಇಂದಿನ ರಾಜಕಾರಣಿಗಳಿಗೆ ಹೋಲಿಸಿದರೆ, ಹಣ ಮಾಡುವಂತಹ ಆಸೆ ಅವರಿಗೆ ಇರಲಿಲ್ಲ. ತಮ್ಮಲ್ಲಿರುವ ಖಜಾನೆ ಖಾಲಿಯಾಗುವವರೆಗೂ ಸಹ ಜನರ ಕಲ್ಯಾಣಕ್ಕಾಗಿ ಅರ್ಪಿಸುತ್ತಿದ್ದರು. ಎಂದು ಹೇಳಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ತದನಂತರ ಬಂದAತ ಜಯ ಚಾಮರಾಜ ಒಡೆಯರ್ ಅವರು ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಅನೇಕ ಕೊಡಿಗೆ ಗಳನ್ನು ಸಹ ನೀಡಿದ್ದಾರೆ. ಇವತ್ತು ಮಕ್ಕಳು ಸ್ಕೌಟ್ ಅಂಡ್ ಗೈಡ್ ಮೈಸೂರಿನಲ್ಲಿ ಇರುವುದಕ್ಕೆ ಮೂಲ ಕಾರಣವೇ ಜಯ ಚಾಮರಾಜೇಂದ್ರ ಒಡೆಯರ್ ಅವರು. ಬೆಂಗಳೂರಿನಲ್ಲಿ ಎಚ್ ಎಲ್ ಗೆ ವಿಮಾನ ನಿಲ್ದಾಣ ಮಾಡುವುದಕ್ಕೆ ಸಾವಿರಾರು ಎಕರೆ ಜಾಗವನ್ನು ಬಿಟ್ಟು ಕೊಟ್ಟಿದ್ದರು.
ಸಂಗೀತ ಪ್ರಿಯರಾಗಿ ಮೈಸೂರಿನಲ್ಲಿ ಎಷ್ಟು ಕಲೆಗಳಿಗೆ ಜೀವವನ್ನು ತುಂಬಿದರು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ೧೯೪೭ ರಲ್ಲಿ ಸ್ವಾತಂತ್ರ÷್ಯ ಸಂದರ್ಭದಲ್ಲಿ ಎಲ್ಲಾ ರಾಜ್ಯದ ರಾಜರುಗಳು ಪ್ರಜಾ ತ್ಯಾಗ ಮಾಡಬೇಕಾದಾಗ ಒಡೆಯರವರು ಮೊದಲೇ ತಮ್ಮ ರಾಜತ್ವಗೆ ರಾಜೀನಾಮೆ ನೀಡಿದರು. ಇದನ್ನು ಕಂಡ ಜವಾಹರ್ ಲಾಲ್ ನೆಹರು ರವರು ಈಗಿನ ಚೆನ್ನೆöÊ (ಮದ್ರಾಸ್) ರಾಜ್ಯಪಾಲರಾಗಿ ಒಡೆಯರ್ ಅವರನ್ನು ನೇಮಕ ಮಾಡಿದರು ಎಂದು ತಿಳಿಸಿದರು.
ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕಾರಾದ ಸಂಜಯ್ ಮಿರ್ಲೆ, ಶ್ರೀಶ ಭಟ್, ಮಮತಾ ಶ್ರೀ, ರದಿ ಉಲ್ಲಾಖಾನ್, ಗೋವಿಂದ್ ರಾಜ್, ಮುತ್ತು ಶ್ರೀ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪ್ರಶಸ್ತಿಯನ್ನು ಮಹೇಶ್ ದೃಶ್ಯ ಮಾಧ್ಯಮ, ಅಂಬಳೆ ಶಿವಣ್ಣ ಕಲಾವಿದ, ಸತೀಶ್ ಕುಮಾರ್ ಪತ್ರಕರ್ತ, ನರಸಿಂಹ ಮುಂತಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಾಲ ಬೀದಿ ರವಿ, ಮನೋಹರ್, ಸಾಲುಂಡಿ ದೊರೆಸ್ವಾಮಿ,ವೇದಿಕೆ ಪದಾಧಿಕಾರಿಗಳಾದ ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ಎಲ್‌ಐಸಿ ಸಿದ್ದಪ್ಪ, ಹೊನಕೆರೆ ಸ್ವಾಮಿ ,ಗೋವಿಂದರಾಜು ಮಾದಪ್ಪ ,ಸ್ವಾಮಿ ಗೈಡ್, ಶಿವಕುಮಾರ್, ಚಾಮರಾಜು ಮಂಟಕಳ್ಳಿ, ಚಿನ್ನಪ್ಪ, ಶಿವೇಗೌಡ, ಕಾವೇರಮ್ಮ, ಮಾಲಿನಿ, ಚಂದ್ರು, ಶಿವೇಗೌಡ ,ಸ್ವಾಮಿ ಗೈಡ್, ಸುನಿಲ್ ಹಾಜರಿದ್ದರು.