Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಜೃಂಭಣೆಯಿ0ದ ನಡೆದ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ


*ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ, ಚಿನ್ನದ ಪಲ್ಲಕ್ಕಿಯಲ್ಲಿ ಬೆಟ್ಟದ ತಾಯಿಯ ಮೆರವಣಿಗೆ
*ಇವತ್ತೊಂದೇ ದಿನ ಉತ್ಸವ ಮೂರ್ತಿ, ಮೂಲ ಮೂರ್ತಿಗೆ ಒಂದೇ ರೀತಿಯ ಅಲಂಕಾರ

ಮೈಸೂರು: ಆಷಾಢ ಮಾಸದ ಸಪ್ತಮಿ ರೇವತಿ ನಕ್ಷತ್ರದ ದಿನವಾದ ಮಂಗಳವಾರ ನಾಡ ಶಕ್ತಿ ದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಚಾಮುಂಡಿಬೆಟ್ಟ ಹಾಗೂ ಮೈಸೂರು ನಗರದೆಲ್ಲೆಡೆ ವಿಜೃಂಭಣೆಯಿAದ ಜರುಗಿತು.
ಮೈಸೂರಿನ ರಾಜವಂಶಸ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ 1820ರಲ್ಲಿ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಆಷಾಢ ಮಾಸದ ಸಪ್ತಮಿ ರೇವತಿ ನಕ್ಷತ್ರದ ದಿನ ನೀಡಿದ್ದರು. ಆ ದಿನವನ್ನು ಚಾಮುಂಡಿ ತಾಯಿಯ ವರ್ಧಂತಿ ದಿನ (ಜನ್ಮೋತ್ಸವ) ಎಂದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.
ವರ್ಧಂತಿ ಮಹೋತ್ಸವ ನಡೆಯುವ ದಿನ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹಾಗೂ ಮೂಲ ಮೂರ್ತಿಗೆ ಚಾಮುಂಡೇಶ್ವರಿಗೆ ಒಂದೇ ಅಲಂಕಾರ ಮಾಡುವುದು ವಿಶೇಷ. ಈ ದಿನ ಮುಂಜಾನೆ 3 ಗಂಟೆಯಿAದಲೇ ಚಾಮುಂಡಿ ಬೆಟ್ಟದ ಮೂಲ ಮೂರ್ತಿಗೆ ವಿಶೇಷ ಅಭಿಷೇಕಗಳು , ಎಣ್ಣೆ ಸ್ನಾನ ನೆರವೇರಿಸಿದ ಬಳಿಕ ವಿಶೇಷ ಅಲಂಕಾರ ಮಾಡಿದ ಬಳಿಕ ಮಂಗಳಾರತಿ ನೆರವೇರಿಸಲಾಯಿತು. ನಂತರ 8 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ವರ್ಧಂತಿ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಭಾಗದಲ್ಲಿ ಹಾಗೂ ಮುಂಭಾಗದಲ್ಲಿ ತೆಂಗಿನ ಗರಿ ಮತ್ತು ಭತ್ತದ ತೆನೆ ವಿವಿಧ ಪುಷ್ಪಗಳು ಹಾಗೂ ವಿಶೇಷ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಗೆ ಜರಿ ಸೀರೆ ಉಡಿಸಿ, ಚಿನ್ನ ಹಾಗೂ ವಜ್ರ ಖಚಿತ ಆಭರಣಗಳಿಂದ ಚಾಮುಂಡಿ ಅಲಂಕಾರ ಮಾಡಲಾಯಿತು.
ಈಗಿನ ರಾಜವಂಶಸ್ಥರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಅರಮನೆಯಿಂದ ತರಲಾಗುವ ಚಿನ್ನದ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ವರ್ಧಂತಿಯ ಹಿಂದಿನ ದಿನವಾದ ಸೋಮವಾರ ವಿಶೇಷ ಅಲಂಕಾರ ಮಾಡಿ ಪಲ್ಲಕ್ಕಿಯಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ. ಈ ಮೆರವಣಿಗೆಯಲ್ಲಿ ರಾಜವಂಶಸ್ಥರು ಭಾಗಿಯಾಗುವುದು ವಿಶೇಷವಾಗಿದೆ.
ಅದೇ ರೀತಿ ಇಂದು ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿಯ ಹಿನ್ನೆಲೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಕುಟುಂಬ ಸಮೇತ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ನಾಡಿಗೆ ಒಳ್ಳೆಯ ಮಳೆ-ಬೆಳೆಯಾಗಲಿ ಎಂದು ಬೇಡಿಕೊಂಡರು.
ದೇವಾಲಯದ ಮುಂಭಾಗದಲ್ಲಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ, ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ, ತಾಯಿಗೆ ಚಾಮುಂಡಿಬೆಟ್ಟದ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವರ್ಧಂತಿ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಮುಖ್ಯ ಅರ್ಚಕ ಶಶಿಶೇಖರ್ ದೀಕ್ಷಿತ್ ವಿವರಣೆ ನೀಡಿದರು.
ವಿಶೇಷ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ್ ಒಡೆಯರ್ ಮಾತನಾಡಿ, ಇಂದು ಚಾಮುಂಡಿ ತಾಯಿಯ ವರ್ಧಂತಿ. ರಾಜ ಮನೆತನದ ಕುಲದೇವತೆಯಾದ ತಾಯಿಗೆ ಪೂಜೆ ಸಲ್ಲಿಸಿದ್ದು, ರೇವತಿ ನಕ್ಷತ್ರದಲ್ಲಿ ಬರುವ ಈ ದಿನ ವಿಶೇಷವಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವಿ ಬಳಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.
ವರ್ಧಂತಿಯ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ದೇವಿಯ ದರ್ಶನ ಪಡೆದರು . ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು. ಮೈಸೂರು ನಗರದೆಲ್ಲೆಡೆ ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಅಂಗಡಿಗಳ ಮಾಲೀಕರು, ಆಟೋ ಚಾಲಕರು ಸ್ಭೆರಿದಂತೆ ಹಲವಾರು ಮಂದಿ ತಮ್ಮ ಸ್ಥಳಗಳಲ್ಲಿ ಚಾಮುಂಡೇಶ್ವರಿಯ ಜನ್ಮದಿನೋತ್ಸವವನ್ನು ಆಚರಿಸಿದರು. ಚಾಮುಂಡೇಶ್ವರಿಯ ಭಾವಚಿತ್ರ, ಪ್ರತಿಮೆಯನ್ನಿಟ್ಟು ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು.