Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಗರಪಾಲಿಕೆಯಿಂದ ಎಸ್‌ಐಆರ್ ಫಾರಂಗಳ ಕುರಿತು ಜಾಗೃತಿ ಹಾಗೂ ಪರಿಶೀಲನೆ


ಮೈಸೂರು; ಭಾರತ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ, ಮೈಸೂರು ಮಹಾನಗರಪಾಲಿಕೆಯ ವತಿಯಿಂದ ಪ್ರತಿ ಮನೆಗೂ ಎಸ್‌ಐಆರ್ ಫಾರಂಗಳು ತಲುಪಿರುವ ಬಗ್ಗೆ ಹಾಗೂ ಸಾರ್ವಜನಿಕರು ಭರ್ತಿ ಮಾಡಿರುವ ಫಾರಂಗಳನ್ನು ಬಿಎಲ್‌ಓಗಳ ಮೂಲಕ ಮರಳಿ ಸಂಗ್ರಹಿಸುವ ಕುರಿತು ನಗರದ ವಿವಿಧ ಪ್ರದೇಶಗಳಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಎಸ್‌ಐಆರ್ ಫಾರಂ ವಿತರಣೆ ಹಾಗೂ ಸಂಗ್ರಹಣೆ ಕುರಿತು ಮಾಹಿತಿ ಪಡೆದು ಪರಿಶೀಲಿಸಿದರು. ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿ, ಯಾವುದೇ ಗೊಂದಲಗಳಿದ್ದಲ್ಲಿ ಸ್ಥಳದಲ್ಲೇ ಸ್ಪಷ್ಟನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್. ವಿಧಾನಸಭಾ ಕ್ಷೇತ್ರದ ಇಆರ್‌ಒ ಹಾಗೂ ಎಇಆರ್‌ಒಗಳು ಸಹ ಉಪಸ್ಥಿತರಿದ್ದು, ಎಸ್‌ಐಆರ್ ಕಾರ್ಯವು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವಂತೆ ಅಗತ್ಯ ಮೇಲ್ವಿಚಾರಣೆ ನಡೆಸಿದರು.
ಮೈಸೂರು ಮಹಾನಗರಪಾಲಿಕೆಯು ಸಾರ್ವಜನಿಕರಿಗೆ ಎಸ್‌ಐಆರ್ ಫಾರಂಗಳನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ, ಬಿಎಲ್‌ಓಗಳಿಗೆ ಹಿಂತಿರುಗಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದೆ.