Day: August 10, 2026
ಕುಡಿಯುವ ನೀರು, ಮೇವು, ನೈರ್ಮಲ್ಯಕ್ಕೆ ಪ್ರಥಮ ಆಧ್ಯತೆ ನೀಡಿ: ಶಾಸಕ ಕೆ. ವೆಂಕಟೇಶ್
ಪಿರಿಯಾಪಟ್ಟಣ: ಬರದ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ತಾಲೂಕಿನ ಈಚೂರು, ಬಾರಸೆ, ಆಯಿತನಹಳ್ಳಿ, ಸೀಗೂರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರಿಸಿ ಮಾತನಾಡಿದ ಅವರು ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಹಾರಂಗಿ ನಾಲೆಯಿಂದ 150 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಈ ನೀರನ್ನು ಜನ ಮತ್ತು ಜಾನುವಾರುಗಳಿಗೆ ಕುಡಿಯಲು ಮಾತ್ರ…
ಹಲವು ಬಡಾವಣೆಗಳಲ್ಲಿ ಆ.11,12ರಂದು ನೀರು ಸರಬರಾಜು ವ್ಯತ್ಯಯ ಮೈಸೂರು: ನಗರಕ್ಕೆ ಕುಡಿಯುವನೀರು ಸರಬರಾಜು ಮಾಡುವ ಮೆಳಾಪುರ ನೀರು ಸರಬರಾಜುಯೋಜನೆಯ ಪ್ರಮುಖ ಕೊಳವೆ ಮಾರ್ಗದಲ್ಲಿತುರ್ತು ದುರಸ್ಥಿಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಆ. 11 ಮತ್ತು 12 ರಂದು ಮೈಸೂರಿನ ಹಲವು ಭಾಗಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.ನಗರ ಪಾಲಿಕೆಯ ವಾರ್ಡ್ ಸಂಖ್ಯೆ 9 ರಿಂದ 16, 28 ರಿಂದ 39, ಹಾಗೂ 52 ಮತ್ತು 53 ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ರಾಜೇಂದ್ರನಗರ, ಸುಭಾಷ್ ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯಗಿರಿ, ರಾಜೀವ್…
ಚಾಮುಂಡಿಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಮೈಸೂರು: ನಗರದ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಪಕ್ಕದ ವಸತಿ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದು ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಚಿರತೆ ಬೀದಿ ನಾಯಿಗಳನ್ನು ಬೇಟೆಯಾಡಲು ಸಮೀಪದ ಚಾಮುಂಡಿಬೆಟ್ಟ ಗ್ರಾಮದ ನಾಯಕರ ಬೀದಿಯ ಮಾರಮ್ಮ ದೇವಾಲಯದ ಬಳಿ ಓಡಾಡುತ್ತಿತ್ತು. ನಾಯಕರ ಬೀದಿಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಗೆ ಬೋನ್ ಇರಿಸಿ ಕಾರ್ಯಾಚರಣೆ…
ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ
ಮೈಸೂರು; ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ಐವರು ವಿದ್ಯಾರ್ಥಿನಿಯರಿಗೆ ಮೈಸೂರಿನ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ.ಆರ್. ಚಾರಿಟಬಲ್ ಟ್ರಸ್ಟ್ನ ನರಸಿಂಹ ಪ್ರಸಾದ್, ವಾದಿರಾಜ್, ಕೃಷ್ಣ ಜಿ.ವಿ., ಹರಿಹರ ದೀಕ್ಷಿತ್, ಅರುಣ್, ಕಾಲೇಜಿನ ಪ್ರಾಚಾರ್ಯರಾದ ಎಚ್. ಸತ್ಯಪ್ರಸಾದ್, ವಿದ್ಯಾರ್ಥಿನಿಯರಾದ ಸಿಂಚನ ಆರ್.ಜೆ., ವಂದನಾ ಎಂ., ಟಿ.ವಿ. ರಜನಿ, ಭುವನ ಹಾಗೂ ನಂದಿತಾ ಎಸ್. ಹಾಜರಿದ್ದರು.
ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಖದೀಮಮೈಸೂರು; ಖದೀಮನೊಬ್ಬ ವೃದ್ಧೆಯೊಬ್ಬರ ಬಳಿಯಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರಿನ ಶಾಂತವೇರಿಗೋಪಾಲಗೌಡ ನಗರದಲ್ಲಿ ನಡೆದಿದೆ. ಶಿವಮ್ಮ (70) ಚಿನ್ನದ ಸರ ಕಳೆದುಕೊಂಡವರು. ಇವರು ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಯುವಕ ಬಂದು ತಳ್ಳಿ ಕೆಳಕ್ಕೆ ಬೀಳಿಸಿ, ಅವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಶಿವಮ್ಮ ಅವರ ಕುತ್ತಿಗೆ ಹಾಗೂ ಕಿವಿಗೆ ಗಾಯವಾಗಿದೆ. ಘಟನೆ ಸಂಬAಧ ಅವರು ನೀಡಿದ ದೂರಿನ ಮೇಲೆ ಆಲನಹಳ್ಳಿ…
ತುಂಬಿ ಹರಿಯುತ್ತಿರುವ ಕಪಿಲಾ ನದಿಗೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಿದ ರೈತರು
ನಂಜನಗೂಡು : ಕೇರಳದ ವೈನಾಡು ಹಾಗೂ ಜಲನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದ, ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಕಾರಣ, ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡಿನಲ್ಲಿ ಕಪಿಲ ನದಿ ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಸೋಮವಾರ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ರೈತ…
- 1
- 2