Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹಲವು ಬಡಾವಣೆಗಳಲ್ಲಿ ಆ.11,12ರಂದು ನೀರು ಸರಬರಾಜು ವ್ಯತ್ಯಯ


ಮೈಸೂರು: ನಗರಕ್ಕೆ ಕುಡಿಯುವನೀರು ಸರಬರಾಜು ಮಾಡುವ ಮೆಳಾಪುರ ನೀರು ಸರಬರಾಜುಯೋಜನೆಯ ಪ್ರಮುಖ ಕೊಳವೆ ಮಾರ್ಗದಲ್ಲಿತುರ್ತು ದುರಸ್ಥಿಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಆ. 11 ಮತ್ತು 12 ರಂದು ಮೈಸೂರಿನ ಹಲವು ಭಾಗಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ನಗರ ಪಾಲಿಕೆಯ ವಾರ್ಡ್ ಸಂಖ್ಯೆ 9 ರಿಂದ 16, 28 ರಿಂದ 39, ಹಾಗೂ 52 ಮತ್ತು 53 ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ರಾಜೇಂದ್ರನಗರ, ಸುಭಾಷ್ ನಗರ, ಎನ್.ಆರ್.ಮೊಹಲ್ಲಾ, ಗಾಂಧಿನಗರ, ಉದಯಗಿರಿ, ರಾಜೀವ್ ನಗರ 1, 2 ಮತ್ತು 3ನೇ ಹಂತ, ಶಾಂತಿನಗರ, ಕಲ್ಯಾಣಗಿರಿ, ಡಾ.ರಾಜ್‌ಕುಮಾರ್‌ರಸ್ತೆಗೆ ಸೇರಿಕೊಂಡ ಬಡಾವಣೆಗಳು, ಯರಗನಹಳ್ಳಿ, ಸಿದ್ದಾರ್ಥ ಬಡಾವಣೆ, ಆಲನಹಳ್ಳಿ, ನಂದಿನಿ ಬಡಾವಣೆ, ಗಿರಿದರ್ಶಿನಿ ಬಡಾವಣೆ, ಗೌಸಿಯಾನಗರ ಮತ್ತು ಕ್ಯಾತಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿಯೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮಹಾನಗರ ಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ ಪೂರ್ವ ವಿಭಾಗದಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.