Skip to main content

3Kaala News

ಸುಭಾಷಿತ 

ನಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಭಕ್ತಿ ಇದ್ದಾಗ ಮಾತ್ರ ಯಶಸ್ಸು ಒಲಿಯುತ್ತದೆ. ಅರ್ಧಮನಸ್ಸಿನಿಂದ ಮಾಡುವ ಕೆಲಸ ಎಂದಿಗೂ ಪರಿಪೂರ್ಣ ಫಲ ನೀಡಲಾರದು.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಜಪಡೆ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ; ತಾಲೀಮಿನಲ್ಲಿ ಸೈ ಎನಿಸಿಕೊಂಡ ಆನೆಗೆ ಪಟ್ಟ ಗ್ಯಾರಂಟಿ


ಮೈಸೂರು; ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಯ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಆನೆಗಳ ನಡುವೆ ಪೈಪೋಟಿ ನಡೆಯಲಿದೆ. ಕಾಡಿನಿಂದ ನಾಡಾದ ಅರಮನೆ ನಗರಿ ಮೈಸೂರಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಡಲಿರುವ ಗಜಪಡೆಗೆ ನಿತ್ಯವೂ ತಾಲೀಮು ನಡೆಸಲಾಗುತ್ತದೆ. ಇದರಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ನಾಲ್ಕು ಗಂಡಾನೆಗಳು ಪೈಪೋಟಿ ನೀಡಲಿವೆ. ತಾಲೀಮನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರೀತಿಯಿಂದ ನಾನು ಸಮರ್ಥ ಎಂದು ಸಾಬೀತುಪಡಿಸುವ ಆನೆಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ.
ಇಲ್ಲಿಯ ತನಕ ಚಿನ್ನದ ಅಂಬಾರಿಯನ್ನು ಆರು ಭಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಹೊತ್ತು ಸಾಗಿ ಎಲ್ಲರಿಂದಲೂ ಶಬ್ಭಾಶ್ ಗಿರಿಯನ್ನು ಪಡೆದುಕೊಂಡು, ಎಲ್ಲರ ಕಣ್ಮಣಿಯಾಗಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುನನ್ನು ಈ ಬಾರಿ ದಸರಾದಿಂದ ಕೈಬಿಡಲಾಗಿದೆ. ಆತನಿಗೆ ವಯಸ್ಸು ೬೦ ಆಗಿರುವುದರಿಂದ ದಸರಾದಿಂದ ಕೈಬಿಡಲಾಗಿದೆ ಎಂದು ಸಿಸಿಎಫ್ ರವಿಶಂಕರ್ ತಿಳಿಸಿದ್ದಾರೆ.
ದಂತ ಮುರಿದುಕೊಂಡು ಏಕ ದಂತನಾದ ಕಾರಣಕ್ಕೆ ಮೈಸೂರು ದಸರಾದಿಂದ ಅಭಿಮನ್ಯುವನ್ನು ಕೈಬಿಟ್ಟಿಲ್ಲ. ಬದಲಾಗಿ ಸುಪ್ರೀಂಕೋರ್ಟ್ ೬೦ ವರ್ಷ ತುಂಬಿದ ಯಾವುದೇ ಆನೆಗೆ ಭಾರ ಹೊರಿಸಬಾರದು ಎಂದು ಆದೇಶದಲ್ಲಿ ತಿಳಿಸಿದೆ. ಹಾಗಾಗಿ ದಸರಾದಿಂದ ಅಭಿಮನ್ಯವನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ
ಭೀಮ ಆನೆ ಮಸ್ತಿಗೆ ಬಂದಿರುವುದರಿAದ ಅದನ್ನು ಕಾಯ್ದಿರಿಸಲಾಗಿದೆ. ಆತನಿಗೆ ಹತ್ತಿರುವ ಮಸ್ತಿ ಇಳಿದ ಬಳಿಕ, ಆತನ ಚಲನ,ವಲನದ ಪರಿಸ್ಥಿತಿಯನ್ನು ನೋಡಿಕೊಂಡು ದಸರಾಗೆ ಕರೆತರಬೇಕಾ, ಬೇಡವಾ ಎಂಬುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಭೀಮ ಮಸ್ತಿ ಕಡಿಮೆಯಾದ ಬಳಿಕ ದಸರಾ ಮಹೋತ್ಸವಕ್ಕೆ ಕರೆತರುವ ಸಾಧ್ಯತೆ ಇದೆ. ಭೀಮನಿಗೆ ಅಪಾರ ಅಭಿಮಾನಿಗಳಿದ್ದು, ಆತನನ್ನು ದಸರಾದಲ್ಲಿಕಾಣಲು ಜನರು ಉತ್ಸುಕರಾಗಿದ್ದಾರೆ.
ಹಾಗಾಗಿ ಏಕಲವ್ಯ, ಧನಂಜಯ, ಪ್ರಶಾಂತ ಮತ್ತು ಮಹೇಂದ್ರ ಆನೆಗಳು ಕ್ಯಾಪ್ಟನ್ ಸ್ಥಾನದ ಸಂಭಾವ್ಯರಾಗಿದ್ದು, ಇವುಗಳನ್ನು ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ತಾಲೀಮು ಪೂರ್ಣಗೊಳಿಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ತಾಲೀಮು ವೇಳೆ ಆನೆಗಳ ಸಾಮರ್ಥ್ಯ, ಸ್ವಭಾವ ಹಾಗೂ ಕಾರ್ಯಕ್ಷಮತೆಯನ್ನು ಗಮನಿಸಿ ಮುಂದಿನ ಕ್ಯಾಪ್ಟನ್ ಆಯ್ಕೆ ಮಾಡಲಾಗುವುದು. ಜಂಬೂಸವಾರಿ ಮೆರವಣಿಗೆಗೆ ಒಂದು ವಾರ ಬಾಕಿ ಇರುವಾಗ ಚಿನ್ನದ ಅಂಬಾರಿ ಹೊರುವ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು,” ಎಂದು ಸಿಸಿಎಫ್ ರವಿಶಂಕರ್ ಹೇಳಿದರು
ಈ ಬಾರಿ ಎಲ್ಲಾ ಆನೆಗಳಿಗೂ ಇಸಿಜಿ ಪರೀಕ್ಷೆ ನಡೆಸಲಾಗಿದ್ದು, ಆರೋಗ್ಯವಾಗಿವೆ ಎಂದು ತಿಳಿಸಿದರು.