
ಮೈಸೂರು ; ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ನಗರದ ಮಹಾರಾಜ ಮೈದಾನದಲ್ಲಿ ಅಕ್ಟೋಬರ್ 11 ರಿಂದ 25 ರವರೆಗೆ ಆಹಾರ ಮೇಳವನ್ನು ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗುತ್ತದೆ.
ಈ ಜನಪ್ರಿಯ ಆಹಾರ ಮೇಳದಲ್ಲಿ ಭಾಗವಹಿಸಲು ಅರ್ಹ ವ್ಯಕ್ತಿಗಳು, ರೆಸ್ಟೋರೆಂಟ್‌ಗಳು, ಸಾವಯವ ಕೃಷಿಕರು ಹಾಗೂ ಸಂಘ-ಸAಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ದಸರಾ ಆಹಾರ ಮೇಳವು ದಕ್ಷಿಣ ಮತ್ತು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿ, ಭಾರತದ ವಿವಿಧ ರಾಜ್ಯಗಳ ಖಾದ್ಯಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಚೈನೀಸ್, ಇಟಾಲಿಯನ್, ಫ್ರೆಂಚ್, ಟಿಬೆಟಿಯನ್ ಮತ್ತು ಆಫ್ರಿಕನ್ ಆಹಾರ ಪದ್ಧತಿಗಳನ್ನು ಒಂದೇ ಸೂರಿನಡಿ ಉಣಬಡಿಸುವ ವೈವಿಧ್ಯಮಯ ಉದ್ದೇಶವನ್ನು ಹೊಂದಿದೆ.
ಇAದಿನ ಆಧುನಿಕ ಆಹಾರ ಪದ್ಧತಿಯಿಂದ ಸಾರ್ವಜನಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ ಈ ಬಾರಿಯ ಮೇಳದಲ್ಲಿ ನೈಸರ್ಗಿಕ, ಸಾವಯವ ಕೃಷಿ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ರಾಜ್ಯದ ಸಿರಿಧಾನ್ಯ ಬೆಳೆಗಾರರು, ಸಾವಯವ ಕೃಷಿಕರು, ಹಣ್ಣು-ತರಕಾರಿ ಮಾರಾಟಗಾರರು ಮತ್ತು ರೈತ ಒಕ್ಕೂಟಗಳು ಆಹಾರ ಮೇಳದಲ್ಲಿ ಮಳಿಗೆಗಳನ್ನು ತೆರೆದು ತಮ್ಮ ಉತ್ಪನ್ನ ಹಾಗೂ ಅಡುಗೆಗಳನ್ನು ಸಾರ್ವಜನಿಕರಿಗೆ ಪರಿಚಯಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಪಾರಂಪರಿಕ ಹಾಗೂ ವಿಶೇಷ ರುಚಿಯ ಖಾದ್ಯಗಳನ್ನು ಸಿದ್ಧಪಡಿಸುವ ಗೃಹಿಣಿಯರು, ಅಡುಗೆಯವರು, ಹೋಟೆಲ್‌ಗಳು ಮತ್ತು ಸಂಸ್ಥೆಗಳು ಈ ಆಹಾರ ಮೇಳದಲ್ಲಿ ಭಾಗವಹಿಸಬಹುದು. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಪಾಕ್ ರೀತಿಯಲ್ಲೇ ತಮ್ಮ ಖಾಸಗಿ ಖಾದ್ಯಗಳ ಮೌಲ್ಯ ಹಾಗೂ ರುಚಿಯನ್ನು ಜಗತ್ತಿಗೆ ವಿಸ್ತರಿಸಲು ಮತ್ತು ದಸರಾ ಮಹೋತ್ಸವದ ವೈಭವವನ್ನು ಹೆಚ್ಚಿಸಲು ಶ್ರಮಿಸುವ ಸ್ಥಳೀಯ ಹಾಗೂ ಹೊರರಾಜ್ಯದ ಆಸಕ್ತರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಆಸಕ್ತರು ಸೆಪ್ಟೆಂಬರ್ 01 ರಿಂದ 16 ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 19 ರ ಸಂಜೆ 5:30 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಹಾರ ಮೇಳ ಉಪಸಮಿತಿಯ ಉಪ ವಿಶೇಷಾಧಿಕಾರಿ ವೀಣಾ ಬಿ. ಎನ್., ಕಾರ್ಯಾಧ್ಯಕ್ಷ ಜಿ. ಶ್ರೀನಿವಾಸಮೂರ್ತಿ ಅಥವಾ ಕಾರ್ಯದರ್ಶಿ ರವಿಕುಮಾರ್ ಕೆ. ಎಂ. ಅವರನ್ನು ಸಂಪರ್ಕಿಸಬಹುದು. ಸಾಫ್ಟ್ ಡ್ರಿಂಕ್ಸ್, ಐಸ್‌ಕ್ರೀಂ ಮತ್ತು ಮಿನರಲ್ ವಾಟರ್ ಪದಾರ್ಥಗಳಿಗೆ ಪ್ರಾಯೋಜಕತ್ವ ಇರುವುದರಿಂದ ಸದರಿ ಪದಾರ್ಥಗಳಿಗೆ ಅರ್ಜಿಗಳ ವಿತರಣೆ ಇರುವುದಿಲ್ಲ.
ಸಲ್ಲಿಕೆಯಾದ ಅರ್ಜಿಗಳನ್ನು ಖಾದ್ಯಗಳ ಆಧಾರದ ಮೇಲೆ ವಿಂಗಡಿಸಿ, ಸೆಪ್ಟಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಟೌನ್‌ಹಾಲ್‌ನಲ್ಲಿ ಲಾಟರಿ ಮುಖಾಂತರ ಮಳಿಗೆದಾರರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅರ್ಜಿದಾರರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ನಿಗದಿತ ದಿನಾಂಕದೊಳಗೆ ಆಯ್ಕೆಯಾದವರು ಡಿ.ಡಿ ಸಲ್ಲಿಸಬೇಕು. ಡಿ.ಡಿ ನೀಡಲು ತಪ್ಪಿದಲ್ಲಿ ಇತರ ಅರ್ಜಿದಾರರಿಗೆ ಲಾಟರಿ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಹಾಗೂ ಆಹಾರ ಮೇಳ ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.