Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಶೀಘ್ರವೇ ಸಾವಿರ ಹಾಸಿಗೆ ಸೇವೆ ವಿಸ್ತರಣೆ : ಡಾ. ಬಿ. ದಿನೇಶ್

ಮೈಸೂರು : ಜಯದೇವ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಿದ್ದು, 2026ರ ಅಂತ್ಯದೊಳಗೆ ಸುಮಾರು ಒಂದು ಸಾವಿರ ಹಾಸಿಗೆಗಳ ಹೊಸ ಆಸ್ಪತ್ರೆ ಹಾಗೂ ವಿಸ್ತರಣೆ ಯೋಜನೆಗಳನ್ನು ಆರಂಭಿಸುವ ಗುರಿ ಹೊಂದಿದೆಎAದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಡಾ.ಬಿ. ದಿನೇಶ್ ತಿಳಿಸಿದರು.
ಬೆಂಗಳೂರಿನ ಆಯುಷ್ ಇಲಾಖೆ, ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದಜಯದೇವಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಡಿಯೋ ಯೋಗ ಸಮ್ಮಿತ್ 2026 ರಾಷ್ಟಿçÃಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಈ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಮೈಸೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ, ಬೆಂಗಳೂರಿನ ವಿಜಯನಗರ ಮತ್ತು ಶಿವಾಜಿನಗರದಲ್ಲಿ ಉಪಕೇಂದ್ರಗಳು ಹಾಗೂ ಹುಬ್ಬಳ್ಳಿಯಲ್ಲಿ 450 ಹಾಸಿಗೆಗಳ ಹೃದ್ರೋಗ ಆಸ್ಪತ್ರೆ ಸ್ಭೆರಿದಂತೆ ಒಟ್ಟು ಒಂದು ಸಾವಿರ ಹಾಸಿಗಳ ಸೇವೆಯನ್ನು ಆರಂಭಿಸಲಾಗುವುದು ಎಂದರು.
ಕೃತಕ ಬುದ್ಧಿಮತ್ತೆ ಸ್ಭೆರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಜಯದೇವ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಹೃದಯ ವೈಫಲ್ಯ, ಹೃದಯಾಘಾತ ಮತ್ತುಯೋಗದ ಪರಿಣಾಮಕುರಿತು ಹಲವು ಸಂಶೋಧನೆಗಳು ನಡೆಯುತ್ತಿದ್ದು, ಪ್ರಾಥಮಿಕ ಅಧ್ಯಯನಗಳ ಫಲಿತಾಂಶಗಳು ಆಶಾದಾಯಕವಾಗಿವೆ ಎಂದು ತಿಳಿಸಿದರು.
ಅತಿಯಾದ ವ್ಯಾಯಾಮ ಅಥವಾ ಕೇವಲ ಯೋಗ ಮಾಡದೇ ವಾರದಲ್ಲಿ ಕನಿಷ್ಠ ಐದು ದಿನ 40 ನಿಮಿಷಗಳ ಚುರುಕಿನ ನಡಿಗೆ, ಪ್ರತಿದಿನ ತಾಜಾ ಹಾಗೂ ಪೌಷ್ಟಿಕ ಆಹಾರ, 6 ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ, ಮಾನಸಿಕ ಒತ್ತಡ ಸಮರ್ಪಕ ನಿರ್ವಹಣೆಯಿಂದ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಹೃದಯಾಘಾತ ಮತ್ತು ಹೃದಯ ಸ್ತಂಭನ ಬೇರೆ ಹೃದಯಾಘಾತ ಮತ್ತು ಹೃದಯ ಸ್ತಂಭನಎರಡೂ ವಿಭಿನ್ನ ಸ್ಥಿತಿಗಳಾಗಿವೆ. ಹೃದಯಾಘಾತವಾದರೆ ಮೊದಲ ಮೂರು ಗಂಟೆಗಳೊಳಗೆ ಆಸ್ಪತ್ರೆಗೆದಾಖಲಾದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯ ಸ್ತಂಭನ ಸಂಭವಿಸಿದರೆ ತಕ್ಷಣ ಸಿಪಿಆರ್ ನೀಡುವುದುಅತ್ಯಂತ ಮುಖ್ಯ. ಅಪಘಾತಅಥವಾತುರ್ತು ಪರಿಸ್ಥಿತಿಯಲ್ಲಿ ವಿಡಿಯೊಚಿತ್ರೀಕರಣ ಮಾಡುವ ಬದಲು ಸಿಪಿಆರ್ ಕಲಿತು ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ನೀಡಿದರು.
ಕಾರ್ಯಕ್ರಮವನ್ನುಆಯುಷ್‌ಇಲಾಖೆಯಆಯುಕ್ತಡಾ.ಸುನೀಲ್ ಪನ್ವಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಜಯದೇವಆಸ್ಪತ್ರೆಯ ಮೈಸೂರಿನಅಧೀಕ್ಷಕಡಾ.ಕೆ.ಎಸ್.ಸದಾನಂದ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಆರೋಗ್ಯ ಇಲಾಖೆ ನಿವೃತ್ತ ಸಲಹೆಗಾರಡಾ.ಎಂ.ಎ.ಬಾಲಸುಬ್ರಹ್ಮಣ್ಯA, ಆಕಾಶವಾಣಿಕಾರ್ಯಕ್ರಮ ನಿರ್ವಾಹಕಕೇಶವಮೂರ್ತಿ, ಜಿಎಆರ್‌ಸಿ ಡಾ.ಎಲ್.ಎನ್.ಶೆಣೈ, ಸಿಸಿಆರ್‌ವೈಎನ್‌ನ ಡಾ.ರಾಘವೇಂದ್ರರಾವ್, ಡಾ. ಹರ್ಷ ಬಸಪ್ಪ,ಡಾ. ದೇವರಾಜ್,ಡಾ. ಸಂತೋಷ್, ಡಾ. ಮಂಜುನಾಥ್, ಹಿರಿಯ ಶುಶ್ರೂಷಕರಾದ ಹರೀಶ್‌ಕುಮಾರ್, ಉಮಾ, ಲೋಬೋ, ಪಿಆರ್‌ಒಗಳಾದ ವಾಣಿ ಮೋಹನ್, ಚಂಪಕಮಾಲಾ ಮತ್ತಿತರರು ಹಾಜರಿದ್ದರು.