ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಖದೀಮ
ಮೈಸೂರು; ಖದೀಮನೊಬ್ಬ ವೃದ್ಧೆಯೊಬ್ಬರ ಬಳಿಯಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಮೈಸೂರಿನ ಶಾಂತವೇರಿಗೋಪಾಲಗೌಡ ನಗರದಲ್ಲಿ ನಡೆದಿದೆ. ಶಿವಮ್ಮ (70) ಚಿನ್ನದ ಸರ ಕಳೆದುಕೊಂಡವರು. ಇವರು ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಯುವಕ ಬಂದು ತಳ್ಳಿ ಕೆಳಕ್ಕೆ ಬೀಳಿಸಿ, ಅವರ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಶಿವಮ್ಮ ಅವರ ಕುತ್ತಿಗೆ ಹಾಗೂ ಕಿವಿಗೆ ಗಾಯವಾಗಿದೆ. ಘಟನೆ ಸಂಬAಧ ಅವರು ನೀಡಿದ ದೂರಿನ ಮೇಲೆ ಆಲನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
--°C
Mysore, IN
Loading...