
ಪಿರಿಯಾಪಟ್ಟಣ : ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಅಪಾರವಾದದ್ದು ಎಂದು ಬೆಟ್ಟದಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ನಟರಾಜ ಬಿ ಆರ್ ತಿಳಿಸಿದರು.
ಬೆಟ್ಟದಪುರದ ಎಸ್ ಎಂ ಎಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಪ್ರಾಮಾಣಿಕತೆ ಪ್ರಯತ್ನ ಹಾಗೂ ಪರಿಶ್ರಮಗಳು ಅತ್ಯುತ್ತಮ ವ್ಯಕ್ತಿತ್ವದ ಲಕ್ಷಣಗಳಾಗಿದ್ದು ಅಂತಹ ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುತ್ತದೆ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ನಾಯಕತ್ವ ಗುಣ ಸೇರಿದಂತೆ ಉತ್ತಮ ಗುಣಗಳನ್ನು ಪಡೆಯಲು ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಎಸ್ ಎಂ ಎಸ್ ವಿದ್ಯಾಸಂಸ್ಥೆಯ ಕಾರ್ಯಧ್ಯಕ್ಷರಾದ ಬಿ ವಿ ಮಂಜುನಾಥ್ ಮಾತನಾಡಿ ಪದವಿಪೂರ್ವ ಹಂತದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎಂಬುದು ರಾಜ್ಯಮಟ್ಟದಲ್ಲಿಯೇ ಮೊದಲ ಹಾಗೂ ವಿನೂತನ ಪ್ರಯತ್ನವಾಗಿದ್ದು, ಹಿರಿಯ ವಿದ್ಯಾರ್ಥಿಗಳ ಸೇವಾ ಸಂಕಲ್ಪ ಶ್ಲಾಘನೀಯವಾದದ್ದು ಎಂದು ಹೇಳಿದರು.
ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಕ್ರಮಾಧಿಕಾರಿ ಜ್ಯೋತಿಪ್ರಸಾದ್ ಮಾತನಾಡಿ ವಿದ್ಯಾರ್ಥಿ ಜೀವನದ ನಂತರವೂ ಸ್ವಯಂಸೇವಕರು ಸೇವಾ ಮನೋಭಾವನೆಯ ಮೂಲಕ ಸಮಾಜಮುಖಿಗಳಾಗಿ ಬದುಕಿದಾಗ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಸಾಕಾರಗೊಳ್ಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಂ ಎಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಎ ವಿ ಛಾಯಾ , ಪ್ರಾಂಶುಪಾಲರಾದ ರಾಜು ಎಸ್ ಕೆ, ಮುಖ್ಯ ಶಿಕ್ಷಕರಾದ ವೆಂಕಟೇಶ್ , ಕುಮಾರ್, ಕಾರ್ಯಕ್ರಮಾಧಿಕಾರಿಗಳಾದ ಯಶವಂತ ಕುಮಾರ್, ಸತೀಶ್, ಕುಬೇರ್, ಬಸವರಾಜು ಉಪನ್ಯಾಸರಾದ ರಾಮೇಗೌಡ , ಶಿವಕುಮಾರ್, ವಸಂತ್, ಸುನಿಲ್, ಹರ್ಷಿತಾ, ಪ್ರತಾಪ್, ರಶ್ಮಿ ವಿದ್ಯಾರ್ಥಿ ಸಂಘದ ತರುಣ್ ಸಾಗರ್ ಲಾವಣ್ಯ ಲೇಖನ ಅರಸ್, ಶರತ್, ಹರಿಪ್ರಸಾದ್, ಕಾಂಚನ ಕೆ.ವಿ ತನುಶ್ರೀ ಸೇರಿದಂತೆ ಇತರರು ಇದ್ದರು