Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜು.25 ರಿಂದ 28ರ ತನಕ ಇ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಮೈಸೂರು: ಜ್ಯೋತಿನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಜುಲೈ 25,26, 27,28 ರಂದು ಬೆಳಿಗ್ಗೆ 10 ಗಂಟೆಯಿ0ದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಜುಲೈ 25 ರಂದು ಶಕ್ತಿ ಮತ್ತು ಕಾವೇರಿ ಫೀಡರ್ ವ್ಯಾಪ್ತಿಯಲ್ಲಿ ಶಕ್ತಿನಗರ, ಸಾತಗಳ್ಳಿ ಬಡಾವಣೆ, ಕಾವೇರಿ ಮುಖ್ಯ ರಸ್ತೆ, ರಾಘವೇಂದ್ರನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.ಜುಲೈ 26 ರಂದು; ಯಾದವಗಿರಿ ಕೈಗಾರಿಕ ಪ್ರದೇಶ, ಮಂಜುನಾಥಪುರ, ಜಾವಾಸರ್ಕಲ್, ಜಾಯ್‌ಐಸ್‌ಕ್ರೀಮ್ ಪ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆಜುಲೈ 27 ರಂದು ರಾಧಾಕೃಷ್ಣ…

Read More

ನಾನೂ ಸಚಿವ ಸ್ಥಾನದ ಆಕಾಂಕ್ಷಿ; ಶಾಸಕ ಎ.ಆರ್.ಕೃಷ್ಣಮೂರ್ತಿ

ಮೈಸೂರು; ನಾನು ಮೂರನೇ ಬಾರಿ ಶಾಸಕನಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ಬಳಿ ಮನವಿ ಮಾಡಿದ್ದೇನೆ. ಚಾಮರಾಜನಗರ ಜಿಲ್ಲೆಯಲ್ಲಿ ರಾಜುಗೌಡ, ಮಹಾದೇವಪ್ರಸಾದ್, ಪುಟ್ಟರಂಗಶೆಟ್ಟಿ ಸೇರಿದಂತೆ ಅನೇಕರು ಸಚಿವರಾಗಿದ್ದಾರೆ. ಮೀಸಲು ಕ್ಷೇತ್ರದಿಂದ ಗೆದ್ದಿರುವ ನನಗೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.ದೆಹಲಿಯ ಜಂತರ್ ಮಂತರ್‌ನಲ್ಲಿ…

Read More

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಮೈಸೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಕಾಂಗ್ರೆಸ್ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಜೈಲಿನಿಂದ ಕೈದಿಗಳು ಪರಾರಿಯಾದರೆ ಅದಕ್ಕೆ ಅಧಿಕಾರಿಗಳು ಕಾರಣವಾದರೆ,ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಸಚಿವರು ಹೊಣೆಯಾಗಬೇಕಾ? ನಿಮ್ಮ ದ್ವಂದ್ವ ನೀತಿಯ ಬಗ್ಗೆ ಜನರಿಗೆ ಅರ್ಥವಾಗುತ್ತಿದೆ ಎಂದು…

Read More

ಶಕ್ತಿ ದೇವತೆಯ ದರ್ಶನಕ್ಕೆಂದು ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಗಣ

ಮೈಸೂರು: ಆಷಾಢ ಮಾಸ ಎರಡನೇ  ಶುಕ್ರವಾರವಾದ ಇಂದು  ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ನಗರದ  ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಬಂದಿತ್ತು. ಬೆಟ್ಟದ ತಾಯಿಗೆ ಚಾಮುಂಡೇಶ್ವರಿಗೆ  ಲಕ್ಷಿ÷್ಮÃ ಅಲಂಕಾರ ಮಾಡಲಾಗಿದ್ದು, ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿಯನ್ನು ಭಕ್ತರು ಕಣ್ಮನ ತುಂಬಿಕೊAಡರು. ಎರಡನೇ ಆಷಾಢ ಶುಕ್ರವಾರದ ಸಂಭ್ರಮದ ಹಿನ್ನೆಲೆಯಲ್ಲಿ ದೇವಾಲಯದ ಹೊರಭಾಗ ಹಾಗೂ ಒಳಭಾಗಗಳನ್ನು ವಿವಿಧ ರೀತಿಯ ಹೂವುಗಳಿಂದ ಮತ್ತು ಹಣ್ಣುಗಳಿಂದ ಅಲಂಕಾರ ಮಾಡಲಾಗಿದೆ.  ತೋತಾಪುರಿ ಮಾವಿನ ಕಾಯಿ, ಡ್ರಾ÷್ಯಗನ್ ಫ್ರೂಟ್, ವಿವಿಧ ಹಣ್ಣು,…

Read More

ಚಾಮುಂಡೇಶ್ವರಿ ಪೂಜಾ ಮಹೋತ್ಸವ

ಮೈಸೂರು; ಚಾಮುಂಡೇಶ್ವರಿ ಅಮ್ಮನವರ ಎರಡನೇ ಆಷಾಢ ಶುಕ್ರವಾರದ ಅಂಗವಾಗಿ, ಊಟಿ ರಸ್ತೆಯ ಗಣಪತಿ ಆಶ್ರಮದ ಹತ್ತಿರದಲ್ಲಿ ರಾಜ್ಯ ಶಿವಚಕರ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ ಕುಟುಂಬದವರಿAದ 9ನೇ ವರ್ಷದ ಪೂಜಾ ಮಹೋತ್ಸವ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮುಖಂಡರಾದ ಸಿ. ಸಂದೀಪ್, ಮಹೇಶ್, ನಾಗಣ್ಣ, ಮೋಹನ್, ಬಸವರಾಜ, ರಾಜೇಂದ್ರ, ವಿನೋದ್, ರಾಘವೇಂದ್ರ, ಅರುಣ್, ಸರ್ವೇಶ್, ಯಶವಂತ್, ಪ್ರವೀಣ್, ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

ಶ್ರೀ ಸಂಕಲ್ಪ ಸಂತುಷ್ಟ ಯಜ್ಞ ಶಾಲೆ ಉದ್ಘಾಟನೆ

ಮೈಸೂರು; ನಗರದ ಯಾದಗಿರಿಯ ಸಿಎಫ್‌ಟಿಆರ್‌ಐ ಪಕ್ಕದಲ್ಲಿರುವ ಉತ್ತರಾದಿಮಠ ದ ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದ ಪ್ರಾಣದೇವರ ದೇವಸ್ಥಾನದ ಆವರಣದಲ್ಲಿ ಶ್ರೀ ಸಂಕಲ್ಪ ಸಂತುಷ್ಟ ಯಜ್ಞ ಶಾಲೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತರಾದಿಮಠದ ಈ ಕಾರ್ಯಕ್ರಮದ ಬಗ್ಗೆ ಸಂತೋಷ ವಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿ , ಇನ್ನು ಮುಂದೆ ಪ್ರತಿ ಒಬ್ಬರು ಈ ಯಜ್ಞ ಶಾಲೆಯನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.ಈ ವೇಳೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ…

Read More

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನ

ಮೈಸೂರು; ಪುದುಚ್ಚರಿ ವಿಶ್ವ ಇತಿಹಾಸ ಕಾಂಗ್ರೆಸ್ ಮತ್ತು ಮ್ಯಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಜುಲೈ 25 ಮತ್ತು 26 ರಂದು ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ವಿಶ್ವದ ವಿವಿಧ ಭಾಗಗಳಿಂದ ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿತ ಎಂ.ಎಸ್ ತಿಳಿಸಿದರು.ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ…

Read More

ಕಾಂಗ್ರೆಸ್ ಪಕ್ಷವು ಶಾಲಾ- ಕಾಲೇಜುಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ; ಶಿವಕುಮಾರ್

ಮೈಸೂರು: ಕಾಂಗ್ರೆಸ್ ಪಕ್ಷವು ಶಾಲಾ- ಕಾಲೇಜು ಆವರಣವನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಮೈಸೂರಿನ ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಬುಧವಾರ ರಾಹುಲ್ ಗಾಂಧಿ ಅವರ ಬ್ಯಾನರ್ ಅಳವಡಿಕೆ ಹಾಗೂ ಫೋಟೋ ಪ್ರದರ್ಶನ ಮಾಡಿರುವುದು ಖಂಡನೀಯ ಎಂದಿದ್ದಾರೆ.ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ ಮತ್ತು ನಿಯಂತ್ರಣ ಅಧಿನಿಯಮ- 1989ರ ಅನ್ವಯ, ಕಾಲೇಜು ಕ್ಯಾಂಪಸ್ ಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ….

Read More